ಅಮಿತ್​ ಷಾ ಬರ್ತಡೇಗೆ ಶುಭಕೋರಿ ಟ್ರೋಲ್​ ಆದ ಸಾರಾ ಅಲಿ ಖಾನ್..!​

ಮುಂಬೈ: ಕಳೆದ 12 ತಿಂಗಳಿಂದ ಬಾಲಿವುಡ್​ ಇಂಡಸ್ಟ್ರಿ ಮಾದಕದ್ರವ್ಯ ನಿಯಂತ್ರಣ ಸಂಸ್ಥೆ (ಎನ್​ಸಿಬಿ) ಹಾಗೂ ಜಾರಿ ನಿರ್ದೇಶನಾಲಯ (ಇಡಿ)ದ ಕಣ್ಗಾವಲಿನಲ್ಲಿದೆ. ಬಾಲಿವುಡ್​ ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಮಾದಕ ಜಾಲದ ನಂಟು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಎರಡು ಸಂಸ್ಥೆಗಳು ತನಿಖೆ ನಡೆಸುತ್ತಿವೆ.

ಈ ಎಲ್ಲ ಬೆಳವಣಿಗೆಯಿಂದ ಬಾಲಿವುಡ್​ ಸೆಲೆಬ್ರಿಟಿಗಳಲ್ಲಿ ಭಯ ಶುರುವಾಗಿದೆ. ಯಾವಾಗ? ಯಾರು? ದಾಳಿ ಮಾಡುತ್ತಾರೆಂಬ ಆತಂಕವಿದೆ. ಅದರಲ್ಲೂ ಇತ್ತೀಚೆಗೆ ಮಾದಕ ಜಾಲ ನಂಟು ಬಾಲಿವುಡ್​ಗೂ ಬೆಸೆದುಕೊಂಡಿರುವುದರಿಂದ ಯುವ ಕಲಾವಿದರಲ್ಲಿ ಆತಂಕ ಆವರಿಸಿದೆ. ಶಾರುಖ್​ ಪುತ್ರ ಆರ್ಯನ್​ ಖಾನ್ ಬಂಧನವಾದ ಬಳಿಕ ಬಾಲಿವುಡ್​ ಬೆದರಿ ಹೋಗಿದೆ. ನಿನ್ನೆಯಷ್ಟೇ ಶಾರುಖ್​ ಮನೆ ಮೇಲೂ ದಾಳಿಯಾಗಿದೆ. ಇದರಿಂದಾಗಿ ಬಾಲಿವುಡ್​ ಮಂದಿ ತುಂಬಾ ಹೆದರಿದ್ದಾರೆ. ಸಾರಾ ಅಲಿ ಖಾನ್​ಗೂ ಇದೇ ಭಯ ಕಾಡುತ್ತಿರಬಹುದು. ಹೀಗಂತ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ​

ನಿನ್ನೆಯಷ್ಟೇ (ಅ.22) ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಾ ಅವರು ಟ್ವೀಟ್​ ಮಾಡುವ ಮೂಲಕ ಅಮಿತ್​ ಷಾ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಆದರೆ, ಇದು ನೆಟ್ಟಿಗರ ಟ್ರೋಲ್​ಗೆ ಗುರಿಯಾಗಿದೆ.

ಎನ್​ಸಿಬಿ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ ಯೋಚನೆ ಮಾಡಬೇಡಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇದೊಂದು ಹೊಸ ದಾರಿ ಎಂದು ಸಮಾಜವಾದಿ ಪಕ್ಷದ ನಾಯಕ ಅಲಿ ಖಾನ್​ ಮಹ್ಮೂದಬಾದ್​ ವ್ಯಂಗ್ಯವಾಡಿದ್ದಾರೆ. ಹೀಗೇ ಅನೇಕರು ಸಾರಾ ಅಲಿಖಾನ್​ ಅವರನ್ನು ಟ್ರೋಲ್​ ಮಾಡಿದ್ದಾರೆ. (ಏಜೆನ್ಸೀಸ್​)

Please follow and like us:

Leave a Reply

Your email address will not be published. Required fields are marked *

Next Post

20 Keys into a Successful Marital relationship

Sun Oct 24 , 2021
The key into a Successful Marital relationship is having an awareness of the particular a successful a person. Many good couples currently have a clear eyesight for their near future. Perhaps they would like to have a considerable piece of property, with a puppy or two operating wild in it. […]

Advertisement

Wordpress Social Share Plugin powered by Ultimatelysocial