ಖಾರ್ಕೀವ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಕರೆ ಮಾಡಿ ಧೈರ್ಯ ತುಂಬಿದ ಸಿಎಂ

 

ಬೆಂಗಳೂರು: ಯುದ್ಧ ಪೀಡಿತ ಉಕ್ರೇನ್ ನ ಖಾರ್ಕೀವ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ವಿದ್ಯಾರ್ಥಿಗಳಿಗೆ ದೂರವಾಣಿ ಕರೆ ಮಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಧೈರ್ಯ ತುಂಬಿದ್ದು, ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರುವುದಾಗಿ ಭರವಸೆ ನೀಡಿದ್ದಾರೆ.ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಸಿಎಂ ಬೊಮ್ಮಾಯಿಯವರಿಗೆ ವಿದ್ಯಾರ್ಥಿಗಳು, ತಾವು ಖಾರ್ಕೀವ್ ನಗರದಿಂದ ಸುಮಾರು 20 ಕಿ.ಮೀ ನಡೆದು ಬಂದಿದ್ದು, ಸಧ್ಯ ಸುರಕ್ಷಿತ ಸ್ಥಳದಲ್ಲಿರುವುದಾಗಿ ತಿಳಿಸಿದ್ದಾರೆ. ಸುಮಾರು 200 ವಿದ್ಯಾರ್ಥಿಗಳು ಇರುವುದಾಗಿ ಹಾಗೂ ತಾವು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿದ್ದಾರೆ.ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿರುವ ಸಿಎಂ, ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಎಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು. ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಕುಂಕುಮ್ ಭಾಗ್ಯ' ಚಿತ್ರದಲ್ಲಿ ಪೂಜಾ ಬ್ಯಾನರ್ಜಿ ಬದಲಿಗೆ ಟೀನಾ ಫಿಲಿಪ್!

Thu Mar 3 , 2022
ಅದರ ಬಗ್ಗೆ ಮಾತನಾಡುತ್ತಾ, ಟೀನಾ ಉಲ್ಲೇಖಿಸಿದ್ದಾರೆ: “ನಾನು ನಟನೆಯ ಬಗ್ಗೆ ನನ್ನ ಉತ್ಸಾಹವನ್ನು ಅನುಸರಿಸಲು ನಿರ್ಧರಿಸಿದೆ ಮತ್ತು ಆದ್ದರಿಂದ ನಾನು ಯುಕೆಯಲ್ಲಿ ನನ್ನ ಉತ್ತಮ ಸಂಬಳದ ಸುರಕ್ಷಿತ ಕೆಲಸವನ್ನು ತ್ಯಜಿಸಿದೆ ಮತ್ತು ನನ್ನ ಕನಸುಗಳನ್ನು ನನಸಾಗಿಸಲು ಭಾರತಕ್ಕೆ ತೆರಳಿದೆ. ನಾನು ಅಕ್ಷರಶಃ ಯಾರೂ ಅಥವಾ ಯಾರನ್ನೂ ಅವಲಂಬಿಸಲಿಲ್ಲ. ಇಲ್ಲಿ ಬೆಂಬಲಿಸಲು.ಆದರೆ ‘ಕುಂಕುಮ ಭಾಗ್ಯ’ದಲ್ಲಿ ರಿಯಾ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ. ಟೀನಾ ಅವರು ‘ಏಕ್ ಆಸ್ತಾ ಐಸಿ ಭಿ’, […]

Advertisement

Wordpress Social Share Plugin powered by Ultimatelysocial