ಕೃಷಿ ಕ್ಷೇತ್ರವು ಕೇಂದ್ರ ಬಜೆಟ್​ 2022ರಿಂದ ನಿರೀಕ್ಷೆ ಮಾಡುತ್ತಿರುವ ಪ್ರಮುಖ ಅಂಶವೇನು?

ರೈತರ ಆದಾಯ ಹೆಚ್ಚು ಮಾಡುವ ನಿಟ್ಟಿನಲ್ಲಿ ಏನೆಲ್ಲ ಮಾಡಬಹುದು ಎಂಬ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಕಳೆದ ವರ್ಷ ಕೊನೆಯಲ್ಲಿ ಕೃಷಿ ಕಾನೂನು ತಿದ್ದುಪಡಿ ಹಿಂಪಡೆದ ನಂತರವೂ ಕೃಷಿ ವಲಯದ ಅಭಿವೃದ್ಧಿಗಾಗಿ ಹಲವು ಯೋಜನೆ ತರುವ, ಉತ್ತೇಜನ ನೀಡುವ ನಿರೀಕ್ಷೆ ಕಾಣುತ್ತಿದೆ. ಕೃಷಿ ವಲಯದಲ್ಲಿ ಕೃಷಿ ಆಧಾರಿತ ಉತ್ಪನ್ನಗಳನ್ನು ಪ್ರೋತ್ಸಾಹಿಸಿ ಕಾರ್ಯತಂತ್ರ ರೂಪಿಸುವುದು ಸರ್ಕಾರದ ಯೋಜನೆ ಆಗಿದೆ ಎನ್ನುತ್ತಾರೆ ಅಧಿಕಾರಿಗಳು. ಈ ಸಂಬಂಧವಾಗಿ ಫೆಬ್ರವರಿ 1ನೇ ತಾರೀಕಿನಂದು ಕೇಂದ್ರ ಬಜೆಟ್​ನಲ್ಲಿ ಘೋಷಣೆ ನಿರೀಕ್ಷೆ ಮಾಡಬಹುದಾದಗಿದೆ. ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಹಾಗೂ ಕೃಷಿ ಆಧಾರಿತ ವಸ್ತುಗಳನ್ನು ಬೆಂಬಲಿಸುವುದು ಉದ್ದೇಶವಾಗಿ ಎಂದು ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಫ್ತು ಉತ್ತೇಜನ ಸಾಧ್ಯತೆ
ಭಾರತೀಯ ರೈತರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ನೆರವಾಗಬೇಕು ಎಂಬ ಉದ್ದೇಶದಿಂದ ರಫ್ತಿಗೆ ಬೆಂಬಲ ನೀಡುವುದಕ್ಕೆ ಸರ್ಕಾರ ಮುಂದಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ. ವೈವಿಧ್ಯಮಯ ಕೃಷಿ ಉತ್ಪನ್ನಗಳ ರಫ್ತನ್ನು ಉತ್ತೇಜಿಸುವುದಕ್ಕೆ ಹೆಚ್ಚುವರಿಯಾಗಿ ಸಾಗಣೆ, ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಪ್ರೋತ್ಸಾಹಧನ ಒದಗಿಸುವ ಸಾಧ್ಯತೆ ಕೂಡ ಇದೆ. ಸಂಗ್ರಹ ಹಾಗೂ ಸಾಗಣೆ ಮೂಲಸೌಕರ್ಯ ಸರಷ್ಟಿಸುವುದನ್ನು ಉತ್ತೇಜಿಸುವ ಉದ್ದೇಶಕ್ಕೆ ಆಹಾರ ಸಂಸ್ಕರಣೆಗಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (PLI) 10,900 ಕೋಟಿ ರೂಪಾಯಿ ಮೇಲೆ ನೀಡಬಹುದು ಎನ್ನಲಾಗುತ್ತಿದೆ. ಹಣಕಾಸು ವರ್ಷ 2020ರಲ್ಲಿ ಆಹಾರ ಸಂಸ್ಕರಣೆ ವಲಯದಲ್ಲಿ ಗ್ರಾಸ್ ವ್ಯಾಲ್ಯೂ ಆಯಡೆಡ್ (GVA) 2.24 ಲಕ್ಷ ಕೋಟಿ ರೂಪಾಯಿ. ಒಟ್ಟಾರೆಯಾಗಿ ಶೇ 1.7ರಷ್ಟು ಕೊಡುಗೆ. ಕೃಷಿ ಮತ್ತು ಕೃಷಿ ಆಧಾರಿತ ವಲಯದ ಜಿವಿಎದಲ್ಲಿ ಆಹಾರ ಸಂಸ್ಕರಣೆ ವಲಯದ ಜಿವಿಎ ಶೇ 11.38ರಷ್ಟಿದೆ. ಈ ಪಾಲು ಜಾಸ್ತಿ ಆಗಬೇಕು ಎಂದು ಸರ್ಕಾರ ಬಯಸುತ್ತದೆ.

ಮೌಲ್ಯವರ್ಧನೆ ಮತ್ತು ಕೃಷಿ ಉತ್ಪನ್ನಗಳ ರಫ್ತು ಹೆಚ್ಚು ಸುಸ್ಥಿರವಾದ ರಫ್ತು ಬೆಳವಣಿಗೆಗೆ ದೀರ್ಘವಾದ ಸಮಯ ತೆಗೆದುಕೊಳ್ಳಬಹುದು. ಅದರಲ್ಲೂ ಹೆಚ್ಚಿನ ನೀರಿನ ಅವಲಂಬನೆ ಇರುವ ಅಕ್ಕಿಯಂಥದ್ದನ್ನು ಕಡಿಮೆ ಮಾಡಬಹುದು ಎಂದು ಐಸಿಆರ್​ಎ ಮುಖ್ಯ ಅರ್ಥಶಾಸ್ತ್ರಜ್ಞರಾದ ಅದಿತಿ ನಾಯರ್ ಹೇಳಿದ್ದಾರೆ. ಒಂದೇ ಬೆಳೆ ಮೇಲೆ ಅವಲಂಬಿತ ಆಗಿರುವ ರೈತರಿಗೆ ವೈವಿಧ್ಯಮಯ ಆದಾಯಕ್ಕೆ ಸಂಶೋಧನೆ, ಅಭಿವೃದ್ಧಿ ಹಾಗೂ ಸಾಲದ ಬೆಂಬಲ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಅಧಿಕಾರಿಗಳು ಸೇರಿಸುತ್ತಾರೆ. ಬೇಡಿಕೆ ಅನುಗುಣವಾದ ಚಟುವಟಿಕೆಗೆ ನೀತಿಗಳು ಆದ್ಯತೆ ನೀಡಬೇಕು. ಪ್ರತಿ ಕೃಷಿ ಉತ್ಪನ್ನಕ್ಕೂ ಜಾಗತಿಕ ಮಟ್ಟವನ್ನು ಗಮನದಲ್ಲಿ ಇರಿಸಿಕೊಂಡು, ನೀತಿ ರೂಪಿಸಬೇಕು. ಕೇವಲ ಪ್ರಾದೇಶಿಕ ಅಥವಾ ಸ್ಥಳೀಯ ಆಲೋಚನೆ ಸಾಕಾಗುವುದಿಲ್ಲ ಎನ್ನುತ್ತಾರೆ ಮಹೀಂದ್ರಾ ಅಂಡ್ ಮಹೀಂದ್ರಾದ ಮುಖ್ಯ ಅರ್ಥಶಾಸ್ತ್ರಜ್ಞ ಸಚ್ಚಿದಾನಂದ ಶುಕ್ಲ.

ಅವರು ಹೇಳುವಂತೆ, ಸರಕು ಸಾಗಣೆ, ಶೀತಲಗೃಹ ಸಂಗ್ರಹಾಗಾರ ಇವುಗಳಲ್ಲಿ ಹೂಡಿಕೆ ಮಾಡುವವರಿಗೂ ಪ್ರೋತ್ಸಾಹ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು 2015-16ರಲ್ಲಿ ಘೋಷಣೆ ಮಾಡಿರುವಂತೆ, 2022-23ರ ಹೊತ್ತಿಗೆ ಕೃಷಿಕರ ಆದಾಯ ದುಪ್ಪಟ್ಟು ಆಗಬೇಕು. ಆದರೆ ಕೊವಿಡ್​ ಕಾರಣದಿಂದ ಅವರ ಗುರಿಗೆ ಹಿನ್ನಡೆ ಆಗಿದೆ. ಅಂದಹಾಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸಕ್ತ ಹಣಕಾಸು ವರ್ಷಕ್ಕೆ ಬಜೆಟ್​ನಲ್ಲಿ ಕೃಷಿ ವಲಯಕ್ಕೆ ಘೋಷಿಸಿರುವಂತೆ ಒಂಬತ್ತು ಕ್ರಮದಲ್ಲಿ ಕೃಷಿ ಸಾಲವನ್ನು 16.5 ಲಕ್ಷ ಕೋಟಿ ರೂಪಾಯಿಗೆ ಏರಿಸುವ ಪ್ರಸ್ತಾವ ಕೂಡ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದು ಬೆಂಗಳೂರಿನಲ್ಲಿ 25,595 ಸೇರಿ 41,457 ಮಂದಿಗೆ ಪಾಸಿಟಿವ್;

Tue Jan 18 , 2022
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 41,457 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಅವರು ಮಂಗಳವಾರ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಇಂದು ಪಾಸಿಟಿವ್ ಪ್ರಕರಣಗಳ ಸಂಖ್ಯೆ 41 ಸಾವಿರ ದಾಟುವ ಮೂಲಕ ಪಾಸಿಟಿವ್ ಪ್ರಮಾಣ ಶೇ. 22.30ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಏಳು ಮಂದಿ ಸೇರಿದಂತೆ ರಾಜ್ಯದಲ್ಲಿ ಕೊರೋನಾದಿಂದ ಇಂದು 20 […]

Advertisement

Wordpress Social Share Plugin powered by Ultimatelysocial