ಪಿಎಸ್‍ಎಲ್‍ವಿ ಸಿ 53 ಉಡಾವಣೆ ಯಶಸ್ವಿ : ಇಸ್ರೋ ಸಂಸ್ಥೆಯನ್ನು ಶ್ಲಾಘಿಸಿದ ಮೋದಿ

 

ನವದೆಹಲಿ : ಭಾರತದ ಸ್ಟಾರ್ಟ್ ಅಪ್ ಸಂಸ್ಥೆಗಳ ಎರಡು ಪೇಲೋಡ್‍ಗಳನ್ನು ಒಳಗೊಂಡ ಪಿಎಸ್‍ಎಲ್‍ವಿ ಸಿ 53 ಯಶಸ್ವಿ ಉಡಾವಣೆ ಮಾಡಿದ್ದಕ್ಕಾಗಿ ಇಸ್ರೋ ಸಂಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಈ ಯಶಸ್ಸು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಭಾರತೀಯ ಕಂಪನಿಗಳು ಬಾಹ್ಯಾಕಾಶವನ್ನು ತಲುಪಲು ಸಹಾಯ ಮಾಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಸ್ರೋ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಒಂದೇ ವಾರದಲ್ಲಿ ಎರಡನೇ ವಾಣಿಜ್ಯ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಪಿಎಸ್‍ಎಲ್‍ವಿ ಸಿ 53 ನಲ್ಲಿ ಮೂರು ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿ, ನಿಖರವಾಗಿ ಕಕ್ಷೆ ಸೇರ್ಪಡೆ ಮಾಡಿದೆ.

ಪಿಎಸ್‍ಎಲ್‍ವಿ ಅಂತರಿಕ್ಷಾ ಪ್ರಯೋಗಾಲಯ ಮಾದರಿ ಒಟ್ಟು ಆರು ಪ್ಲೇಲೋಡ್‍ಗಳನ್ನು ರವಾನೆ ಮಾಡಿದೆ. ಅದರಲ್ಲಿ ದಿಗಂತರಾ ಮತ್ತುಧೃವ ಎಂಬ ಎರಡು ಬಾಹ್ಯಾಕಾಶ ಸಂಸ್ಥೆಗಳ ಸ್ಟಾರ್ಟ್ ಅಪ್‍ಗಳ ಪ್ಲೇಲೋಡ್‍ಗಳು ಸೇರಿವೆ.

ಇನ್-ಸ್ಪೇಸ್ ಮತ್ತು ನ್ಯೂಸ್‍ಪೇಸ್ ಇಂಡಿಯಾ ಲಿಮಿಟೆಡ್ (ಎನ್‍ಎಸ್‍ಐಎಲ್) ಪಿಎಸ್‍ಎಲ್‍ವಿ ಸಿ53 ಯೋಜನೆ ಮೂಲಕ ಮೈಲಿಗಲ್ಲು ಸಾಸಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಇಸ್ರೋ ಮತ್ತು ಎನ್‍ಎಸ್‍ಐಎಲ್‍ಗೆ ಅಭಿನಂದನೆ ತಿಳಿಸಿರುವ ಪ್ರಧಾನಿ ಭವಿಷ್ಯದಲ್ಲಿ ಭಾಹ್ಯಾಕಾಶ ಸಂಶೋಧನೆ ಭಾರತಕ್ಕೆ ಮತ್ತಷ್ಟು ಹತ್ತಿರವಾಗಲಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಳುವ ಸರ್ಕಾರ ಈ ವಾತಾವರಣವನ್ನು ಸೃಷ್ಟಿಸಿದೆ' : ರಾಹುಲ್ ಗಾಂಧಿ

Fri Jul 1 , 2022
ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ನೂಪುರ್ ಶರ್ಮಾಗೆ ಸುಪ್ರೀಂ ಕೋರ್ಟ್‌ಗೆ ತಮ್ಮ ಮೇಲಿನ ಎಲ್ಲಾ ದೂರುಗಳನ್ನು ಒಂದೇ ಕಡೆ ವರ್ಗ ಮಾಡುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಪ್ರವಾದಿಗಳ ವಿರುದ್ಧ ಮಾಡಿರುವ ಹೇಳಿಕೆ ಒಂದು ಕೀಳು ಮಟ್ಟದ ಪ್ರಚಾರ ಪಡೆಯುವ ಉದ್ದೇಶ ಹೊಂದಿರಬೇಕು ಅಥವಾ ನೀಚ ಕೆಲಸದ ಉದ್ದೇಶ ಹೊಂದಿರಬೇಕು ಎಂದು ತರಾಟೆಗೆ ತೆಗೆದುಕೊಂಡಿದೆ. ಈ ಕುರಿತು ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ದೇಶದಲ್ಲಿ ಕೋಪ […]

Advertisement

Wordpress Social Share Plugin powered by Ultimatelysocial