ಕಾಬೂಲ್​​ನಿಂದ ಬರುತ್ತಿದ್ದ ವಿಮಾನಗಳನ್ನು ಸ್ಥಗಿತಗೊಳಿಸಿದ ಪಾಕಿಸ್ತಾನ ಇಂಟರ್​​ನ್ಯಾಶನಲ್​ ಏರ್​ಲೈನ್ಸ್​​

ಕಾಬೂಲ್​​ನಿಂದ ಪಾಕಿಸ್ತಾನಕ್ಕೆ ಬರುತ್ತಿದ್ದ ಮತ್ತು ಇಲ್ಲಿಂದ ಕಾಬೂಲ್​​ಗೆ ಹೋಗುತ್ತಿದ್ದ ಎಲ್ಲ ವಿಮಾನಗಳ ಹಾರಾಟವನ್ನೂ ಸ್ಥಗಿತಗೊಳಿಸುವುದಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ (PIA) ಇಂದು ಹೇಳಿದೆ. ಹಾಗೇ, ತಾಲಿಬಾನಿಗಳ ಮಿತಿಮೀರಿದ ಹಸ್ತಕ್ಷೇಪ, ಅನಿಯಂತ್ರಿತ ನಿಯಮ ಬದಲಾವಣೆ, ಮತ್ತು ಅಲ್ಲಿನ ಸಿಬ್ಬಂದಿಯ ಬೆದರಿಕೆ, ವಿಪರೀತ ಎನ್ನಿಸುವಷ್ಟು ಕಟ್ಟುನಿಟ್ಟಿನ ನಿಯಮಗಳೇ ಇದಕ್ಕೆ ಕಾರಣ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಅಫ್ಘಾನಿಸ್ತಾನದ ಅತಿದೊಡ್ಡ ಖಾಸಗಿ ವಾಹಕವಾದ ಕಾಮ್​ ಏರ್​ ಮತ್ತು ಪಿಐಎ​ (ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ)ಗೆ ಇತ್ತೀಚೆಗಷ್ಟೇ ತಾಲಿಬಾನ್​ ಒಂದು ಎಚ್ಚರಿಕೆ ನೀಡಿದೆ. ‘ನೀವು ವಿಮಾನ […]ಕಾಬೂಲ್​​ನಿಂದ ಪಾಕಿಸ್ತಾನಕ್ಕೆ ಬರುತ್ತಿದ್ದ ಮತ್ತು ಇಲ್ಲಿಂದ ಕಾಬೂಲ್​​ಗೆ ಹೋಗುತ್ತಿದ್ದ ಎಲ್ಲ ವಿಮಾನಗಳ ಹಾರಾಟವನ್ನೂ ಸ್ಥಗಿತಗೊಳಿಸುವುದಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ (PIA) ಇಂದು ಹೇಳಿದೆ. ಹಾಗೇ, ತಾಲಿಬಾನಿಗಳ ಮಿತಿಮೀರಿದ ಹಸ್ತಕ್ಷೇಪ, ಅನಿಯಂತ್ರಿತ ನಿಯಮ ಬದಲಾವಣೆ, ಮತ್ತು ಅಲ್ಲಿನ ಸಿಬ್ಬಂದಿಯ ಬೆದರಿಕೆ, ವಿಪರೀತ ಎನ್ನಿಸುವಷ್ಟು ಕಟ್ಟುನಿಟ್ಟಿನ ನಿಯಮಗಳೇ ಇದಕ್ಕೆ ಕಾರಣ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

ಅಫ್ಘಾನಿಸ್ತಾನದ ಅತಿದೊಡ್ಡ ಖಾಸಗಿ ವಾಹಕವಾದ ಕಾಮ್​ ಏರ್​ ಮತ್ತು ಪಿಐಎ​ (ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ)ಗೆ ಇತ್ತೀಚೆಗಷ್ಟೇ ತಾಲಿಬಾನ್​ ಒಂದು ಎಚ್ಚರಿಕೆ ನೀಡಿದೆ. ‘ನೀವು ವಿಮಾನ ಪ್ರಯಾಣದ ಟಿಕೆಟ್​ ದರ ವಿಪರೀತವಾಗಿದೆ. ಈ ದರ ಅಫ್ಘಾನಿಸ್ತಾನದ ಬಹುತೇಕ ಜನರ ಕೈಗೆಟಕುತ್ತಿಲ್ಲ. ನೀವದನ್ನು ಕಡಿತಗೊಳಿಸಲು ಒಪ್ಪಿಕೊಳ್ಳದೆ ಹೋದರೆ, ನಿಮ್ಮ ಅಫ್ಘಾನ್​ ವಿಮಾನ ಕಾರ್ಯಾಚರಣೆಗೆ ನಿರ್ಬಂಧ ಹೇರುತ್ತೇವೆ’ ಎಂದು ಹೇಳಿತ್ತು.

ಕಾಬೂಲ್​ ಏರ್​ಪೋರ್ಟ್​​ನಿಂದ ಸದ್ಯ ನಿಯಮಿತವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಏಕೈಕ ಸಂಸ್ಥೆಯೆಂದರೆ ಅದು ಪಿಐಎ ಮಾತ್ರ ಆಗಿತ್ತು. ಅದು ಚಾರ್ಟರ್ಡ್​ ವಿಮಾನಗಳ ಹಾರಾಟ ನಡೆಸುತ್ತಿತ್ತು. ಅಂದರೆ ವೇಳಾಪಟ್ಟಿಗೆ ಅನುಸಾರವಾಗಿ ಯಾವುದೇ ವಿಮಾನಗಳೂ ಹಾರಾಟ ನಡೆಸುವುದಿಲ್ಲ. ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳು, ಮಿಷನ್​​ಗಳ ಮನವಿಯ ಮೇರೆಗೆ ತಾವು ವಿಮಾನ ಹಾರಾಟ ನಡೆಸುತ್ತಿರುವುದಾಗಿಯೂ ಪಿಐಎ ಹೇಳಿಕೊಂಡಿತ್ತು

Please follow and like us:

Leave a Reply

Your email address will not be published. Required fields are marked *

Next Post

ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ ಹಂಪಿ ಸ್ಮಾರಕಗಳು

Thu Oct 14 , 2021
ಹೊಸಪೇಟೆ (ವಿಜಯನಗರ): ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ನೂರು ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿದ ಪ್ರಯುಕ್ತ ಇಲ್ಲಿನ ವಿಶ್ವಪ್ರಸಿದ್ಧ ಹಂಪಿ ಸ್ಮಾರಕಗಳಿಗೆ ತ್ರಿವರ್ಣ ಧ್ವಜ ಹೋಲುವ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಹಂಪಿ ಕಲ್ಲಿನ ರಥ, ವಿಜಯ ವಿಠಲ ದೇವಸ್ಥಾನ, ಕಲ್ಲಿನ ರಥ, ಆನೆ ಸಾಲು ಮಂಟಪ ಸ್ಮಾರಕಗಳಿಗೆ ಅಲಂಕಾರ ಮಾಡಲಾಗಿದ್ದು ಎಲ್ಲರ ಗಮನ ಸೆಳೆಯುತ್ತಿವೆ. ನೂರು ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿರುವ ಸವಿನೆನಪಿನಲ್ಲಿ ದೇಶದ ಆಯ್ದ ಪ್ರಮುಖ ಸ್ಮಾರಕಗಳಿಗೆ […]

Advertisement

Wordpress Social Share Plugin powered by Ultimatelysocial