ಬಾಹ್ಯಾಕಾಶ ವಿಜ್ಞಾನ ಲೋಕದ ತಾರೆಯರಲ್ಲಿ ಕಲ್ಲನಾ ಚಾವ್ಲಾ.

 

ಬಾಹ್ಯಾಕಾಶ ವಿಜ್ಞಾನ ಲೋಕದ ತಾರೆಯರಲ್ಲಿ ಕಲ್ಲನಾ ಚಾವ್ಲಾ ಹೆಸರು ಸದಾ ಪ್ರಕಾಶಿಸುವಂತದ್ದು. ಇಂದು ಅವರು ಈ ಲೋಕದಿಂದ ಕಣ್ಮರೆಯಾದ ದಿನ.2003ರ ಫೆಬ್ರವರಿ 1ರಂದು ಕೊಲಂಬಿಯಾ ಆಕಾಶನೌಕೆ ತನ್ನ ಗಗನಯಾತ್ರೆ ಮುಗಿಸಿ ಭೂಮಿಗೆ ಮರಳುವಾಗ ತಾಂತ್ರಿಕ ದೋಷದಿಂದಾಗಿ ಅದರಲ್ಲಿದ್ದ ಏಳೂ ಜನ ಗಗನಯಾತ್ರಿಗಳೂ ತಮ್ಮ ಜೀವವನ್ನು ಕಳೆದುಕೊಂಡರು. ಅದರಲ್ಲಿ ಭಾರತದ ಅಪ್ರತಿಮ ಪ್ರತಿಭಾನ್ವಿತೆಯಾದ ಕಲ್ಪನಾ ಚಾವ್ಲಾ ಕೂಡಾ ಒಬ್ಬರಾಗಿದ್ದರು.ಕಲ್ಪನಾ ಚಾವ್ಲಾ ಅವರು 1961ರ ಜುಲೈ 1ರಂದು ಜನಿಸಿದರು. ಹರಿಯಾಣಾದ ಕರ್ನಾಲ್ ಪಟ್ಟಣದಲ್ಲಿ ಜನಿಸಿದ ಕಲ್ಪನಾ ಚಾವ್ಲಾ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದು ಅಮೆರಿಕದಲ್ಲಿ ಎರಡು ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದರು. ಮುಂದೆ ಕಲ್ಪನಾ ಚಾವ್ಲಾ ನಾಸಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವದ ಕಾರ್ಯಸಾಧಕಿಯಾದರು. ಅಮೆರಿಕದ ಪ್ರಜೆ ಜಾನ್ ಪಿಯರೆ ಹ್ಯಾರಿಸನ್ ಅವರನ್ನು ವರಿಸಿದರು.ಮೊದಲು ನಾಸಾದ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಲ್ಪನಾ ಚಾವ್ಲಾ 1995ರಲ್ಲಿ ನಾಸಾದ ಬಾಹ್ಯಾಕಾಶ ಸಂಶೋಧನಾ ಕೆಂದ್ರಕ್ಕೆ ಬಂದು ಬಹುಬೇಗ ತಮ್ಮ ಸಾಮರ್ಥ್ಯಕ್ಕೆ ಹೆಸರಾದರು. 1996ರಲ್ಲಿ ಮೊದಲ ಬಾಹ್ಯಾಕಾಶ ಯಾನಕ್ಕೆ ಆಯ್ಕೆಯಾದ ಕಲ್ಪನಾ ಅವರು ಕ್ರಮಿಸಿದ ಯಾನ 10.4 ಮಿಲಿಯನ್ ಕಿಲೋ ಮೀಟರುಗಳಷ್ಟು ವ್ಯಾಪ್ತಿಯದು. ಅವರು ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಬಹಳಷ್ಟು ಯೋಜನೆಗಳ ಪಾತ್ರಧಾರಿಯೂ ಆದರು.ಕಲ್ಪನಾ ಚಾವ್ಲಾ ಅವರ ಗೌರವಾರ್ಥ ಅನೇಕ ಬಾಹ್ಯಾಕಾಶ ಯೋಜನೆ, ಉಪಗ್ರಹ, ರಸ್ತೆ, ವಿಶ್ವವಿದ್ಯಾಲಯ ಮುಂತಾದೆಡೆಗಳಲ್ಲಿ ಅವರ ಹೆಸರನ್ನು ಅವಿಸ್ಮರಣೀಯವಾಗಿಸುವ ಕೆಲಸವನ್ನು ಭಾರತ ಮತ್ತು ಅಮೆರಿಕೆಗಳೆರಡೂ ಮಾಡಿವೆ. ಒಂದು ವೈಜ್ಞಾನಿಕ ಸಾಧಕಿಯ ಜೀವ ಇವೆಲ್ಲಕ್ಕೂ ಮಿಗಿಲಾದುದು. ಅಮೂಲ್ಯವಾದುದು. ಅದು ತನ್ನ ಮಹತ್ವದ ಬೆಳವಣಿಗೆಯ ಪರ್ವ ಕಾಲದಲ್ಲೇ ಮುರುಟಿಹೋಯಿತು ಎಂಬುದು ಮರೆಯಲಾಗದ ಘಟನೆಯಾಗಿ ಇತಿಹಾಸದಲ್ಲಿ ಉಳಿದುಹೋಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಾ. ಸರ್ವಮಂಗಳಾ ಶಾಸ್ತ್ರಿ ಬಹುಮುಖಿ ಚಟುವಟಿಕೆಗಳ ಕೇಂದ್ರಬಿಂದು.

Wed Feb 1 , 2023
ಮಡಿಕೇರಿಯಲ್ಲಿ ಜನಿಸಿದ ಅವರು ಪದವಿ, ಕನ್ನಡ ಎಂ. ಎ, ಶಿಕ್ಷಣ ತರಬೇತಿ ಮುಂತಾದವುಗಳನ್ನು ಉನ್ನತ ಸಾಧನೆಗಳೊಂದಿಗೆ ಪಡೆದಿರುವುದಲ್ಲದೆ “ಪಾ. ವೆಂ. ಆಚಾರ್ಯರ ಬದುಕು ಬರೆಹ – ಒಂದು ಅಧ್ಯಯನ” ಮಹಾಪ್ರಬಂಧವನ್ನು ಡಾ. ಶ್ಯಾಮಸುಂದರ ಬಿದರಕುಂದಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿ ಹಂಪಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಗಳಿಸಿದ್ದಾರೆ. ಮಡಿಕೇರಿಯಲ್ಲಿ ಕಾಲೇಜು ಅಧ್ಯಾಪನ ನಡೆಸಿ ವಿವಾಹದ ನಂತರ ಚೆನೈನಲ್ಲಿ ಕೆಲಕಾಲವಿದ್ದು ಮುಂದೆ ಹುಬ್ಬಳ್ಳಿಯಲ್ಲಿ ವಾಸವಿರುವ ಡಾ. ಸರ್ವಮಂಗಳಾ ಅಲ್ಲಿ ಉಪನ್ಯಾಸಕಿಯಾಗಿದ್ದಾರೆ.ಸರ್ವಮಂಗಳಾ ಅವರು ಅನೇಕ ರೀತಿಯ […]

Advertisement

Wordpress Social Share Plugin powered by Ultimatelysocial