ಪಿಕೆ, ಟೈಗರ್ ಜಿಂದಾ ಹೈ, ಸಂಜು ದಾಖಲೆಗಳನ್ನು ಮುರಿದ ಕೆಜಿಎಫ್ 2 ಹಿಂದಿ ವರ್ಷನ್!

ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಕೆಜಿಎಫ್: ಚಾಪ್ಟರ್ 2 ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಹೊಸ ದಾಖಲೆ ಬರೆಯುತ್ತಿರುವ ಕೆಜಿಎಫ್: ಚಾಪ್ಟರ್ 2 ಸಿನಿಮಾ ಇದೀಗ ಬಾಲಿವುಡ್ ನಲ್ಲಿ ಇತಿಹಾಸ ನಿರ್ಮಿಸಿದೆ.

ಹಿಂದಿ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಮೂರನೇ ಚಿತ್ರ ಎಂಬ ದಾಖಲೆಗೆ ಕೆಜಿಎಫ್: ಚಾಪ್ಟರ್ 2 ಹಿಂದಿ ವರ್ಷನ್ ಪಾತ್ರವಾಗಿದೆ.

ಅಮೀರ್ ಖಾನ್ ನಟನೆಯ ಪಿಕೆ, ಸಲ್ಮಾನ್ ಖಾನ್ ನಟನೆಯ ಟೈಗರ್ ಜಿಂದಾ ಹೈ ಮತ್ತು ರಣಬೀರ್ ಕಪೂರ್ ನಟನೆಯ ಸಂಜು ಚಿತ್ರದ ಗಳಿಕೆ ದಾಖಲೆಯನ್ನು ಮುರಿದಿದೆ ಎಂದು ಬಾಲಿವುಡ್ ಟ್ರೇಡ್ ಎನಲಿಸ್ಟ್ ತರಣ್ ಆದರ್ಶ್ ಹೇಳಿಕೊಂಡಿದ್ದಾರೆ.

ಎರಡನೇ ವಾರದಲ್ಲಿ ಕೆಜಿಎಫ್ 2 ಹಿಂದಿ ವರ್ಷನ್ ಶುಕ್ರವಾರ 11.56 ಕೋ, ಶನಿವಾರ 18.25 ಕೋ, ರವಿವಾರ 22.68 ಕೋ, ಸೋಮವಾರ 8.28 ಕೋ, ಮಂಗಳವಾರ 7.48 ಕೋ, ಮತ್ತು ಬುಧವಾರ 6.25 ಕೋಟಿ ರೂ. ಗಳಿಸಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಹಿಂದಿ ವರ್ಷನ್ ಒಟ್ಟು 343.13 ಕೋಟಿ ರೂ ಗಳಿಸಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರಿನಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ, ಸಂಜಯ ದತ್, ರವೀನಾ ಟಂಡನ್, ಪ್ರಕಾಶ್ ರೈ ಮೊದಲಾದವರು ನಟಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

'ಬೆಂಕಿ' ಅಂಗಳದಿಂದ ಬಂತು ಬಿರುಗಾಳಿಯಂತಹ ಸಾಂಗ್... ಮೋಹಕ ತಾರೆ ರಮ್ಯಾ ರಿಲೀಸ್ ಮಾಡಿದ್ರು ಅನೀಶ್ ಡ್ಯಾನ್ಸಿಂಗ್ ನಂಬರ್!

Thu Apr 28 , 2022
‘ಬೆಂಕಿ’ ಅಂಗಳದಿಂದ ಬಂತು ಬಿರುಗಾಳಿಯಂತಹ ಸಾಂಗ್… ಮೋಹಕ ತಾರೆ ರಮ್ಯಾ ರಿಲೀಸ್ ಮಾಡಿದ್ರು ಅನೀಶ್ ಡ್ಯಾನ್ಸಿಂಗ್ ನಂಬರ್ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಾಯಕ ನಟ ಅನೀಶ್ ತೇಜೇಶ್ವರ್ ನಟಿಸ್ತಿರುವ ಬಹುನಿರೀಕ್ಷಿತ ಸಿನಿಮಾ ಬೆಂಕಿ ಅಂಗಳದಿಂದ ಮೊದಲ ಗಾನಲಹರಿ ಬಿಡುಗಡೆಯಾಗಿದೆ.ಮೋಹಕ ತಾರೆ ರಮ್ಯಾ ಹಾಡು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.ಒಕೆನಾ ಇದು ಅನೀಶ್ ಡ್ಯಾನ್ಸಿಂಗ್‌ ನಂಬರ್ಸಖತ್ ಕ್ಯಾಚಿ-ಮ್ಯಾಚಿಯಾಗಿರುವ ಒಕೆನಾ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು,ಆನಂದ್ ರಾಜವಿಕ್ರಮ್ ಸಂಗೀತ‌ ನೀಡಿದ್ದು, ಐಶ್ವರ್ಯ […]

Advertisement

Wordpress Social Share Plugin powered by Ultimatelysocial