SANDALWOOD:ಜೇಮ್ಸ್ ಚಿತ್ರಕ್ಕೆ ಶಿವರಾಜ್ ಕುಮಾರ್ ಡಬ್ಬಿಂಗ್ ಖಚಿತ;

ಜೇಮ್ಸ್ ಸಿನಿಮಾ ಕನ್ನಡಿಗರಿಗೆ, ಕನ್ನಡ ಚಿತ್ರರಂಗಕ್ಕೆ ವಿಶೇಷವಾದ ಸಿನಿಮಾ. ಯಾಕೆಂದರೆ ಈ ಚಿತ್ರ ನಟ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ನಟನೆಯ ಕೊನೆಯ ಸಿನಿಮಾ. ಈ ಚಿತ್ರವನ್ನು ನೋಡಲು ಅಭಿಮಾನಿಗಳು, ಕನ್ನಡ ಪ್ರೇಕ್ಷಕರು ಕಾಯುತ್ತಿದ್ದಾರೆ.

ಸದ್ಯ ಚಿತ್ರದ ಸಂಪೂರ್ಣ ಕೆಲಸಗಳು ಮುಗಿದಿವೆ.

ಚಿತ್ರದ ಫೈನಲ್ ಔಟ್ ಪುಟ್ ಬರುವುದೊಂದೇ ಬಾಕಿ ಇದೆ. ಸದ್ಯದಲ್ಲಿಯೇ ಫೈನಲ್ ಕಾಪಿ ಚಿತ್ರತಂಡದ ಕೈ ಸೇರುತ್ತದೆ. ಇದಾದ ಬಳಿಕ ಸಿನಿಮಾದ ಬಗ್ಗೆ ಮುಂದಿನ ಅಪ್ಡೇಟ್ ನೀಡಲಿದೆ ಚಿತ್ರ ತಂಡ.

ಇನ್ನು ಜೇಮ್ಸ್ ಒಂದು ವಿಚಾರದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಅದುವೇ ಸಿನಿಮಾದಲ್ಲಿ ಅಪ್ಪು ವಾಯ್ಸ್ ಇರುತ್ತಾ ಅಥವಾ ಅಪ್ಪುಗೆ ಬೇರೆ ಯಾರಾದರು ಡಬ್ಬಿಂಗ್ ಮಾಡುತ್ತಾರೆ ಎನ್ನುವ ವಿಚಾರ. ಆದರೆ ಈಗ ಇದಕ್ಕೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಈ ಬಗ್ಗೆ ಈ ಹೊಸ ಸುದ್ದಿ ಹಂಚಿಕೊಂಡಿದೆ ಜೇಮ್ಸ್ ಚಿತ್ರತಂಡ.

ಅಪ್ಪು ಧ್ವನಿ ಕಾಪಾಡಲು ಜೇಮ್ಸ್ ತಂಡದ ಸತತ ಪ್ರಯತ್ನ!
ಜೇಮ್ಸ್ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಧ್ವನಿಯನ್ನು ಉಳಿಸಲು ಸಿನಿಮಾತಂಡ ಸಾಕಷ್ಟು ಪ್ರಯತ್ನ ಪಡುತ್ತಿದೆ. ಅದಕ್ಕಾಗಿ ಉತ್ತಮ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಮಾಡಿದ್ದ ಸಂಭಾಷಣೆಯನ್ನು ಹಾಗೆ ಉಳಿಸಿಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಆದರೆ ಅದು ಒಂದು ವೇಳೆ ಸಾಧ್ಯ ಆಗದೇ ಇದ್ದರೆ ಮಾತ್ರ, ಬೇರೆಯವರಿಂದ ಡಬ್ಬಿಂಗ್ ಮಾಡಿಸಲು ಮುಂದಾಗುವ ಚಿಂತನೆ ಚಿತ್ರತಂಡದ್ದು.

ಪುನೀತ್ ರಾಜ್‌ಕುಮಾರ್‌ಗೆ ನಟ ಶಿವರಾಜ್ ಕುಮಾರ್ ಧ್ವನಿ!

ಪುನೀತ್‌ ರಾಜ್‌ಕುಮಾರ್ ಅವರಿಗೆ ಬಹುಶಃ ಅಣ್ಣ ಶಿವರಾಜ್ ಕುಮಾರ್ ಅವರನ್ನು ಬಿಟ್ಟರೆ, ಮತ್ಯಾರಾ ಧ್ವನಿ ಕೂಡ ಅಷ್ಟಾಗಿ ಸೂಟ್ ಆಗುವುದಿಲ್ಲ ಎಂದು ಎನಿಸುತ್ತೆ. ಹಾಗಾಗಿ ಸಿನಿಮಾ ತಂಡ ಶಿವಣ್ಣನ ಬಳಿ ಈ ಬಗ್ಗೆ ಮಾತನಾಡಿದೆ. ಶಿವರಾಜ್ ಕುಮಾರ್ ಅವರೂ ಕೂಡ ಅಪ್ಪು ಪಾತ್ರಕ್ಕೆ ಧ್ವನಿ ನೀಡಲು ಒಪ್ಪಿಕೊಂಡಿದ್ದಾರೆ. ಇದು ತುಂಬಾ ಎಮೋಷನಲ್ ಆದ ವಿಚಾರ, ನನಗೆ ಎಷ್ಟರ ಮಟ್ಟಿಗೆ ಅದು ಸಾಧ್ಯ ಆಗುತ್ತೋ ಗೊತ್ತಿಲ್ಲ. ಆದರೆ ಕಂಡಿತ ಪ್ರಯತ್ನ ಪಡುತ್ತೇನೆ ಎಂದು ಶಿವರಾಜ್‌ಕುಮಾರ್‌ ಅವರು ಚಿತ್ರತಂಡಕ್ಕೆ ಭರವಸೆ ನೀಡಿದ್ದಾರಂತೆ.

ಫೆಬ್ರವರಿ 5ರ ಬಳಿಕ ಡಬ್ಬಿಂಗ್ ನಿರ್ಧಾರ!

ಇನ್ನು ಈಗಾಗಲೇ ಸಿನಿಮಾ ತಂಡ ಅಪ್ಪು ಅವರ ಧ್ವನಿಯನ್ನು ಹಾಗೆ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಶೂಟಿಂಗ್ ಸಂದರ್ಭದಲ್ಲಿನ ಬ್ಯಾಗ್ರೌಂಡ್ ನಾಯ್ಸ್ ತೆಗೆದು ಹಾಕಿ, ಅಪ್ಪು ಅವರ ಧ್ವನಿಯನ್ನು ನಿಖರವಾಗಿ ಕೇಳುವ ಹಾಗೆ ಮಾಡಲು ಕೆಲಸ ಸಾಗಿದೆ. ಇದರ ಅಂತಿಮ ಪ್ರತಿ ಫೆಬ್ರವರಿ 5ರಂದು ಚಿತ್ರತಂಡಕ್ಕೆ ಸಿಗುತ್ತದೆ. ಅಪ್ಪು ಅವರ ಧ್ವನಿ ಸರಿ ಹೊಂದಿದರೆ, ಅದನ್ನು ಚಿತ್ರದಲ್ಲಿ ಹಾಗೆ ಇಡಲಾಗುತ್ತದೆ. ಇಲ್ಲವಾದರೆ ಶಿವರಾಜ್ ಕುಮಾರ್ ಅವರಿಂದ ಪುನೀತ್‌ ರಾಜ್‌ಕುಮಾರ್ ಪಾತ್ರಕ್ಕೆ ಡಬ್ಬಿಂಗ್ ಮಾಡಿಸಲಾಗುತ್ತದೆ.

ಫೆಬ್ರವರಿಯಲ್ಲೇ ಜೇಮ್ಸ್ ರಿಲೀಸ್ ದಿನಾಂಕ ಪ್ರಕಟ!

ಫೆಬ್ರವರಿ 5ರ ಬಳಿಕ ಚಿತ್ರದ ಡಬ್ಬಿಂಗ್ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ. ಒಂದು ವೇಳೆ ಅಪ್ಪು ಅವರ ಧ್ವನಿ ಹಾಗೆ ಇದ್ದರೆ, ಇನ್ನೂ ಬೇಗ ರಿಲೀಸ್‌ಗೆ ಚಿತ್ರ ಅಣಿಯಾಗುತ್ತದೆ. ಇಲ್ಲವಾದರೂ ಕೂಡ ಅಪ್ಪು ಪಾತ್ರದ ಡಬ್ಬಿಂಗ್ ಮುಗಿಸಿ, ಸಿನಿಮಾತಂಡ ಆದಷ್ಟು ಬೇಗ ಚಿತ್ರ ರಿಲೀಸ್ ದಿನಾಂಕವನ್ನು ಪ್ರಕಟ ಮಾಡುತ್ತದೆ. ಎಲ್ಲವೂ ಅಂದು ಕೊಂಡ ಹಾಗೆ ನಡೆದರೆ, ಜೇಮ್ಸ್ ಸಿನಿಮಾ ಮಾರ್ಚ್ 17 ಪುನೀತ್‌ ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ತೆರೆಕಾಣಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಾಳ್ಮೆ ವಹಿಸೋಣ, ಒಳ್ಳೆಯ ದಿನ ಮುಂದಿದೆ: ವಿಜಯ್ ರಾಘವೇಂದ್ರ;

Mon Jan 31 , 2022
ಚಿತ್ರಮಂದಿರಗಳಲ್ಲಿ 100% ಸೀಟು ಭರ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಾರ್ಯಕ್ರಮದಲ್ಲಿ ನಟ ವಿಜಯ್ ರಾಘವೇಂದ್ರ ಹೇಳಿಕೆ ನೀಡಿದ್ದಾರೆ. ಸಾವಿತ್ರಿ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರದ ನಿರ್ಧಾರ, ಉದ್ದೇಶಗಳು ಏನ್ ಹೇಳಬೇಕು ಗೊತ್ತಿಲ್ಲ. ಸ್ವಲ್ಪ ತಾಳ್ಮೆಯಿಂದ ಇದ್ದರೆ ಖಂಡಿತ ನಮಗೂ ರಿಲ್ಯಾಕ್ಸ್ ಸಿಗುತ್ತೆ. 100% ಥಿಯೇಟರ್ ಅವಕಾಶ ಆದಷ್ಟು ಬೇಗ ಕೊಡಬೇಕು. ಅಲ್ಲದೇ ಎಲ್ಲರೂ ಹುಷಾರಾಗಿದ್ದರೆ ಆದಷ್ಟು ಬೇಗ ನಮಗೂ ಅವಕಾಶ ಕೊಡುತ್ತಾರೆ. ಹಾಗೆ ನಮ್ಮ ಜವಾಬ್ಧಾರಿಯನ್ನ […]

Advertisement

Wordpress Social Share Plugin powered by Ultimatelysocial