ಕಸದ ಬುಟ್ಟಿಯಲ್ಲಿ, ಖಾಲಿ ಸೈಟ್ ನಲ್ಲಿ ಚಿನ್ನ-ಬೆಳ್ಳಿ, ನಾಣ್ಯ, ಕಂತೆ-ಕಂತೆ ನೋಟು: ದಾಳಿ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಶಾಕ್!

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ 75ಕ್ಕೂ ಹೆಚ್ಚು ಕಡೆಗಳಲ್ಲಿ ವಿವಿಧ ಇಲಾಖೆಗಳ 18 ಅಧಿಕಾರಿಗಳ ಮನೆ ಮೇಲೆ ಇಂದು ಬುಧವಾರ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿ ಶೋಧ ನಡೆಸುತ್ತಾ ಹೋದ ಅಧಿಕಾರಿಗಳಿಗೆ ಶಾಕ್ ಆಗಿದೆ.

 

ರಾಶಿ ರಾಶಿ ಚಿನ್ನ, ಬೆಳ್ಳಿ, ನೋಟಿನ ಕಂತೆಗಳು, ಅಪಾರ ಆಸ್ತಿಪಾಸ್ತಿ ಪತ್ತೆಯಾಗಿದ್ದು ಇದನ್ನು ಕಂಡ ಎಸಿಬಿ ಅಧಿಕಾರಿಗಳು ಶಾಕ್ ಆಗಿದ್ದಾರೆ. ಚಿಕ್ಕಮಗಳೂರಿನ ಪಿಡಬ್ಲ್ಯುಡಿ ಎಇಇ ಗವಿ ರಂಗಪ್ಪ ಮನೆಯಲ್ಲಿ ಅಪಾರ ಚಿನ್ನದ ಬಿಸ್ಕತ್ ಪತ್ತೆಯಾಗಿದೆ.ಚಿಕ್ಕಮಗಳೂರಿನ ಗಾಂಧಿನಗರ ಬಡಾವಣೆಯಲ್ಲಿ ಇವರ ಮನೆಯಿದ್ದು, ದಾಳಿ ನಡೆಸಿದ ವೇಳೆ ಅಧಿಕಾರಿಗಳಿಗೆ 750 ಗ್ರಾಂ ಚಿನ್ನದ ಗಟ್ಟಿ, 900 ಗ್ರಾಂ ಬೆಳ್ಳಿ, 2.74 ಲಕ್ಷ ರೂಪಾಯಿ ಪತ್ತೆಯಾಗಿದೆ.

ಅಧಿಕಾರಿಗಳು ಇನ್ನೂ ದಾಳಿ ಮುಂದುವರಿಸಿದ್ದು ನಾಳೆಯವರೆಗೂ ಅದು ಶೋಧ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಯಾದಗಿರಿಯಲ್ಲಿ ಏಕಕಾಲಕ್ಕೆ ನಾಲ್ಕು ಕಡೆ ದಾಳಿ ನಡೆಸಲಾಗಿದ್ದು ಇಇ ಬಸವರಾಜ್ ಶೇಖರ ರೆಡ್ಡಿ, ನೀರಾವರಿ ನಿಗಮದ ಶೇಖರ ರೆಡ್ಡಿ, ಅವರ ಸೋದರರ ಮನೆ ಮೇಲೆ ದಾಳಿ ಮಾಡಿದಾಗ ಅಧಿಕಾರಿಗಳಿಗೆ ಶಾಕ್ ಆಗಿತ್ತು.

 ರಾಯಚೂರಿನ ದೇವದುರ್ಗದ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿ ಅಶೋಕ್ ರೆಡ್ಡಿ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ಶಾಕ್ ಆಯಿತು. ಎಸಿಬಿ ಅಧಿಕಾರಿಗಳು ಶೋಧ ನಡೆಸಲಿ ಬರುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಮನೆಯ ಹತ್ತಿರದ ಖಾಲಿ ಸೈಟ್, ಡಸ್ಟ್ ಬಿನ್ ನಲ್ಲಿ ಚಿನ್ನ, ಬೆಳ್ಳಿ, ದುಡ್ಡನ್ನು ಇಟ್ಟಿದ್ದು ಕಂಡು ಅಧಿಕಾರಿಗಳು ದಂಗಾದರು. ಟಾಯ್ಲೆಟ್ ಗೆ ಹೋಗುವ ನೆಪದಲ್ಲಿ ಅಶೋಕ್ ರೆಡ್ಡಿ ಪತ್ನಿ ಪದೇ ಪದೇ ಡಸ್ಟ್ ಬಿನ್ ನೋಡುತ್ತಿದ್ದರು. ಇದರಿಂದ ಅನುಮಾನಗೊಂಡು ಅಧಿಕಾರಿಗಳು ಪರಿಶೀಲಿಸಿದಾಗ ರಾಶಿರಾಶಿ ಹಣದ ಕಂತೆ, ಚಿನ್ನ, ಬೆಳ್ಳಿ ಪತ್ತೆಯಾಗಿದೆ.

ಅಧಿಕಾರಿಗಳ ಮನೆ ಮತ್ತು ಕಚೇರಿಗಳನ್ನು ಎಸಿಬಿ ಅಧಿಕಾರಿಗಳು ಜಾಲಾಡುತ್ತಿದ್ದಾರೆ. ಬಾದಾಮಿ ಆರ್.ಎಫ್.ಓ. ಶಿವಾನಂದ ಖೇಡಗಿ ಅವರ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಅಪಾರ ಪ್ರಮಾಣ ನಗದು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.ಖೇಡಗಿ‌ ಮನೆಯಲ್ಲಿ ಕೌಂಟಿಂಗ್ ಮಷೀನ್ , ಗಂಧದ ಕಟ್ಟಿಗೆಗಳ ತುಂಡು, ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಪ್ಲೇಟುಗಳು ದಾಳಿ ವೇಳೆ ಪತ್ತೆಯಾಗಿದೆ.ಕಾಗದ ಪತ್ರಗಳ ಶೋಧ ಕಾರ್ಯ ಮುಂದುವರೆಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʼಹೋಳಿʼ ಪ್ರಯುಕ್ತ ನಾಳೆ ಬಂದ್‌ ಇರಲಿದೆಯಾ ಬ್ಯಾಂಕ್.?‌ ಇಲ್ಲಿದೆ ಈ ಕುರಿತ ಮಾಹಿತಿ

Wed Mar 16 , 2022
ನಾಳೆ ಹೋಳಿ ಹಬ್ಬವಿದ್ದು, ಬ್ಯಾಂಕುಗಳು ರಜೆ ಇರಲಿವೆಯಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಕೆಲವೊಂದು ರಾಜ್ಯಗಳು ಅಂದು ಸಾರ್ವತ್ರಿಕ ರಜೆ ಘೋಷಿಸಿವೆ. ಆದರೆ ಅಂದು ಕರ್ನಾಟಕದ ಬ್ಯಾಂಕುಗಳಿಗೆ ಯಾವುದೇ ರಜೆ ಇರುವುದಿಲ್ಲ.   ಮೂಲಗಳ ಪ್ರಕಾರ ಉತ್ತರಾಖಾಂಡ್‌, ಜಾರ್ಖಂಡ್‌ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಮಾತ್ರ ಬ್ಯಾಂಕುಗಳಿಗೆ ರಜೆ ಇರಲಿದೆ ಎಂದು ತಿಳಿದುಬಂದಿದೆ. ಇನ್ನುಳಿದಂತೆ ಮಿಕ್ಕ ರಾಜ್ಯಗಳಲ್ಲಿ ಎಂದಿನಂತೆ ಬ್ಯಾಂಕುಗಳು ಕಾರ್ಯ ನಿರ್ವಹಿಸಲಿವೆ. ಈಗ ರಜೆ ಘೋಷಿಸಿರುವ ರಾಜ್ಯಗಳಲ್ಲಿ […]

Advertisement

Wordpress Social Share Plugin powered by Ultimatelysocial