ಕೈಫಿ ಅಜ್ಮಿ ಭಾರತದ ಶ್ರೇಷ್ಠ ಉರ್ದು ಕವಿಗಳಲ್ಲಿ ಒಬ್ಬರು.

ಕೈಫಿ ಅಜ್ಮಿ ಎಂಬ ಕಾವ್ಯನಾಮದಿಂದ ಖ್ಯಾತರಾದ ಅತ್ತಾರ್ ಹುಸೇನ್ ರಿಜ಼್ವಿ, ಭಾರತದ ಶ್ರೇಷ್ಠ ಉರ್ದು ಕವಿಗಳಲ್ಲಿ ಒಬ್ಬರು.ಕೈಫಿ ಅಜ್ಮಿ ಉತ್ತರ ಪ್ರದೇಶದ ಆಜ಼ಮ್ಗಡ ಜಿಲ್ಲೆಯ ಮಿಜ಼್ವಾನ್ ಗ್ರಾಮದಲ್ಲಿ 1919ರ ಜನವರಿ 14ರಂದು ಜನಿಸಿದರು. ಅವರ ಕುಟುಂಬವು ಮೊದಲಿನಿಂದಲೂ ಕಲಾವಿದರ ಕುಟುಂಬವಾಗಿತ್ತು. ಅವರಿಗೆ ಮೂವರು ಸಹೋದರರಿದ್ದರು. ಅವರು ಕೂಡ ಶಾಯರಿ ಪ್ರಾಜ್ಞರಾಗಿದ್ದರು.ಅಜ್ಮಿ ಅವರು ತಮ್ಮ ಹನ್ನೊಂದನೇ ವಯಸ್ಸಿನಲ್ಲಿ ತಮ್ಮ ಮೊದಲ ಗಜಲ್ ಆದ ‘ಬಹ್ರೈಚ್ ಇತ್ನಾ ತೋ ಜಿಂದಗಿ ಮೇ ಕಿಸಿ ಕಿ ಖಲಾಲ್ ಪಡೆ’ ರಚಿಸಿದರು. ಮುಷೈರಾಕ್ಕೆ ಆಹ್ವಾನಿತರಾಗಿ ತಮ್ಮ ಗಜಲ್ ಪಠಿಸಿದಾಗ, ಬಹುತೇಕ ಜನ, ಈ ಹುಡುಗ ತನ್ನ ಹಿರಿಯ ಸಹೋದರನ ಗಜಲ್ ಪಠಿಸಿದ್ದಾನೆಂದು ಭಾವಿಸಿದ್ದರು. ಅವರ ಹಿರಿಯ ಸಹೋದರ ಅದನ್ನು ನಿರಾಕರಿಸಿದಾಗ, ಅವರ ತಂದೆ ಮತ್ತು ಕೆಲವು ಹಿರಿಯರು ಅವರ ಕಾವ್ಯಾತ್ಮಕ ಪ್ರತಿಭೆಯನ್ನು ಪರೀಕ್ಷಿಸಲು ಅವರಿಗೆ ಕೆಲವು ಸಾಲುಗಳನ್ನು ನೀಡಿ, ತಾವು ಹೇಳಿದ ಪ್ರಾಸದಲ್ಲಿ ಗಜಲ್ ಬರೆಯಲು ಹೇಳಿದರು. ಈ ಸವಾಲನ್ನು ಸ್ವೀಕರಿಸಿದ ಅಜ್ಮಿ ಗಜಲ್ ಅನ್ನು ಪೂರ್ಣಗೊಳಿಸಿದರು. ಈ ಗಜಲ್ ಅಜ್ಮಿ ಅವರಿಗೆ ಹೆಸರನ್ನು ತಂದುಕೊಟ್ಟಿತು. ಈ ಗಜಲ್ ಅನ್ನು ಗಾಯಕಿ ಬೇಗಂ ಅಖ್ತರ್ ಹಾಡಿದ್ದರಿಂದಾಗಿ ಅದು ಸಾಕಷ್ಟು ಜನಮನ್ನಣೆ ಗಳಿಸಿತು. ಕೈಫಿ ಅಜ್ಮಿ ಅವರು ಪಿರ್ಜಾಡಾ ಕಾಸಿಮ್, ಜಾನ್ ಎಲಿಯಾ ಮುಂತಾದ ಪ್ರಸಿದ್ಧರೊಂದಿಗೆ ಇಪ್ಪತ್ತನೇ ಶತಮಾನದ ಅನೇಕ ಸ್ಮರಣೀಯ ಮುಷೈರಾ ಕೂಟಗಳಲ್ಲಿ ಭಾಗವಹಿಸಿದ್ದರು.ಆಜ಼್ಮಿಯವರು ರಂಗಭೂಮಿ ಹಾಗು ಚಲನಚಿತ್ರ ಕಲಾವಿದೆಯಯಾದ ಶೌಕತ್ ಆಜ಼್ಮಿಯವರನ್ನು ವಿವಾಹವಾದರು. ಇವರ ಪುತ್ರಿ ಶಬಾನ ಆಜ಼್ಮಿ, ಹಿಂದಿ ಚಿತ್ರರಂಗದ ಪ್ರಖ್ಯಾತ ನಟಿ ಹಾಗು ಇವರ ಪುತ್ರ ಬಾಬಾ ಆಜ಼್ಮಿ, ಚಲನಚಿತ್ರ ಛಾಯಾಗ್ರಾಹಕರು. ಆಜ಼್ಮಿಯವರ ಸೊಸೆ, ತಾನ್ವಿ ಆಜ಼್ಮಿ ಕಿರುತೆರೆ ನಟಿ.ಕೈಫಿ ಅಜ್ಮಿ ಅವರು ಚಲನಚಿತ್ರರಂಗದಲ್ಲಿ ಸಂಭಾಷಣೆ, ಗೀತರಚನೆ, ನಟನೆಗಳಲ್ಲಿ ಹೆಸರಾದರು. ಗೀತಸಾಹಿತ್ಯದಲ್ಲಂತೂ ಹೊಸ ಅಲೆಯನ್ನೇ ತಂದರು. ಚೇತನ್ ಆನಂದ್ ಅವರ ‘ಹೀರ್ ರಾಂಜಾಹ್’ ಚಿತ್ರದಲ್ಲಿ ಅವರ ಇಡೀ ಚಿತ್ರದ ಸಂಭಾಷಣೆಯೇ ಕಾವ್ಯದಂತಿದೆ. ಎಂ. ಎಸ್. ಸತ್ಯು ಅವರ ‘ಗರಂ ಹವಾ’ದಲ್ಲಿನ ಗೀತರಚನೆ ಪ್ರಸಿದ್ಧವಾಗಿದೆ. ಶ್ಯಾಮ್ ಬೆನಗಲ್ ಅವರ ‘ಮಂಥನ್’, ಎಂ. ಎಸ್. ಸತ್ಯು ಅವರ ‘ಕನ್ನೇಶ್ವರ ರಾಮ’ ಚಿತ್ರಗಳಿಗೆ ಸಂಭಾಷಣೆ ಬರೆದರು. ಗುರುದತ್ ಅವರ ‘ಕಾಗಜ್ ಕೆ ಫೂಲ್’, ಚೇತನ್ ಆನಂದ ಅವರ ‘ಹಕೀಕತ್’ ಚಿತ್ರಗಳಲ್ಲಿನ ಗೀತೆಗಳಂತೂ ಅವಿಸ್ಮರಣೀಯ. ಕೊಹ್ರಾ, ಸಾತ್ ಹಿಂದೂಸ್ಥಾನಿ, ಶೋಲಾ ಔರ್ ಶಬಮನಮ್, ಪರ್ವಾನ, ಬಾವರ್ಚಿ, ಪಾಕೀಜಾ, ಅರ್ಥ್, ರಜಿಯಾ ಸುಲ್ತಾನ್ ಮುಂತಾದವು ಅವರ ಸಾಹಿತ್ಯದ ಇನ್ನಿತರ ಮಹತ್ವದ ಚಿತ್ರಗಳು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಮೆರಿಕಾದಲ್ಲಿ ದೇವರನ್ನು ಭೇಟಿಯಾದ ರಾಜಮೌಳಿ.

Sat Jan 14 , 2023
ವಾಷಿಂಗ್ಟನ್‌ : ಭಾರತಕ್ಕೆ ಪ್ರತಿಷ್ಠಿತ ಗ್ಲೋಲ್ಡನ್‌ ಗ್ಲೋಬ್‌ ಅವಾರ್ಡ್‌ ತಂದುಕೊಟ್ಟ ʼಆರ್‌ ಆರ್‌ ಆರ್‌ʼ ಚಿತ್ರದ ʼನಾಟು ನಾಟುʼ ಹಾಡು ಇದೀಗ ವಿದೇಶಿ ಮಂದಿಯಲ್ಲೂ ಮೋಡಿ ಮಾಡಿದೆ. 80ನೇ ಗೋಲ್ಡನ್ ಗ್ಲೋಬ್‌ ಅವಾರ್ಡ್ಸ್‌ ನಲ್ಲಿ ಬೆಸ್ಟ್‌ ಒರಿಜಿನಲ್‌ ಸಾಂಗ್‌ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಈ ವೇಳೆ ಸಂತಸವನ್ನು ಹಂಚಿಕೊಂಡು ನಿರ್ದೇಶಕ ರಾಜಮೌಳಿ ಅವರು ʼಆರ್‌ ಆರ್‌ ಆರ್‌ʼ ಪಾರ್ಟ್‌ -2 ಮಾಡುವ ಬಗ್ಗೆಯೂ ಮಾತಾನಾಡಿದ್ದರು. ಬಾಹುಬಲಿ ಸರಣಿಯಂತಹ ಐತಿಹಾಸಿಕ ಸಿನಿಮಾಗಳನ್ನು ಕೊಟ್ಟಿರುವ […]

Advertisement

Wordpress Social Share Plugin powered by Ultimatelysocial