ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ ಹಂಪಿ ಸ್ಮಾರಕಗಳು

ಹೊಸಪೇಟೆ (ವಿಜಯನಗರ): ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ನೂರು ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿದ ಪ್ರಯುಕ್ತ ಇಲ್ಲಿನ ವಿಶ್ವಪ್ರಸಿದ್ಧ ಹಂಪಿ ಸ್ಮಾರಕಗಳಿಗೆ ತ್ರಿವರ್ಣ ಧ್ವಜ ಹೋಲುವ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಹಂಪಿ ಕಲ್ಲಿನ ರಥ, ವಿಜಯ ವಿಠಲ ದೇವಸ್ಥಾನ, ಕಲ್ಲಿನ ರಥ, ಆನೆ ಸಾಲು ಮಂಟಪ ಸ್ಮಾರಕಗಳಿಗೆ ಅಲಂಕಾರ ಮಾಡಲಾಗಿದ್ದು ಎಲ್ಲರ ಗಮನ ಸೆಳೆಯುತ್ತಿವೆ.

ನೂರು ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿರುವ ಸವಿನೆನಪಿನಲ್ಲಿ ದೇಶದ ಆಯ್ದ ಪ್ರಮುಖ ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಅದರಲ್ಲಿ ಹಂಪಿ ಸ್ಮಾರಕಗಳು ಸೇರಿವೆ. ಅ. 17ರ ವರೆಗೆ ದೀಪಾಲಂಕಾರ ಇರಲಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಅನಿರುದ್ಧ ದೇಸಾಯಿ ತಿಳಿಸಿದ್ದಾರೆ.

ಸಾಲು ಸಾಲು ರಜೆ, ವಾರಾಂತ್ಯದಿಂದ ಹಂಪಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದು, ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಸ್ಮಾರಕಗಳನ್ನು ಕಣ್ತುಂಬಿಕೊಳ್ಖುವ ಅವಕಾಶ ಒಲಿದಿದೆ.

Please follow and like us:

Leave a Reply

Your email address will not be published. Required fields are marked *

Next Post

ಜಂಬೂಸವಾರಿ ಆರಂಭಕ್ಕೆ ಕ್ಷಣಗಣನೆ

Thu Oct 14 , 2021
ಮೈಸೂರು: ಮೈಸೂರು ದಸರಾ ಮಹೋತ್ಸವಕ್ಕೆ ಆರಂಭಕ್ಕೆ ಕ್ಷಣಗಣನೆ. ಜಂಬೂಸವಾರಿಯಲ್ಲಿ ಆನೆಗಳಷ್ಟೇ ಅಲ್ಲದೆ ಸ್ತಬ್ಧ ಚಿತ್ರಗಳು ಆಕರ್ಷಣೆಯಾಗಿದೆ. ಈ ಬಾರಿ ಮೆರವಣಿಗೆಯಲ್ಲಿ 6 ಸ್ತಬ್ಧ ಚಿತ್ರಗಳ ಜೊತೆಗೆ ನೂರಾರು ಜಾನಪದ ಕಲಾವಿದರು ಹೆಜ್ಜೆ ಹಾಕಲಿದ್ದಾರೆ. ಶುಕ್ರವಾರ ಅರಮನೆ ಮುಂಭಾಗದಲ್ಲಿ ಮಾತ್ರ ಅಭಿಮನ್ಯು ನೇತೃತ್ವದಲ್ಲಿ ಜಂಬೂಸವಾರಿ ನಡೆಯಲಿದೆ.‌ ಅಂಬಾವಿಲಾಸ ಅರಮನೆ ಒಳಗಷ್ಟೇ ದಸರಾ ಸೀಮಿತಗೊಂಡಿದೆ. ಈಗಾಗಲೇ ಆನೆಗಳಿಗೆ ತಾಲೀಮು ನೀಡಿ ಜಂಬೂಸವಾರಿಗೆ ಸಿದ್ಧಗೊಳಿಸಲಾಗಿದ್ದು,ಈ ಬಾರಿ ಜಂಬೂಸವಾರಿಯಲ್ಲಿ ಅಭಿಮನ್ಯು ಆನೆ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದಾನೆ. […]

Advertisement

Wordpress Social Share Plugin powered by Ultimatelysocial