ಸುಳ್ಳು ದಾಖಲೆ ನೀಡಿ ಬಿಪಿಎಲ್, ಅಂತ್ಯೋದಯ ಕಾರ್ಡ್ ಪಡೆದವರಿಗೆ ಬಿಗ್ ಶಾಕ್: 4.13 ಲಕ್ಷ ಪಡಿತರ ಚೀಟಿ ರದ್ದು

ಸುಳ್ಳು ದಾಖಲೆ ನೀಡಿ ಬಿಪಿಎಲ್, ಅಂತ್ಯೋದಯ ಕಾರ್ಡ್ ಪಡೆದವರಿಗೆ ಬಿಗ್ ಶಾಕ್: 4.13 ಲಕ್ಷ ಪಡಿತರ ಚೀಟಿ ರದ್ದು

ಬೆಂಗಳೂರು: ಸುಳ್ಳು ದಾಖಲೆ ನೀಡಿ ಅಕ್ರಮವಾಗಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಪಡೆದವರಿಗೆ ಸರ್ಕಾರ ಶಾಕ್ ನೀಡಿದೆ. ಒಂದೇ ವರ್ಷದಲ್ಲಿ 4.13 ಲಕ್ಷ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ.

ಅಕ್ರಮವಾಗಿ ಪಡಿತರ ಚೀಟಿ ಪಡೆದವರನ್ನು ಪತ್ತೆ ಮಾಡಿದ ಆಹಾರ ಇಲಾಖೆ ಕ್ರಮ ಕೈಗೊಂಡಿದೆ.

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿ ಮೃತಪಟ್ಟಿರುವ 5.25 ಲಕ್ಷ ಸದಸ್ಯರ ಹೆಸರುಗಳನ್ನು ಪಡಿತರ ಚೀಟಿಯಿಂದ ಕೈಬಿಡಲಾಗಿದೆ.

ಅನರ್ಹರು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಗಳನ್ನು ಹಿಂತಿರುಗಿಸುವಂತೆ ಸರ್ಕಾರದಿಂದ ಸಾಕಷ್ಟು ಸಮಯ ನೀಡಲಾಗಿತ್ತು. ಆದರೆ, ಬಹುತೇಕರು ಕಾರ್ಡ್ ವಾಪಸ್ ಮಾಡದ ಹಿನ್ನೆಲೆಯಲ್ಲಿ ಸರ್ಕಾರದಿಂದ ಕ್ರಮಕೈಗೊಳ್ಳಲಾಗಿದೆ.

ತೆರಿಗೆ ಇಲಾಖೆ, ಕಂದಾಯ ಇಲಾಖೆಯಿಂದ ದತ್ತಾಂಶ ಪಡೆದು ಅನರ್ಹ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಪಡಿತರ ಸೋರಿಕೆ ತಡೆಯುವ ನಿಟ್ಟಿನಲ್ಲಿ ಆಹಾರ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅನರ್ಹರು ಸುಳ್ಳು ದಾಖಲೆ ನೀಡಿ ಪಡೆದುಕೊಂಡ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಗಳನ್ನು ಪತ್ತೆ ಮಾಡುವ ಕಾರ್ಯ ಮುಂದುವರೆಸಲಾಗಿದೆ. ಮೃತಪಟ್ಟ ಫಲಾನುಭವಿಗಳ ಹೆಸರನ್ನು ಪತ್ತೆ ಮಾಡಿ ಕೈಬಿಡಲಾಗುತ್ತಿದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರೈತ ಮಹಿಳೆಯರಿಗೆ ಗುಡ್ ನ್ಯೂಸ್

Mon Dec 27 , 2021
ಧಾರವಾಡ: ಪಶುಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆಯಿಂದ ಪ್ರಸಕ್ತ 2021-22ನೇ ಸಾಲಿಗಾಗಿ ವಿಸ್ತರಣಾ ಘಟಕ ಬಲಪಡಿಸುವಿಕೆ ಕಾರ್ಯಕ್ರಮದಡಿಯಲ್ಲಿ, ಹಿತ್ತಲು ಕೋಳಿ ಸಾಕಾಣಿಕೆ ಕೈಗೊಳ್ಳಲು ಆಸಕ್ತ ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಯೋಜನೆಯಡಿಯಲ್ಲಿ ಒಂದು ಘಟಕಕ್ಕೆ ಆರು ವಾರಗಳ ವಯಸ್ಸಿನ ಐದು ಕೋಳಿ ಮರಿಗಳನ್ನು ವಿತರಿಸಲಾಗುವುದು. ಒಂದು ಘಟಕ ವೆಚ್ಚ 550 ರೂ. ಗಳಾಗಿರುತ್ತದೆ. ಜಿಲ್ಲೆಗೆ ಒಟ್ಟು 352 ಘಟಕಗಳ ಗುರಿ ನಿಗದಿ ಪಡಿಸಲಾಗಿದ್ದು, ಸರ್ಕಾರದ ನಿಯಮಾವಳಿಗಳನ್ವಯ ಫಲಾನುಭವಿಗಳ ಆಯ್ಕೆಯಲ್ಲಿ ಪರಿಶಿಷ್ಟ ಜಾತಿ, […]

Advertisement

Wordpress Social Share Plugin powered by Ultimatelysocial