ʼಹೋಳಿʼ ಪ್ರಯುಕ್ತ ನಾಳೆ ಬಂದ್‌ ಇರಲಿದೆಯಾ ಬ್ಯಾಂಕ್.?‌ ಇಲ್ಲಿದೆ ಈ ಕುರಿತ ಮಾಹಿತಿ

ನಾಳೆ ಹೋಳಿ ಹಬ್ಬವಿದ್ದು, ಬ್ಯಾಂಕುಗಳು ರಜೆ ಇರಲಿವೆಯಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಕೆಲವೊಂದು ರಾಜ್ಯಗಳು ಅಂದು ಸಾರ್ವತ್ರಿಕ ರಜೆ ಘೋಷಿಸಿವೆ. ಆದರೆ ಅಂದು ಕರ್ನಾಟಕದ ಬ್ಯಾಂಕುಗಳಿಗೆ ಯಾವುದೇ ರಜೆ ಇರುವುದಿಲ್ಲ.

 

ಮೂಲಗಳ ಪ್ರಕಾರ ಉತ್ತರಾಖಾಂಡ್‌, ಜಾರ್ಖಂಡ್‌ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಮಾತ್ರ ಬ್ಯಾಂಕುಗಳಿಗೆ ರಜೆ ಇರಲಿದೆ ಎಂದು ತಿಳಿದುಬಂದಿದೆ.

ಇನ್ನುಳಿದಂತೆ ಮಿಕ್ಕ ರಾಜ್ಯಗಳಲ್ಲಿ ಎಂದಿನಂತೆ ಬ್ಯಾಂಕುಗಳು ಕಾರ್ಯ ನಿರ್ವಹಿಸಲಿವೆ.

ಈಗ ರಜೆ ಘೋಷಿಸಿರುವ ರಾಜ್ಯಗಳಲ್ಲಿ ಹೋಳಿ ದಹನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅಲ್ಲಿ ರಜೆ ಘೋಷಿಸಲಾಗಿದೆ. ಅದಾಗ್ಯೂ ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳು ಅಲ್ಲಿ ಎಂದಿನಂತೆ ಲಭ್ಯವಿರುತ್ತವೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಪ್ರತಿ ತಿಂಗಳು ಆರಂಭವಾಗುವ ಮುನ್ನವೇ ಆಯಾ ತಿಂಗಳ ರಜೆ ಘೋಷಿಸುತ್ತಿದ್ದು, ಇದು ರಾಜ್ಯಗಳಿಂದ ರಾಜ್ಯಗಳಿಗೆ ಭಿನ್ನವಾಗಿದೆ. ಮಾರ್ಚ್‌ 17 ರಜೆ ಎಂದು ಘೋಷಿಸಲಾಗಿದ್ದರೂ ಅದು ಉತ್ತರಾಖಾಂಡ್‌, ಜಾರ್ಖಂಡ್‌ ಹಾಗೂ ಉತ್ತರ ಪ್ರದೇಶ ರಾಜ್ಯಗಳಿಗೆ ಮಾತ್ರ ಅನ್ವಯವಾಗಲಿದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೋಳಿ ಹಬ್ಬದ ನಂತರ ಹಿಜಾಬ್​ ಭವಿಷ್ಯ: ಸದ್ಯ ಅರ್ಜೆಂಟಿಲ್ಲ ಎಂದ ಸುಪ್ರೀಂಕೋರ್ಟ್

Wed Mar 16 , 2022
ನವದೆಹಲಿ: ಹಿಜಾಬ್ ಧರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ನೀಡಿರುವ ಆದೇಶ ಕಾನೂನುಬದ್ಧವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಾ.15ರಂದು ತೀರ್ಪು ನೀಡುತ್ತಿದ್ದಂತೆಯೇ ಈ ತೀರ್ಪನ್ನು ಪ್ರಶ್ನಿಸಿ ಹಲವರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ.ಹಿಜಾಬ್ ಧರಿಸಿವುದು ಮುಸ್ಲಿಂ ಮಹಿಳೆಯರ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೈಕೋರ್ಟ್ ಹೇಳಿದೆ. ಈ ಕುರಿತು ಸರ್ಕಾರ ನೀಡಿದ ಆದೇಶ ಕಾನೂನುಬದ್ಧವಾಗಿದೆ. ಫೆಬ್ರವರಿ 5ರಂದು ಸರ್ಕಾರ ನೀಡಿದ ಆದೇಶವನ್ನು ಅಮಾನ್ಯಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ ಹೇಳಿದೆ. ಇದನ್ನು ಸುಪ್ರೀಂಕೋರ್ಟ್​ನಲ್ಲಿ ವಿದ್ಯಾರ್ಥಿನಿಯರು […]

Advertisement

Wordpress Social Share Plugin powered by Ultimatelysocial