*ಕರ್ನಾಟಕ ರಾಜ್ಯ ನೇಗಿಲಯೋಗಿ ರೈತ ಸಂಘಟನೆಯಿಂದ ರೈತ ಹುತಾತ್ಮ ದಿನಾಚರಣೆ*

ಕರ್ನಾಟಕ ರಾಜ್ಯ ನೇಗಿಲಯೋಗಿ ರಾಜ್ಯ ರೈತ ಸಂಘಟನೆಯ ರಾಜ್ಯಾಧ್ಯಕ್ಷರಾದ ರವಿ ಪಾಟೀಲ ಅವರ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದ್ದ ರೈತ ಹುತಾತ್ಮ ದಿನಾಚರಣೆ

ಕರ್ನಾಟಕ ರಾಜ್ಯ ನೇಗಿಲಯೋಗಿ ರೈತ
ಸಂಘಟನೆಯಿಂದ ರೈತ ಹುತಾತ್ಮ ದಿನಾಚರಣೆ*

42 ವರ್ಷಗಳ ಹಿಂದೆ ರೈತರು ಸೇರಿಕೊಂಡು ರೈತ ಚಳುವಳಿ ಮಾಡುವಂತಹ ಸಂದರ್ಭದಲ್ಲಿ ಆಗಿನ ಸರಕಾರ ಪೋಲಿಸರಿಂದ ಹಲ್ಲೆ ಮಾಡಿಸಿದ್ದರು ಅಂತಹ ಸಂದರ್ಭದಲ್ಲಿ ನೂರಾರು ರೈತರು ಮರಣ ಹೊಂದಿದ್ದರು ಆದ್ದರಿಂದ ಜುಲೈ 21 ನ್ನು ರೈತ ಹುತಾತ್ಮ ದಿನಾಚರಣೆಯನ್ನಾಗಿ ಕರ್ನಾಟಕ ರಾಜ್ಯ ನೇಗಿಲಯೋಗಿ ರೈತ ಸಂಘಟನೆಯಿಂದ ಮಾಡಲಾಯಿತು.

ಹೌದು ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ರೈತರ ಸಲುವಾಗಿ ಪ್ರಾಣಬಿಟ್ಟ ರೈತರನ್ನ ನೆನೆಯುತಾ ಕಿತ್ತೂರಿನ ರಾಜಯೋಗಿಂದ್ರ ಮಡಿವಾಳ ಕಲ್ಮಠ ಮಹಾಸ್ವಾಮೀಜಿ ಹಾಗೂ ಹುಲಿಕಟ್ಟಿಯ ಲಿಂಗಾನಂದ ಮಹಾಸ್ವಾಮೀಜಿಗಳ ಪಾಲ್ಗೊಂಡಿದ್ದರು ಕಿತ್ತೂರು ರಾಣಿ ಚೆನ್ನಮ್ಮಾಜಿ ಹಾಗೂ ಸಂಗೋಳ್ಳಿ ರಾಯಣ್ಣ ಪುತ್ಥಳಿಗೆ ಹಾರ ಹಾಕುವುದರ ಮೂಲಕ ರೈತ ಹುತಾತ್ಮ ದಿನಾಚರಣೆ ಮಾಡಲಾಯಿತು.

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಕರ್ನಾಟಕ ರಾಜ್ಯ ನೇಗಿಲಯೋಗಿ ರಾಜ್ಯ ರೈತ ಸಂಘಟನೆಯ ರಾಜ್ಯಾಧ್ಯಕ್ಷರಾದ ರವಿ ಪಾಟೀಲ ಅವರ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದ್ದ ರೈತ ಹುತಾತ್ಮ ದಿನಾಚರಣೆ ನಿಮಿತ್ಯ ಆರಂಭದಲ್ಲಿ ರೈತ ಗೀತೆ ಹಾಡುವುದರ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು ಹಾಗೇಯೆ ಇದೇ ಸಂದರ್ಭದಲ್ಲಿ ರೈತ ಚಳುವಳಿಯಲ್ಲಿ ಮಡಿದ ರೈತರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಂಜೆತನವನ್ನು ತಪ್ಪಿಸಲು ಪುರುಷರು ಮತ್ತು ಮಹಿಳೆಯರಿಗೆ ತಡೆಗಟ್ಟುವ ಕ್ರಮಗಳು

Thu Jul 21 , 2022
ಬಂಜೆತನವು ಪುರುಷರು ಅಥವಾ ಮಹಿಳೆಯರಲ್ಲಿ ವಿವಿಧ ಸಂದರ್ಭಗಳಲ್ಲಿ ಉಂಟಾಗಬಹುದು ಆದರೆ ಇದು ಸಾಮಾನ್ಯವಾಗಿ ಮಹಿಳೆಯರಲ್ಲಿ ಅಂಡಾಣು ನಿಕ್ಷೇಪಗಳ ಕುಸಿತ ಮತ್ತು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿನ ಕುಸಿತವಾಗಿ ತೋರಿಸುತ್ತದೆ. ಬಂಜೆತನವನ್ನು ತಡೆಗಟ್ಟಲು ಜನರು ಮಾಡಬಹುದಾದ ಹಲವು ವಿಷಯಗಳಿವೆ ಆದರೆ ಬಂಜೆತನದ ಕೆಲವು ಕಾರಣಗಳು ನಮ್ಮ ನಿಯಂತ್ರಣದಲ್ಲಿಲ್ಲ, ನಮ್ಮ ಫಲವತ್ತತೆಯ ಮೇಲೆ ಪರಿಣಾಮ ಬೀರುವ ಅನೇಕ ಜೀವನಶೈಲಿ ಆಯ್ಕೆಗಳಿವೆ. HT ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ, ಸ್ತ್ರೀರೋಗತಜ್ಞ ಮತ್ತು ಪ್ರಿಸ್ಟಿನ್ ಕೇರ್‌ನ ಸಹ-ಸಂಸ್ಥಾಪಕಿ ಡಾ […]

Advertisement

Wordpress Social Share Plugin powered by Ultimatelysocial