ಕುಮಾರಸ್ವಾಮಿಯ ಕುತೂಹಲಕಾರಿ ಹೆಜ್ಜೆ…! – ಪಕ್ಷ ಸಂಘಟನೆಗೆ ಗೌಡರ ಚದುರಂದ ದಾಳ

ದಳಪತಿಗಳ ರಾಜಕೀಯ ಹೀಗೇ ಎಂದು ಹೇಳಲು ಬರುವುದಿಲ್ಲ, ಜೊತೆಗೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರ ಮುಂದಿನ ದಾಳ ಹೀಗೇ ಉರುಳುತ್ತದೆ ಎಂದು ಬಲ್ಲವರೂ ಇಲ್ಲ. ಸಮಯಕ್ಕೆ ತಕ್ಕಂತೆ ರಾಜಕೀಯ ನಡೆ ಇಡುವ ಗೌಡ್ರು, ಮುಂದಿನ ಚುನಾವಣೆಗೆ ಎಲ್ಲರಿಗಿಂತ ಮೊದಲೇ ಸಜ್ಜಾಗಿದ್ದಾರೆ.ಎರಡು ಅಸೆಂಬ್ಲಿ ಉಪಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನ ಈಗಾಗಲೇ ಘೋಷಿಸಿದೆ, ಎರಡೂ ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಸಮುದಾಯದವರನ್ನು ಆರಿಸಿರುವುದು ಗಮನಿಸಬೇಕಾದ ವಿಚಾರ. ಹಾಗಂತ, ಈ ಕ್ಷೇತ್ರಗಳಲ್ಲಿ ಮುಸ್ಲಿಮರ ಮತವೇ ನಿರ್ಣಾಯಕ ಎಂದು ಹೇಳಲು ಬರುವುದಿಲ್ಲ.

ಕೇಶವಕೃಪಾ ಡೈರೆಕ್ಷನ್ನಲ್ಲಿ ಸಿಎಂ ಬೊಮ್ಮಾಯಿ ಸರಕಾರ

ಇನ್ನು, 2023ರ ಏಪ್ರಿಲ್, ಮೇ ಆಸುಪಾಸಿನಲ್ಲಿ ನಡೆಯಬೇಕಾಗಿರುವ ಅಸೆಂಬ್ಲಿ ಚುನಾವಣೆಗೆ ಭದ್ರಾವತಿ ಕ್ಷೇತ್ರಕ್ಕೆ ಜೆಡಿಎಸ್ ಈಗಾಗಲೇ ಅಭ್ಯರ್ಥಿಯ ಹೆಸರನ್ನ ಪ್ರಕಟಿಸಿದೆ. ಕಳೆದ ಕೆಲವು ದಿನಗಳಿಂದ, ಜೆಡಿಎಸ್ ತಮ್ಮ ಕಾರ್ಯಕರ್ತರು ಮತ್ತು ಮುಖಂಡರಿಗಾಗಿ ಕಾರ್ಯಾಗಾರವನ್ನ ಆಯೋಜಿಸಿದೆ. ಬಿಡದಿಯ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ತೋಟದ ಮನೆಯಲ್ಲಿ ಜನತಾ ಪರ್ವ, ಮಿಷನ್ 123 ಕಾರ್ಯಾಗಾರ ನಡೆಯುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳನ್ನ ಸಮನಾಗಿ ತರಾಟೆಗೆ ತೆಗೆದುಕೊಳ್ಳುತ್ತಿರುವ ಕುಮಾರಸ್ವಾಮಿ, ಪ್ರಮುಖವಾದ ಹೆಜ್ಜೆಯನ್ನ ಇಟ್ಟಿದ್ದಾರೆ. ಇದು, ಕಾರ್ಯಕರ್ತರು ಬಯಸುತ್ತಿದ್ದ ನಡೆಯೂ ಹೌದು ಎಂದರೆ ತಪ್ಪಾಗಲಾರದು.

ದೇವೇಗೌಡ್ರ ಕುಟುಂಬದ ಎರಡನೇ ತಲೆಮಾರಿನ ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ದೇವೇಗೌಡ್ರ ಕುಟುಂಬದ ಎರಡನೇ ತಲೆಮಾರಿನ ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿಯವರು ರಾಜಕೀಯದಲ್ಲಿ ಇದ್ದರೂ, ಪಕ್ಷ ಸಂಘಟನೆಯ ವಿಚಾರದಲ್ಲಿ ಇಬ್ಬರೂ ಅಷ್ಟಾಗಿ ಮುನ್ನಲೆಯಲ್ಲಿ ಇರಲಿಲ್ಲ. ಪ್ರಜ್ವಲ್ ಅವರು ಹಾಸನಕ್ಕೆ ಸೀಮಿತವಾಗಿದ್ದರೆ, ನಿಖಿಲ್ ರಾಮನಗರದ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದೇ ಹೆಚ್ಚು. ಈಗ, ಇವರಿಬ್ಬರನ್ನು ಪಕ್ಷ ಬಲವರ್ಧನೆಗೆ ಎಚ್ಡಿಕೆ ಮುಂದಕ್ಕೆ ತಂದಿದ್ದಾರೆ.

ಕೆಲವು ದಿನಗಳ ಹಿಂದೆ ಯುವಕರಾದ ಪ್ರಜ್ವಲ್, ನಿಖಿಲ್ ಅವರು ಯಾಕೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆಯನ್ನ ಕುಮಾರಸ್ವಾಮಿಯವರ ಬಳಿ ಮಾಧ್ಯಮದವರು ಕೇಳಿದ್ದರು. “ಇಬ್ಬರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ, ಎಲ್ಲದಕ್ಕೂ ಸಮಯ ಸಂದರ್ಭ ಬರಬೇಕು, ಜೊತೆಗೆ ಅವರಿಬ್ಬರಿಗೂ ತರಬೇತಿ ಕೂಡಾ ಅಷ್ಟೇ ಮುಖ್ಯ”ಎಂದು ಎಚ್ಡಿಕೆ ಹೇಳಿದ್ದರು. ಈಗ ಇವರಿಬ್ಬರು, ಪಕ್ಷದ ಕಾರ್ಯಾಗಾರದಲ್ಲಿ ಬ್ಯೂಸಿಯಾಗಿದ್ದಾರೆ.

ಜೆಡಿಎಸ್ ಕಾರ್ಯಗಾರದಲ್ಲಿ ಹಲವು ಸಮದಾಯದ ಪ್ರತ್ಯೇಕ ಸಭೆಯನ್ನ ದಳಪತಿಗಳು ಆಯೋಜಿಸಿದ್ದರು. ಅದಕ್ಕಿಂತ ಪ್ರಮುಖವಾಗಿ, ಯುವ ಸಮುದಾಯದವರ ಸಭೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. “ಪಕ್ಷದಲ್ಲಿದ್ದು ಸಂಘಟನೆಯಲ್ಲಿ ತೊಡಗಿಸಿಕೊಳ್ಳದ ನಾಯಕರನ್ನ ನಿರ್ದಾಕ್ಷಿಣ್ಯವಾಗಿ ಮೂಲೆಗುಂಪು ಮಾಡಲಾಗುವುದು, ಉತ್ಸಾಹೀ ಯುವಕರಿಗೆ ಪಕ್ಷ ಸಂಘಟನೆಯ ಜವಾಬ್ದಾರಿಯನ್ನ ನೀಡಲಾಗುವುದು”ಎಂದು ಕುಮಾರಸ್ವಾಮಿ ಹೇಳಿದ್ದರು. ಅದರಂತೆ, ಎಚ್ಡಿಕೆ ಹೆಜ್ಜೆಯನ್ನ ಇಟ್ಟಿದ್ದಾರೆ.

ಚುನಾವಣೆಗೆ ಇನ್ನೂ 18/19 ತಿಂಗಳು ಇರುವುದರಿಂದ ಕುಮಾರಸ್ವಾಮಿಯವರ ಯುವಕರಿಗೆ ಪ್ರಾತಿನಿಧ್ಯತೆಯ ವಿಚಾರ, ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದೆ. ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿಯವರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಜವಾಬ್ದಾರಿ ಸಿಗುವುದು ಖಚಿತವಾಗಿರುವುದರಿಂದ, ಸಂಘಟನೆಯ ವಿಚಾರದಲ್ಲಿ ಚುರುಕುಗೊಂಡಿರುವುದು ಮತ್ತು ಯುವ ಕಾರ್ಯಕರ್ತರು ಉತ್ಸಾಹದಿಂದಿರುವುದು ಪಕ್ಷಕ್ಕೆ ಲಾಭವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ಸಿ.ಎಂ ಗೆ "ನಿನ್ನ ಸನಿಹಕೆ"  ಪ್ರೀಮಿಯರ್ ಶೊ ನ ಟಿಕೆಟ್ ನೀಡಿ ಆಹ್ವಾನ.

Wed Oct 6 , 2021
“ನಿನ್ನ ಸನಿಹಕೆ” ಚಿತ್ರ ಡಾ ರಾಜ್ ಮೊಮ್ಮಗಳು ಧನ್ಯ ರಾಮ್‌ಕುಮಾರ್‌ ಅವ್ರ ಚೊಚ್ಚಲ ಚಿತ್ರವಾಗಿದ್ದು, ಈಗಾಗ್ಲೇ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ. ಹೀಗಾಗಿ ರಾಜ್ ಕುಟುಂಬದ ಸದಸ್ಯರು ಕೂಡ ಚಿತ್ರವನ್ನ ಕಣ್ತುಂಬಿಕೊಳ್ಳೊದಕ್ಕೆ ಕಾತುರರಾಗಿದ್ದಾರೆ. ಅಷ್ಟೆ ಅಲ್ಲದೇ ಇಂದು ಸಿ.ಎಂ ಬಸವರಾಜ ಬೊಮ್ಮಾಯಿ ಅವ್ರನ್ನ ಭೇಟಿಮಾಡಿ. ಇದೇ ಸಂದರ್ಭದಲ್ಲಿ ಸಿ.ಎಂ ಬೊಮ್ಮಾಯಿ ಅವ್ರಿಗೆ ಚಿತ್ರದ ಪ್ರೀಮಿಯರ್ ಶೋಗೆ ಟಿಕೆಟ್ ನೀಡಿ ಆಹ್ವಾನಿಸಿದ್ದಾರೆ. ಇದೇ ಗುರುವಾರ ನಡೆಯೋ ಪ್ರೀಮಿಯರ್ ಶೊ ನಲ್ಲಿ ಧನ್ಯ ರಾಮ್‌ಕುಮಾರ್ […]

Advertisement

Wordpress Social Share Plugin powered by Ultimatelysocial