ಕೆಜಿಎಫ್ 2 ಸಿನಿಮಾಕ್ಕಾಗಿ ಈಗಾಗಲೇ ಅಡ್ವಾನ್ಸ್ ಆಗಿ ಲಕ್ಷಾಂತರ ಮಂದಿ ಬುಕ್ಕಿಂಗ್ ಮಾಡಿದ್ದಾರೆ.

ಈಗಾಗಲೇ ಬಹುತೇಕ ಎಲ್ಲಾ ಥಿಯೇಟರ್‌ಗಳಲ್ಲಿ ಬುಕ್ಕಿಂಗ್ ಫುಲ್‌ ಆಗಿದೆ. ಈ ನಡುವೆ ಕೆಜಿಎಫ್ 2 ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಆರ್‌ಆರ್‌ಆರ್‌ ಸಿನಿಮಾವನ್ನು ಮೀರಿಸುವ ಸಾಧ್ಯತೆ ಇದೆ.

ಇಂದಿನಿಂದ (ಏಪ್ರಿಲ್ 14) ಥಿಯೇಟರ್‌ಗಳಲ್ಲಿ ಕೆಜಿಎಫ್ 2 ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ಇದರ ಅಡ್ವಾನ್ಸ್ ಬುಕ್ಕಿಂಗ್ ಆರ್‌ಆರ್‌ಆರ್‌ ಸಿನಿಮಾಗಿಂತ ಉತ್ತಮವಾಗಿದೆ. ಆರ್‌ಆರ್‌ಆರ್ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳಲ್ಲಿ 1,000 ಕೋಟಿ ($ 131 ಮಿಲಿಯನ್) ದಾಟಿದೆ.

ಆರ್‌ಆರ್‌ಆರ್‌ಗೆ ಹೋಲಿಕೆ ಮಾಡಿದಾಗ ಕೆಜಿಎಫ್ 2 ಮುಂಗಡ ಬುಕ್ಕಿಂಗ್‌ನಲ್ಲಿ 20 ಕೋಟಿ ರೂಪಾಯಿಗಳನ್ನು ತಲುಪುತ್ತಿದೆ. ಈ ಸಿನಿಮಾದ ಬಿಡುಗಡೆಗೂ ಒಂದು ದಿನದ ಮುನ್ನ ಹಿಂದಿ ಆವೃತ್ತಿಯಲ್ಲಿ 5 ಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡಿದೆ. ಬಾಹುಬಲಿ 2: ದಿ ಕನ್‌ಕ್ಲೂಷನ್ (ಹಿಂದಿ ಆವೃತ್ತಿ) ಮುಂಗಡ ಬುಕ್ಕಿಂಗ್‌ನಲ್ಲಿ ಸುಮಾರು 35 ಕೋಟಿ ರೂಪಾಯಿ ಸಂಗ್ರಹಿಸಿತ್ತು ಎಂಬುವುದನ್ನು ಚಲನಚಿತ್ರ ವಿಶ್ಲೇಷಕರು ಉಲ್ಲೇಖ ಮಾಡಿದ್ದಾರೆ.

ಮೊದಲ ದಿನದ ಎಲ್ಲಾ ಶೋ ಹೌಸ್‌ಫುಲ್

ಚೆನ್ನೈನ ಮಲ್ಟಿಪ್ಲೆಕ್ಸ್‌ನ ಕಾಸಿ ಟಾಕೀಸ್‌ನ ಮಾಲೀಕ ವಿಷ್ಣು, ಮುಂಗಡ ಬುಕ್ಕಿಂಗ್‌ಗಳ ಆಧಾರದ ಮೇಲೆ ನೋಡುವಾಗ ಕೆಜಿಎಫ್ 2 ಅಧಿಕ ಆದಾಯ ಸಂಗ್ರಹ ಮಾಡಲಿದೆ ಎಂದು ನಿರೀಕ್ಷಿಸಿದ್ದಾರೆ. “ನಾವು ಕೆಜಿಎಫ್ 2 ಗಾಗಿ ಬೆಳಿಗ್ಗೆ 4 ಗಂಟೆಗೆ ಮೊದಲ ಪ್ರದರ್ಶನವನ್ನು ಪ್ರಾರಂಭಿಸಿದ್ದೇವೆ. ಆರಂಭಿಕ ದಿನಕ್ಕೆ ನಮ್ಮ ಎಲ್ಲಾ ಶೋಗಳು ಹೌಸ್‌ಫುಲ್ ಆಗಿವೆ. ಮೊದಲ ನಾಲ್ಕು ದಿನಗಳ ಎಲ್ಲಾ ಶೋಗಳು ಸೋಲ್ಡ್ ಔಟ್ ಆಗಲಿವೆ,” ಎಂದು ವಿಷ್ಣು ಹೇಳಿದರು.

ದೊಡ್ಡ ಮಲ್ಟಿಪ್ಲೆಕ್ಸ್‌ಗಳಲ್ಲೂ ಇದೇ ಸ್ಥಿತಿ ಇದೆ. ಈ ಬಗ್ಗೆ ಮೀರಜ್ ಸಿನಿಮಾಸ್‌ನ ಎಂಡಿ ಅಮಿತ್ ಶರ್ಮಾ ಮಾತನಾಡಿ, ಮುಂಗಡ ಬುಕ್ಕಿಂಗ್‌ನಲ್ಲಿ ಬಾಹುಬಲಿ 2: ದಿ ಕನ್‌ಕ್ಲೂಷನ್ ಮತ್ತು ಅವೆಂಜರ್ಸ್: ಎಂಡ್‌ಗೇಮ್ ಸೇರಿದಂತೆ ಅತ್ಯುತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರಗಳಿಗೆ ಕೆಜಿಎಫ್ 2 ಸಮೀಪದಲ್ಲಿ ಇದೆ ಎಂದು ತಿಳಿಸಿದ್ದಾರೆ.

“ನಾವು ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮುಂಚಿತವಾಗಿ ಮಾರಾಟ ಮಾಡಿದ್ದೇವೆ. ಆರ್‌ಆರ್‌ಆರ್‌ಗಿಂತ ಅಧಿಕವಾಗಿ ಕೆಜಿಎಫ್ 2 ಸಿನಿಮಾದ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಆರ್‌ಆರ್‌ಆರ್‌ ಪ್ರಚಾರದಿಂದಾಗಿ ಹೆಚ್ಚು ಫೇಮಸ್‌ ಆಯಿತು. ಆದರೆ ಕೆಜಿಎಫ್‌ನ ಮೊದಲ ಆವೃತ್ತಿಯನ್ನು ಜನರು ಈಗಾಗಲೇ ಇಷ್ಟಪಟ್ಟಿದ್ದಾರೆ. ಮುಂದಿನ ಭಾಗದಲ್ಲಿ ಏನಾಗುತ್ತದೆ ಎಂದು ಜನರು ಕಾತುರದಿಂದ ಕಾಯುತ್ತಿದ್ದಾರೆ,” ಎಂದು ತಿಳಿಸಿದ್ದಾರೆ.

ಐದು ಭಾಷೆಗಳು, 6,000 ಪರದೆಗಳು

ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಕೆಜಿಎಫ್ 2, BookMyShow ನಲ್ಲಿ ಮುಂಗಡ ಮಾರಾಟದಲ್ಲಿ 2.5 ಮಿಲಿಯನ್ ಟಿಕೆಟ್‌ಗಳಿಗೂ ಅಧಿಕ ಸೋಲ್ಡ್ ಔಟ್ ಆಗಿದೆ ಎಂದು ನಿಮಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಿಶ್ ಸಕ್ಸೇನಾ ಹೇಳಿದ್ದಾರೆ.

“ಕೆಜಿಎಫ್ 2 ನ ಮುಂಗಡ ಬುಕ್ಕಿಂಗ್ ಆರ್‌ಆರ್‌ಆರ್‌ಗಿಂತ ಅಧಿಕವಾಗಿದೆ,” ಎಂದು ಕ್ಯಾಪಿಟಲ್‌ನ ಸಹಸಂಸ್ಥಾಪಕ ನಿತಿನ್ ಮೆನನ್ ಹೇಳಿದ್ದಾರೆ. ಇನ್ನು ಎಲಾರಾ ಕ್ಯಾಪಿಟಲ್‌ನ ಹಿರಿಯ ವಿಪಿ ಕರಣ್ ತೌರಾನಿ, “ಕೆಜಿಎಫ್ 2 ಆರ್‌ಆರ್‌ಆರ್‌ನ ಸಂಗ್ರಹಣೆಯನ್ನು ಮೀರುವ ಸಾಧ್ಯತೆ ಇದೆ. ಮಾರ್ಚ್ 25 ರಂದು ಬಿಡುಗಡೆಯಾದ ಆರ್‌ಆರ್‌ಆರ್‌ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಪಡೆದ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಪಡೆಯಿತು. ಇದು ಬಾಹುಬಲಿ: ದಿ ಬಿಗಿನಿಂಗ್‌ನ ಕಲೆಕ್ಷನ್‌ಗಳನ್ನು ಮೀರಿಸಿದೆ. ಇದುವರೆಗೆ ಸುಮಾರು 670 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. 720 ಕೋಟಿ ರೂಪಾಯಿಗಳನ್ನು ಮುಟ್ಟುವ ನಿರೀಕ್ಷೆಯಿದೆ,” ಎಂದು ವಿವರಣೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಹುನಿರೀಕ್ಷಿತ 'ಕೆಜಿಎಫ್ 2' ಸಿನಿಮಾ ಇಂದು ಬಿಡುಗಡೆ ಆಗಿದೆ.!

Thu Apr 14 , 2022
‘ಕೆಜಿಎಫ್: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆದ ಮೂರು ವರ್ಷಗಳ ಬಳಿಕ ಈ ಸಿನಿಮಾ ಬಿಡುಗಡೆ ಆಗಿದ್ದು, ಜನ ಬಹುಸಮಯದಿಂದ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದರು. ‘ಕೆಜಿಎಫ್ 1’ ಸಿನಿಮಾಕ್ಕಿಂತಲೂ ದೊಡ್ಡ ಬಜೆಟ್‌ನಲ್ಲಿ, ಬಾಲಿವುಡ್ ತಾರೆಯರನ್ನು ಕರೆತಂದು ‘ಕೆಜಿಎಫ್ 2’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸಂಜಯ್ ದತ್, ರವೀನಾ ಟಂಡನ್ ಅವರನ್ನು ಕರೆತಂದ ಪ್ರಶಾಂತ್ ನೀಲ್ ಅವರಿಗಾಗಿ ವಿಶೇಷ ಪಾತ್ರಗಳನ್ನೆ ಹೆಣೆದಿರುತ್ತಾರೆ ಎಂಬ ನಂಬಿಕೆ ಪ್ರೇಕ್ಷಕರದ್ದು. ಸಂಜಯ್ ದತ್, ‘ಕೆಜಿಎಫ್ 2’ […]

Advertisement

Wordpress Social Share Plugin powered by Ultimatelysocial