ಕರ್ನಾಟಕದ ಈ ರಾಜಕೀಯ ನಾಯಕರಿಗೆ ಇದೇ ಕೊನೆ ಚುನಾವಣೆ.

 

ಬೆಂಗಳೂರು, ಜನವರಿ 17: ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ರಾಜಕಾರಣದ ಹಲವು ದಿಗ್ಗಜರಿಗೆ ಮುಂಬರುವ ವಿಧಾನಸಭಾ ಚುನಾವಣೆಯು ಕೊನೆಯ ಚುನಾವಣೆಯಾಗುವ ಸಾಧ್ಯತೆಯಿದೆ. ಏಕೆಂದರೆ ಅವರು ಇನ್ನು ಐದು ವರ್ಷಗಳ ನಂತರ 80 ವರ್ಷಗಳನ್ನು ಪೂರೈಸುವ ಹೊಸ್ತಿಲಲ್ಲಿದ್ದಾರೆ.

ಈ ಹಿರಿಯರಲ್ಲಿ ಹೆಚ್ಚಿನವರು ಆ ವೇಳೆಗೆ ಚುನಾವಣಾ ರಾಜಕೀಯದಿಂದ ನಿವೃತ್ತರಾಗಬಹುದು.

ಕಾಂಗ್ರೆಸ್ ಶಾಸಕರಾದ ಆರ್.ವಿ.ದೇಶಪಾಂಡೆ (75), ಕೆ.ಆರ್.ರಮೇಶ್ ಕುಮಾರ್ (73) ಶಾಮನೂರು ಶಿವಶಂಕರಪ್ಪ (91) ಸೇರಿದಂತೆ ಇತರರಿಗೆ ಇದು ಕೊನೆ ಚುನಾವಣೆ ಆಗಬಹುದು. ಬಿಜೆಪಿ ಶಾಸಕರಾದ ಕೆ.ಎಸ್.ಈಶ್ವರಪ್ಪ (74), ಜಿ.ಎಚ್.ತಿಪ್ಪಾರೆಡ್ಡಿ (77) ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (71) ಅವರಿಗೆ ಈ ಚುನಾವಣೆಯೇ ಕೊನೆಯಾಗುವ ಸಾಧ್ಯತೆ ಇದೆ. ಈ ಶಾಸಕರಲ್ಲಿ ಅನೇಕರು ಚುನಾವಣಾ ರಾಜಕೀಯವನ್ನು ತ್ಯಜಿಸುವ ತಮ್ಮ ಇಚ್ಛೆಯನ್ನು ಈಗಾಗಲೇ ವ್ಯಕ್ತಪಡಿಸಿದ್ದಾರೆ.

ಈ ಚುನಾವಣೆಯಲ್ಲಿ ಬಿ ಎಸ್‌ ಯಡಿಯೂರಪ್ಪ ಸ್ಪರ್ಧೆ ಇಲ್ಲಮುಂದಿನ ತಿಂಗಳು 80ನೇ ವರ್ಷಕ್ಕೆ ಕಾಲಿಡಲಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಪ್ರಸ್ತುತ ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರವಾದ ಶಿಕಾರಿಪುರದಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ಟಾರ್ ಕ್ರಿಕೆಟಿಗನಿಗೆ ಅನಾರೋಗ್ಯ.

Tue Jan 17 , 2023
  ಭಾರತ ಕ್ರಿಕೆಟ್ ತಂಡ ಜನವರಿ 18 ರಿಂದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಪ್ರಾರಂಭಿಸಲಿದೆ. ಅದೇ ಸಮಯದಲ್ಲಿ, ದೇಶೀಯ ಕ್ರಿಕೆಟ್‌ನಲ್ಲಿ ರಣಜಿ ಟ್ರೋಫಿ ಪಂದ್ಯಗಳು ನಡೆಯುತ್ತಿವೆ. ಆದರೆ ಈ ನಡುವೆ ದೆಹಲಿ ತಂಡವು ಭಾರಿ ಹಿನ್ನಡೆ ಅನುಭವಿಸಿದೆ. ಅದರ ನಾಯಕ ಯಶ್ ಧುಲ್ ಅನಾರೋಗ್ಯದ ಕಾರಣ ಮುಂಬೈ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಯಶ್ ಧುಲ್ ಬದಲಿಗೆ 26 ವರ್ಷದ ಆಟಗಾರನನ್ನು ನಾಯಕನನ್ನಾಗಿ ಮಾಡಲಾಗಿದೆ. ಕ್ಯಾನ್ಸರ್ ಮಹಾಮಾರಿ ಗೆದ್ದ ಯುವ’ರಾಜ್ […]

Advertisement

Wordpress Social Share Plugin powered by Ultimatelysocial