ದುರ್ಯೋಧನನ ಪ್ರಾಯೋಪವೇಶ ಸಂಕಲ್ಪ ಪ್ರಸಂಗ.

ಪಾರ್ಥ ದುರ್ಯೋದನನನ್ನು ಕರೆತಂದು ಧರ್ಮಜನ ಚರಣಗಳಲ್ಲಿ ಹಾಕಿದನು. ಚಿತ್ರಸೇನನನ್ನುಕಳಿಸಿಕೊಟ್ಟು ದ್ರೌಪದಿಯನ್ನು ಕರೆದು ದುರ್ಯೋಧನನ ಕಟ್ಟುಗಳನ್ನು ಬಿಚ್ಚಿ ಉಪಚರಿಸುವಂತೆ ಧರ್ಮಜನು ಹೇಳಿದನು. ಅವಳು ತನ್ನ ಜೊತೆಯ ಹೆಣ್ಣುಮಕ್ಕಳ ಸಹಾಯದಿಂದ ಎಲ್ಲವನ್ನೂ ಬಿಡಿಸಿದಳು. ನಿಮ್ಮ ಅರಮನೆಯ ಸೌಲಭ್ಯಗಳನ್ನು ಇಲ್ಲಿ ನೀಡಲಾರೆವು. ಇಲ್ಲಿ ಇವೇ ನಮಗೆಸಿಂಹಾಸನಗಳು ಎಂದು ಹೇಳುತ್ತಾ ನಕ್ಕಳು. ಅವಳ ವ್ಯಂಗ್ಯದ ನುಡಿಗಳು, ಭೀಮನ ಹುಸಿ ನಗು ಮುಂತಾದುವುಗಳಿಂದ ದುರ್ಯೋಧನನಿಗೆ ಅಪಮಾನವಾಯಿತು. ಭಾನುಮತಿ ಬಂದು ನಮಿಸಿದಳು. ಎಲ್ಲರಿಂದ ಬೀಳ್ಕೊಂಡು ಹಸ್ತಿನಾಪುರದತ್ತ ಪಯಣ ಬೆಳೆಸಿದನು. ಊರಿನ ಹೊರಗೆಉಳಿದು ಗಂಗಾತೀರದಲ್ಲಿ ಕುಶಾಸನ ರಚಿಸಿಕೊಂಡು ಎಲ್ಲರನ್ನೂ ಕಳಿಸಿ ತಾನೊಬ್ಬನೇ ಉಳಿದು ಉಪವಾಸ ವ್ರತದಿಂದ ಪ್ರಾಣ ಬಿಡಲು ನಿರ್ಧರಿಸಿದನು.
ಭಾನುಮತಿ ಬಂದು ಅನುನಯಿಸಿದರೂ ಒಪ್ಪಲಿಲ್ಲ. ಆಗಿರುವ ಅವಮಾನ ಸಾಲದೇ, ತನಗೆ ಇನ್ನುಏನೂ ಬೇಡವೆಂದು ಹಠ ಹಿಡಿದನು. ಗಾಂಧಾರಿ, ಧೃತರಾಷ್ಟ್ರ ಬಂದು ಸಮಾಧಾನ ಹೇಳಿದರು. ಕೇಳಲಿಲ್ಲ. ತನಗೆ ಇನ್ನು ಯಾವ ಆಸೆಯೂ ಇಲ್ಲ. ದುಶ್ಶಾಸನನಿಗೆ ಪಟ್ಟ ಕಟ್ಟಿರಿ. ನಾನು ಮತ್ತೊಂದುಬಾರಿ ಧರ್ಮಜನಿಂದ ಹುಟ್ಟಿ ಬಂದಂತಾಯಿತು. ಯುದ್ಧವೂ ಬೇಡ, ಏನೂ ಬೇಡ ಎಂದು ಹೇಳಿಅವರನ್ನು ಕಳಿಸಿದನು.
ಶಕುನಿ, ಕರ್ಣ, ಊರಿನ ಪ್ರಮುಖರು, ಅನುಜರು, ಸೇನಾ ಪ್ರಮುಖರು ಯಾರು ಬಂದುಹೇಳಿದರೂ ಇವನ ದುಗುಡ ಹೋಗಲಿಲ್ಲ. ಸಾಯುವ ಸಂಕಲ್ಪ ಮರೆಯಾಗಲಿಲ್ಲ. ತಮ್ಮದುಶ್ಶಾಸನನು ಬಂದು ನನಗೆ ಯಾವ ರಾಜ್ಯವೂ ಬೇಡ. ನೀನೊಬ್ಬ ಇದ್ದರೆ ಸಾಕು ಎಂದು ಜೋರಾಗಿಅತ್ತನು. ನಿನ್ನೊಡನೆ ನಾನೂ ಸಾಯುವೆನೆಂದನು. ಆದರೂ ದುರ್ಯೋಧನ ಮಣಿಯಲಿಲ್ಲ. ತಮ್ಮನನ್ನು ಸಂತೈಸಿ, ಎಲ್ಲರನ್ನೂ ಗದರಿಸಿ ಕಳಿಸಿ ಒಬ್ಬನೇ ಉಳಿದನು.
ಇದೆಲ್ಲವನ್ನೂ ಗಮನಿಸುತ್ತಿದ್ದ ದಾನವರು ಬಂದು ಅವನನ್ನು ರಸಾತಲಕ್ಕೆ ಎತ್ತಿಕೊಂಡು ಹೋಗಿಅಲ್ಲಿ ಇವನಿಗೆ ತಾವು ಸದಾ ನಿನ್ನ ಕಡೆಯೇ ಇರುತ್ತೇವೆಂದೂ, ನೀನು ಪಾಂಡವರೊಡನೆ ಯುದ್ಧಮಾಡಲೇಬೇಕೆಂದೂ, ಸ್ವಲ್ಪ ಭೂಮಿಯನ್ನೂ ಬಿಟ್ಟುಕೊಡಬಾರದೆಂದೂ ಹೇಳುತ್ತ ಅವನಲ್ಲಿಧೈರ್ಯ ತುಂಬಿದರು. ಈಗ ನಿಧಾನವಾಗಿ ಇವನಿಗೆ ಮನಸ್ಸು ತಿಳಿಯಾಯಿತು. ಸಕಲ ದೈತ್ಯಬಲವೇತನ್ನೊಂದಿಗಿದೆ ಎಂದು ಸಮಾಧಾನ ಆಯಿತು. ಒಪ್ಪಿದನು. ಮತ್ತೆ ಅವನನ್ನು ಮೇಲೆ ತಂದರು. ತನಗಾದ ಲಜ್ಜೆಯನ್ನೂ, ಅವಮಾನವನ್ನೂ ಮರೆತ ದುರ್ಯೊಧನನು ಅರಮನೆಗೆ ಪ್ರವೇಶಮಾಡಿದನು. ಎಲ್ಲರಿಗೂ ಸಂತೋಷವಾಯಿತು. ಶಾಂತಿಗಾಗಿ ದೊಡ್ಡ ಯಾಗವನ್ನು ನಡೆಸಲಾಯಿತು.
ಈ ಎಲ್ಲ ಸಂಗತಿಗಳನ್ನು ಅಡಿಗಡಿಗೆ ನಗುತ್ತ ಆಲಿಸಿದ ಪಾಂಡವರು ಎಲ್ಲವೂ ದೈವಲೀಲೆಯೆಂದುಲಕ್ಷ್ಮೀಲೋಲನನ್ನು ನೆನೆಯುತ್ತಿದ್ದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದ ಕೆಲವು ಭಾಗಗಳಲ್ಲಿ ಶಾಖದ ಅಲೆ, ತೆಲಂಗಾಣದ ನಲ್ಗೊಂಡದಲ್ಲಿ ಗರಿಷ್ಠ ತಾಪಮಾನ 43.5 ಡಿಗ್ರಿ!

Fri Mar 18 , 2022
ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಎರಡು ದಿನಗಳ ಕಾಲ ಶಾಖದ ಅಲೆಯು ಕ್ರಮೇಣ ಕಡಿಮೆಯಾಗುವ ಮೊದಲು ಮುಂದುವರಿಯುತ್ತದೆ ಎಂದು ಭವಿಷ್ಯ ನುಡಿದಿದೆ. ಕೆಲವು ಭಾಗಗಳಲ್ಲಿ ತೀವ್ರತರವಾದ ಶಾಖದ ಅಲೆ ಮತ್ತು ದೇಶದ ಇತರ ಹಲವು ಪಾಕೆಟ್‌ಗಳಲ್ಲಿ ಶಾಖದ ಅಲೆಯು ಗುರುವಾರ, ಮಾರ್ಚ್ 17 ರಂದು ಐದನೇ ದಿನವೂ ಮುಂದುವರೆದಿದೆ, ಭಾರತ ಹವಾಮಾನ ಇಲಾಖೆ (IMD) ಇದು ಕ್ರಮೇಣ ಕಡಿಮೆಯಾಗುವ ಮೊದಲು ಮುಂದಿನ 48 ಗಂಟೆಗಳ ಕಾಲ ಮುಂದುವರಿಯುತ್ತದೆ ಎಂದು […]

Advertisement

Wordpress Social Share Plugin powered by Ultimatelysocial