‘ಪ್ರೈಸ್‌ ವಾಲ್ಯೂಮ್‌ ಬ್ರೇಕ್‌ಔಟ್‌’ನಲ್ಲಿವೆ ಡಿಎಲ್‌ಎಫ್‌, ಸ್ಟಾರ್‌ ಹೆಲ್ತ್‌ ಸೇರಿ 5 ಪ್ರಮುಖ ಷೇರುಗಳು.

ಮಿಶ್ರ ಜಾಗತಿಕ ಸೂಚನೆಗಳ ನಡುವೆ ಹೊಸ ವಾರದ ಮೊದಲ ವಹಿವಾಟನ್ನು ನಿಫ್ಟಿ 50ಯು ಸಕಾರಾತ್ಮಕವಾಗಿ ಆರಂಭಿಸಿತು. ಈ ಲೇಖನದಲ್ಲಿ ಸೋಮವಾರ ‘ಪ್ರೈಸ್‌ ವಾಲ್ಯೂಮ್‌ ಬ್ರೇಕ್‌ಔಟ್‌’ಗೆ ಸಾಕ್ಷಿಯಾಗುತ್ತಿರುವ ಪ್ರಮುಖ ಷೇರುಗಳನ್ನು ನಾವು ಪಟ್ಟಿ ಮಾಡಿದ್ದೇವೆ.ಸೋಮವಾರ ನಿಫ್ಟಿ 50ಯು ಶುಕ್ರವಾರದ ಮುಕ್ತಾಯದ ಮಟ್ಟ 17,944.2ಕ್ಕೆ ವಿರುದ್ಧವಾಗಿ 17,965.55ರಲ್ಲಿ ಧನಾತ್ಮಕವಾಗಿ ಫ್ಲ್ಯಾಟ್‌ ಆಗಿ ವಹಿವಾಟು ಆರಂಭಿಸಿತು. ಇದು ಮಿಶ್ರ ಜಾಗತಿಕ ಸೂಚನೆಗಳ ಪರಿಣಾಮವಾಗಿದೆ. ಶುಕ್ರವಾರದಂದು ಪ್ರಮುಖ ವಾಲ್ ಸ್ಟ್ರೀಟ್ ಸೂಚ್ಯಂಕಗಳು ಹೆಚ್ಚಾಗಿ ಕೆಳಮಟ್ಟದಲ್ಲಿ ಕೊನೆಗೊಂಡಿದ್ದವು. ಹಣದುಬ್ಬರ ಮತ್ತು ಬಲವಾದ ಆರ್ಥಿಕ ಡೇಟಾದ ನಡುವೆ ಫೆಡರಲ್‌ ರಿಸರ್ವ್‌ ತನ್ನ ದರ ಏರಿಕೆಯನ್ನು ಮುಂದುವರಿಸಲು ಸಾಧ್ಯತೆ ಇದ್ದು, ಈ ಎಲ್ಲಾ ಕಳವಳಗಳ ನಡುವೆ ದೈತ್ಯ ಟೆಕ್ ಕಂಪನಿಗಳ ಷೇರುಗಳು ಒತ್ತಡದಲ್ಲಿದ್ದವು ನಾಸ್ಡಾಕ್ ಕಾಂಪೋಸಿಟ್ ಶೇ. 0.58ರಷ್ಟು ಕುಸಿತ ಕಂಡರೆ, ಡೌ ಜೋನ್ಸ್ ಇಂಡಸ್ಟ್ರಿಯಲ್ ಎವರೇಜ್‌ ಶೇ. 0.39 ಮತ್ತು ಎಸ್‌&ಪಿ 500 ಶುಕ್ರವಾರ ಶೇ. 0.28ರಷ್ಟು ಇಳಿಕೆ ಕಂಡಿತು. ಸೋಮವಾರ ಏಷ್ಯಾದ ಮಾರುಕಟ್ಟೆ ಸೂಚ್ಯಂಕಗಳು ಚೀನಾದ ಎಸ್‌ಎಸ್‌ಇ ಕಾಂಪೊಸಿಟ್‌ ಇಂಡೆಕ್ಸ್‌ ಮತ್ತು ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್‌ನ ಮುನ್ನಡೆಯೊಂದಿಗೆ ಧನಾತ್ಮಕವಾಗಿ ಫ್ಲಾಟ್ ಆಗಿ ವಹಿವಾಟು ಆರಂಭಿಸಿದವು ಬೆಳಗ್ಗೆ 10:00 ಗಂಟೆಗೆ ನಿಫ್ಟಿ 50ಯು 44 ಅಂಕ ಅಥವಾ ಶೇ. 0.25ರಷ್ಟು ಏರಿಕೆ ಕಂಡು 17,988.2ರಲ್ಲಿ ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ಮುಂಚೂಣಿ ಸೂಚ್ಯಂಕಗಳಿಗಿಂತ ಕಳಪೆಯಾಗಿ ಕಾರ್ಯನಿರ್ವಹಿಸಿವೆ. ನಿಫ್ಟಿ ಮಿಡ್-ಕ್ಯಾಪ್ ಸೂಚ್ಯಂಕ ಶೇ. 0.08ರಷ್ಟು ಗಳಿಕೆ ಕಂಡರೆ, ನಿಫ್ಟಿ ಸ್ಮಾಲ್‌ ಕ್ಯಾಪ್ ಸೂಚ್ಯಂಕ ಶೇ. 0.18ರಷ್ಟು ಇಳಿಕೆ ದಾಖಲಿಸಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟಾಟಾದ ಈ ಕಂಪನಿಯಿಂದ ಎರಡೇ ವಾರಗಳಲ್ಲಿ ₹1,000 ಕೋಟಿ ಗಳಿಸಿದ ರೇಖಾ ಜುಂಜುನ್‌ವಾಲಾ!.

Mon Feb 20 , 2023
  ಟೈಟಾನ್ ಕಂಪನಿ ಲಿ.ನ ಷೇರುಗಳು 2023ರ ಕೇಂದ್ರ ಬಜೆಟ್‌ ಬಳಿಕ ಒಂದೇ ಸಮನೆ ಏರಿಕೆ ಕಾಣುತ್ತಿವೆ. ಫೆ. 2, 2023ರಂದು ಸುಮಾರು 2,310 ರೂ.ನಲ್ಲಿ ವಹಿವಾಟು ಕೊನೆಗೊಳಿಸಿದ್ದ ಟೈಟಾನ್‌ ಕಂಪನಿ ಷೇರಿನ ಬೆಲೆಯು ಕಳೆದ ಎರಡು ವಾರಗಳಲ್ಲಿ ಭಾರೀ ಖರೀದಿ ಆಸಕ್ತಿಯ ನಡುವೆ ತೀವ್ರ ಏರಿಕೆ ಕಂಡಿದೆ. ಈ ವೇಳೆ ಪ್ರತಿ ಷೇರಿನ ಬೆಲೆಯು 2,310 ರೂ.ನಿಂದ 2,535 ರೂ.ಗೆ ಏರಿಕೆಯಾಗಿದೆ. ಇದರಿಂದ ದಿವಂಗತ ಏಸ್‌ ಇನ್ವೆಸ್ಟರ್‌ ರಾಕೇಶ್‌ […]

Advertisement

Wordpress Social Share Plugin powered by Ultimatelysocial