ಕಾಶಿ ಯಾತ್ರೆಗೆ ಸಬ್ಸಿಡಿ ಪಡೆಯುವುದು ಹೇಗೆ?

ಕರ್ನಾಟಕ ರಾಜ್ಯ ಸರ್ಕಾರವು ಬಜೆಟ್ನಲ್ಲಿ ಘೋಷಿಸಿದಂತೆ ಕಾಶಿ ಯಾತ್ರೆಗೆ ರೂ 5000 ಸಹಾಯಧನ ನೀಡುವುದಾಗಿ ಘೋಷಿಸಿದೆ. 2022-23ರ ಬಜೆಟ್ನಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಈ ಘೋಷಣೆ ಮಾಡಿದ್ದರು. ಆ ಘೋಷಣೆಯನ್ನು ಅನುಷ್ಠಾ(Kashi Yatra subsidy) ಕೈಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಗೆ 5000 ರೂಪಾಯಿ ಸಹಾಯಧನ ನೀಡಲು ತಾತ್ವಿಕ ಅನುಮೋದನೆಯ ಪ್ರಕಾರ ಆದೇಶ ಹೊರಡಿಸಿದೆ.
ಕಾಶಿಗೆ ಅಪಾರ ಸಂಖ್ಯೆಯ ಭಕ್ತರು (Tour to Kashi) ಭೇಟಿ ನೀಡುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ನೀವು ಕಾಶಿ ಯಾತ್ರಾ ಸಬ್ಸಿಡಿ ಯೋಜನೆ 2022 ರ ಪ್ರಯೋಜನಗಳನ್ನು ಕಾಶಿ ಯಾತ್ರೆಗೆ ಖರ್ಚು ಮಾಡಲು ಹಣವಿಲ್ಲದ ಆರ್ಥಿಕ ದುರ್ಬಲ ವರ್ಗದ ಜನರಿಗೆ ಎಂದೇ ರೂಪಿಸಲಾಗಿದೆ.
ಆದ್ದರಿಂದ ಕಾಶಿ ಯಾತ್ರೆ ಕೈಗೊಳ್ಳುವ ಮನಸ್ಸಿರುವವರು ತಮ್ಮ ಕಾಶಿ ಯಾತ್ರೆಯನ್ನು ಪೂರ್ಣಗೊಳಿಸಲು ಈ ಮೊತ್ತವನ್ನು ಬಳಸಬಹುದಾಗಿದೆ. ಮಾಹಿತಿಯ ಪ್ರಕಾರ ಪ್ರತಿ ವರ್ಷ 30,000 ಯಾತ್ರಾರ್ಥಿಗಳು ಮುಜರಾಯಿ, ಹಜ್ ಮತ್ತು ವಕ್ಫ್ ಸಬ್ಸಿಡಿ ಪಡೆಯುತ್ತಾರೆ.

ಕಾಶಿ ಯಾತ್ರಾ ಸಬ್ಸಿಡಿ ಯೋಜನೆಗೆ ಅರ್ಹತೆಯ ಮಾನದಂಡಗಳು
ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ಅರ್ಹ ಭಕ್ತರಿಗೆ ಕಾಶಿ ಯಾತ್ರೆಗೆ 5000 ರೂ.
ಈ ಮೊತ್ತವನ್ನು ಕಾಶಿ ಯಾತ್ರೆಯ ವೆಚ್ಚವಾಗಿ ಬಳಸಬಹುದು.
ಪ್ರಯೋಜನಗಳನ್ನು ಪಡೆಯಲು ಅಧಿಕೃತ ಪ್ರಕಟಣೆಯ ನಂತರ ನೀವು ಎಲ್ಲಾ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬೇಕು.

ಅಗತ್ಯವಿರುವ ದಾಖಲೆಗಳು
ಕಾಶಿ ಯಾತ್ರಾ ಸಬ್ಸಿಡಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಕೆಲವು ದಾಖಲೆಗಳು ಬೇಕಾಗುತ್ತವೆ.
ಆಧಾರ್ ಕಾರ್ಡ್
ಮತದಾರರ ಗುರುತಿನ ಚೀಟಿ
ಶಾಶ್ವತ ನಿವಾಸ ಪುರಾವೆ
ಮೊಬೈಲ್ ನಂಬರ್
ಪಾಸ್ಪೋರ್ಟ್ ಅಳತೆಯ ಭಾವಚಿತ್ರ

ಕಾಶಿ ಯಾತ್ರೆಯ ಸಬ್ಸಿಡಿ ಕರ್ನಾಟಕ 2022 ಆನ್ಲೈನ್ ನೋಂದಣಿಗೆ ಹೇಗೆ ಅರ್ಜಿ ಸಲ್ಲಿಸಬೇಕು?
ಕಾಶಿ ಯಾತ್ರೆಯ ಸಬ್ಸಿಡಿ ಯೋಜನೆಗಾಗಿ ತಮ್ಮ ನೋಂದಣಿಯನ್ನು ಮಾಡಿಕೊಳ್ಳಲು ಹಲವರು ಈಗಾಗಲೇ ಬಯಸಿದ್ದಾರೆ. ಆದರೆ ಇದೀಗ ಸರ್ಕಾರ ಕಾಶಿ ಯಾತ್ರೆಯ ಸಹಾಯಧನದ ಆದೇಶ ಹೊರಡಿಸಿದ್ದು ಮುಂದಿನ ದಿನಗಳಲ್ಲಿ ಅಧಿಕೃತ ಅರ್ಜಿ ನಮೂನೆ ಬಿಡುಗಡೆಯಾಗಲಿದೆ. ಕಾಶಿ ಯಾತ್ರೆ ಸಹಾಯಧನದ ಅರ್ಜಿ ಬಿಡುಗಡೆಯ ಕುರಿತು ಮುಜರಾಯಿ ಇಲಾಖೆಯ ಅಧಿಕೃತ ವೆಬ್ಸೈಟ್ ಗಮನಿಸುತ್ತಿರಬೇಕು, ವೆಬ್ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಕಾಶಿ ಯಾತ್ರೆಗೆ ಹೋಗುವುದು ಅಂದರೆ ಸಕಲ ಹಿಂದೂ ಜನರಿಗೆ ಜೀವಮಾನದ ಕನಸು ಆಗಿರುತ್ತದೆ. ಹೀಗಾಗಿ ಸಾಯೋದ್ರೊಳಗೆ ಒಮ್ಮೆಯಾದರೂ ಕಾಶಿ ಯಾತ್ರೆಗೆ ಹೋಗಲು ಬಹುತೇಕ ಆಸ್ತಿಕ ಭಕ್ತರು ಇಚ್ಛೆ ಹೊಂದಿರುತ್ತಾರೆ. ಸರ್ಕಾರಗಳು ಹಜ್ ಯಾತ್ರೆಗೆ ಹೋಗಲು ಮುಸ್ಲಿಂ ಸಮುದಾಯಕ್ಕೆ ನೆರವು ನೀಡುವ ಸಂಪ್ರದಾಯವಿದೆ. ಅದೇ ರೀತಿ ಕರ್ನಾಟಕ ಸರ್ಕಾರವು ಉತ್ತರ ಪ್ರದೇಶದ ಕಾಶಿ ಅಥವಾ ಆಧುನಿಕ ವಾರಣಾಸಿಯಯ ದರ್ಶನ ಪಡೆಯಲು ಬಯಸುವ ಯಾತ್ರಾರ್ಥಿಗಳಿಗೆ ಎಂದೇ ಹೊಸ ಯೋಜನೆಯನ್ನು ಬಜೆಟ್​ನಲ್ಲಿ ಘೋಷಣೆ ಮಾಡಿತ್ತು.

ಉತ್ಸುಕರಾಗಿದ್ದಾರೆ ಬಹುತೇಕರು
ಹೀಗೆ ಮೂಲಭೂತ ಅಗತ್ಯ ದಾಖಲಾತಿಗಳನ್ನು ಸಲ್ಲಿಸುವ ಮೂಲಕ ಹಿಂದೂ ಯಾತ್ರಾರ್ಥಿಗಳು ಕರ್ನಾಟಕ ಸರ್ಕಾರ ಘೋಷಿಸಿರುವ ಕಾಶಿ ಯಾತ್ರೆಯ ಸಹಾಯ ಧನವನ್ನು ಪಡೆಯಬಹುದಾಗಿದೆ.

ಈ ಯೋಜನೆಯ ಬಗ್ಗೆ ಸಮಾಜದಲ್ಲಿ ಧನಾತ್ಮಕ ಪ್ರತಿಕ್ರಿಯೆ ಕೇಳಿಬಂದಿತ್ತು. ವಾರಣಾಸಿ ಅಥವಾ ಕಾಶಿ ಯಾತ್ರೆಗೆ ಹೋಗಲು ಸಬ್ಸಿಡಿ ಪಡೆಯಲು ಬಹುತೇಕರು ಉತ್ಸುಕರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವರ್ಕಿಂಗ್ ಬರ್ತ್ಡೇ ಖುಷಿ ತಂದಿದೆ: ವರುಣ್ ಧವನ್

Sun Apr 24 , 2022
ಭಾನುವಾರ 35 ನೇ ವರ್ಷಕ್ಕೆ ಕಾಲಿಟ್ಟ ನಟ ವರುಣ್ ಧವನ್, ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎರಡು ವರ್ಷಗಳ ನಂತರ ಮನೆಯಲ್ಲಿಯೇ ಕುಳಿತು ಸಿನಿಮಾ ಸೆಟ್‌ನಲ್ಲಿ ಹುಟ್ಟುಹಬ್ಬವನ್ನು ಕಳೆದಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ನಟ ಪ್ರಸ್ತುತ ನಿತೇಶ್ ತಿವಾರಿ ಅವರ ಬವಾಲ್ ಚಿತ್ರೀಕರಣದಲ್ಲಿದ್ದಾರೆ, ಇದರಲ್ಲಿ ಅವರು ಜಾನ್ವಿ ಕಪೂರ್ ಅವರೊಂದಿಗೆ ಪರದೆಯ ಜಾಗವನ್ನು ಹಂಚಿಕೊಂಡಿದ್ದಾರೆ. ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳ ಪ್ರೀತಿ ಮತ್ತು ಶುಭಾಶಯಗಳಿಗಾಗಿ ವರುಣ್ Instagram ಗೆ ಧನ್ಯವಾದ ಹೇಳಿದ್ದಾರೆ. “ಇದು […]

Advertisement

Wordpress Social Share Plugin powered by Ultimatelysocial