ಲಕ್ಸೆಂಬರ್ಗ್ ಮೂಲದ ದೂರಸಂಪರ್ಕ ಕಂಪನಿ SES ಜೊತೆಗೆ ಸಹಭಾಗಿತ್ವಕ್ಕೆ ಮುಂದಾಗಿದೆ.

ದೇಶದ ಟೆಲಿಕಾಂ ವಲಯದಲ್ಲಿ ಹೊಸ ಕ್ರಾ0ತಿ ಮಾಡಿದ ಜಿಯೋ ಇದೀಗ ಹೊಸ ಹೆಜ್ಜೆ ಇಡಲು ಮುಂದಾಗಿದೆ. ತನ್ನ ಬಳಕೆದಾರರಿಗೆ ತಡೆರಹಿತ ಬ್ರಾಡ್‌ಬ್ಯಾಂಡ್‌ ಸೇವೆ ನೀಡುವುದಕ್ಕಾಗಿ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಪ್ರಾರಂಭಿಸುವುದಾಗಿ ಘೋಷಣೆ ಮಾಡಿದೆ. ಇದಕ್ಕಾಗಿ ಲಕ್ಸೆಂಬರ್ಗ್ ಮೂಲದ ದೂರಸಂಪರ್ಕ ಕಂಪನಿ SES ಜೊತೆಗೆ ಸಹಭಾಗಿತ್ವಕ್ಕೆ ಮುಂದಾಗಿದೆ.ಇದರ ಸಹಭಾಗಿತ್ವದಲ್ಲಿ ಭಾರತದಾದ್ಯಂತ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಪ್ರಾರಂಭಿಸುವುದಾಗಿ ಹೇಳಿದೆ.ಬ್ರಾಡ್‌ಬ್ಯಾಂಡ್ಹೌದು, ಜಿಯೋ ಹೊಸ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆ ನೀಡುವುದಕ್ಕೆ ಮುಂದಾಗಿದೆ. ಇದಕ್ಕಾಗಿ SES ಸಹಭಾಗಿತ್ವವನ್ನು ಸಹ ಪಡೆದುಕೊಂಡಿದೆ. ಜಿಯೋ ಸ್ಪೇಸ್ ಟೆಕ್ನಾಲಜಿ ಲಿಮಿಟೆಡ್ ಕಾಂಬಿನೇಶನ್ ಆಫ್‌ ಜಿಯೋ ಸ್ಟೇಷನರಿ (GEO) ಮತ್ತು ಮೀಡಿಯಂ ಅರ್ಥ ಆರ್ಬಿಟ್‌ (MEO) ಸ್ಯಾಟ್‌ಲೈಟ್‌ ನಕ್ಷತ್ರಪುಂಜಗಳ ಸಂಯೋಜನೆಯನ್ನು ನಿಯಂತ್ರಿಸಲಿದೆ. ಹಾಗಾದ್ರೆ ಜಿಯೋ ಘೋಷಣೆ ಮಾಡಿರುವ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್‌ ಸೇವೆ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಜಿಯೋ ಟೆಲಿಕಾಂ ವಲಯದಲ್ಲಿ ಹೊಸ ಕ್ರಾಂತಿಗೆ ಮುಂದಾಗಿದೆ. ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್‌ ಸೇವೆಗಳ ಮೊಲ ಹೊಸ ಅಭಿವೃದ್ದಿ ಪಥಕ್ಕೆ ಹೆಜ್ಜೆ ಇಡಲು ಮುಂದಾಗಿದೆ. ಇನ್ನು ಈ ಬ್ರಾಡ್‌ಬ್ಯಾಂಡ್ ಸೇವೆಯು, ಎಂಟರ್‌ಪ್ರೈಸಸ್, ಮೊಬೈಲ್ ಬ್ಯಾಕ್‌ಹಾಲ್ ಮತ್ತು ರಿಟೇಲ್‌ ಕಸ್ಟಮರ್ಸ್‌ಗೆ ಗರಿಷ್ಠ 100Gbps ವೇಗದೊಂದಿಗೆ ಮಲ್ಟಿ-ಗಿಗಾಬಿಟ್ ಲಿಂಕ್ಸ್‌ ಸಾಮರ್ಥ್ಯವನ್ನು ಹೊಂದಿದೆ ಎಂದು ಜಿಯೋ ಹೇಳಿದೆ. ಸದ್ಯ ಜಿಯೋದ ಹೊಸ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಗೆ ಯಾವುದೇ ಹೆಸರನ್ನು ಸೂಚಿಸಿಲ್ಲ.ಜಿಯೋ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆ ಯಾವುದೇ ಹೆಸರು ಹೊಂದಿಲ್ಲ ನಿಜ, ಆದರೆ ಭಾರತದಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆ ನೀಡಲು ಬಯಸುತ್ತಿರುವ ಎಲೋನ್ ಮಸ್ಕ್‌ನ ಸ್ಟಾರ್‌ಲಿಂಕ್‌ಗೆ ಸೇವೆಗೆ ಪ್ರಬಲ ಪೈಪೋಟಿ ನೀಡಲಿದೆ. ಇನ್ನು ಜಿಯೋ ಎಸ್‌ಇಎಸ್‌ ಸಹಭಾಗಿತ್ವದಲ್ಲಿ 51% ಪಾಲುದಾರಿಕೆಯನ್ನು ಹೊಂದಿದೆ ಎಂದು ಘೋಷಿಸಿದೆ. ಇದರಲ್ಲಿ SES 49% ಪಾಲುದಾರಿಕೆಯನ್ನು ಪಡೆದುಕೊಂಡಿದೆ. ಇನ್ನು SES ಸಂಸ್ಥೆ ಉತ್ತಮ ಗುಣಮಟ್ಟದ ವೀಡಿಯೊ ಕಂಟೆಂಟ್‌ ಮತ್ತು ಪ್ರಪಂಚದಾದ್ಯಂತ ತಡೆರಹಿತ ಕನೆಕ್ಟಿವಿಟಿಯನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. SES ಪ್ರಪಂಚದ ಏಕೈಕ ಬಹು-ಕಕ್ಷೆಯ ಸಮೂಹವನ್ನು ನಿರ್ವಹಿಸುತ್ತದೆ.ಇದಲ್ಲದೆ SES ಸಂಸ್ಥೆ ಉತ್ತಮ ಗುಣಮಟ್ಟದ ಕನೆಕ್ಟಿವಿಟಿ ಸಲ್ಯೂಶನ್‌ ನೀಡುವುದರಲ್ಲಿ ಮುಂಚೂಣಿಯಲ್ಲಿದೆ. ಭೂಮಿಯಲ್ಲಿ, ಸಮುದ್ರದಲ್ಲಿ ಅಥವಾ ಗಾಳಿಯಲ್ಲಿ ಎಲ್ಲ ವಲಯದಲ್ಲೂ ವಿಶ್ವದ ಪ್ರಮುಖ ಸಂಸ್ಥೆಗಳ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ. ದೂರಸಂಪರ್ಕ ಕಂಪನಿಗಳು, ಮೊಬೈಲ್ ನೆಟ್‌ವರ್ಕ್ ಆಪರೇಟರ್‌ಗಳು, ಸರ್ಕಾರಗಳು, ಕನೆಕ್ಟಿವಿಟಿ ಮತ್ತು ಕ್ಲೌಡ್ ಸೇವಾ ಪೂರೈಕೆದಾರರು, ವೀಡಿಯೊ ವೇದಿಕೆ ನಿರ್ವಾಹಕರ ಜೊತೆಗೆ ಒಪ್ಪಂದ ಮಾಡಿದೆ. ಸಿಎಸ್‌ ಕಂಪೆನಿ ಇಲ್ಲಿಯನ ತನಕ 8,500 ಕ್ಕೂ ಹೆಚ್ಚು ಚಾನಲ್‌ಗಳನ್ನು ಹೊಂದಿದೆ.ಜಿಯೋಈ ಸಹಭಾಗಿತ್ವದ ಬಗ್ಗೆ ಮಾತನಾಡಿರುವ ಜಿಯೋ ಡೈರೆಕ್ಟರ್‌ ಆಕಾಶ್ ಅಂಬಾನಿ, ನಾವು ನಮ್ಮ ಫೈಬರ್-ಆಧಾರಿತ ಸಂಪರ್ಕ ಮತ್ತು FTTH ವ್ಯವಹಾರವನ್ನು ವಿಸ್ತರಿಸುವುದನ್ನು ಮುಂದುವರೆಸುತ್ತೇವೆ. ಜೊತೆಗೆ 5G ನಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ. SES ನೊಂದಿಗೆ ಈ ಹೊಸ ಸಹಭಾಗಿತ್ವ ಮಲ್ಟಿಗಿಗಾಬಿಟ್ ಬ್ರಾಡ್‌ಬ್ಯಾಂಡ್‌ನ ಬೆಳವಣಿಗೆಯನ್ನು ಇನ್ನಷ್ಟು ವೇಗಗೊಳಿಸುತ್ತದೆ ಎಂದು ಹೇಳಿದ್ದಾರೆ. ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್‌ ಸೇವೆಯಿಂದ ಹೆಚ್ಚುವರಿ ಕವರೇಜ್ ಮತ್ತು ಸಾಮರ್ಥ್ಯಪಡೆಯಬಹುದು. ದೂರದ ಪಟ್ಟಣಗಳು ಮತ್ತು ಹಳ್ಳಿಗಳು, ಉದ್ಯಮಗಳು, ಸರ್ಕಾರಿ ಸಂಸ್ಥೆಗಳು ಮತ್ತು ಗ್ರಾಹಕರನ್ನು ಹೊಸ ಡಿಜಿಟಲ್ ಇಂಡಿಯಾಕ್ಕೆ ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಲೇಜುಗಳು ಆನ್ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿರುವುದರಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ!!

Mon Feb 14 , 2022
ಮಹಾರಾಷ್ಟ್ರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಮುಂಬೈ ವಿಶ್ವವಿದ್ಯಾನಿಲಯ (ಎಂಯು) ಫೆಬ್ರವರಿ 1 ರಿಂದ ವಿದ್ಯಾರ್ಥಿಗಳಿಗೆ ಆಫ್‌ಲೈನ್ ಮತ್ತು ಆನ್‌ಲೈನ್ ಶಿಕ್ಷಣವನ್ನು ಒದಗಿಸುವಂತೆ ಕಾಲೇಜುಗಳಿಗೆ ನಿರ್ದೇಶನ ನೀಡಿದ್ದರೆ, ರಾಜ್ಯ ಮತ್ತು ಮುಂಬೈನ ಕಾನೂನು ಸೇರಿದಂತೆ ಹಲವು ಕಾಲೇಜುಗಳು ಈಗ ಬೆಳಕಿಗೆ ಬಂದಿವೆ. ಕಾಲೇಜುಗಳು ಈ ಮಾನದಂಡವನ್ನು ಅನುಸರಿಸಲು ವಿಫಲವಾಗಿವೆ. ಇದು ವಿದ್ಯಾರ್ಥಿಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ವಿದ್ಯಾರ್ಥಿ ಸಂಘಕ್ಕೆ ಪತ್ರ ಬರೆಯುವಂತೆ ಒತ್ತಾಯಿಸಿದೆ. ಮುಂಬೈ ಮತ್ತು ಮಹಾರಾಷ್ಟ್ರದಾದ್ಯಂತ […]

Advertisement

Wordpress Social Share Plugin powered by Ultimatelysocial