ಇಂದು ದಿವಂಗತ ನಟ ಕಾಶಿನಾಥ್ 69ನೇ ಜನ್ಮದಿನ, ಗುರುಗಳನ್ನ ನೆನೆದ ಶಿಷ್ಯಂದಿರು..!

ಇಂದು ಕನ್ನಡ ಚಲನಚಿತ್ರದ ದಿವಂಗತ ಹಿರಿಯ ನಟ, ನಿರ್ಮಾಪಕ ಕಾಶೀನಾಥ್ ಅವರ 69ನೇ ಜನ್ಮದಿನ. ಈ ಹಿನ್ನೆಲೆ ಅವರ ಶಿಷ್ಯಂದಿರಾದ ನಟ ಉಪೇಂದ್ರ ಮತ್ತು ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಚಿತ್ರರಂಗದ ಗಣ್ಯರು ಕಾಶಿನಾಥರನ್ನ ಸ್ಮರಿಸಿದ್ದಾರೆ. ಕನ್ನಡದಲ್ಲಿ ಮೇರು ನಟನಾಗಿ, ನಿರ್ದೇಶಕನಾಗಿ ಚಿತ್ರರಂಗದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ ಅದ್ಭುತ ಪ್ರತಿಭೆ ನಮ್ಮ ಜೊತೆಗಿರದಿದ್ದರೂ ಅವರ ನೆನಪುಗಳು ಅಜರಾಮರ.

ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನೆಬ್ಬಿಸಿದ್ದ ಕಾಶಿನಾಥ್ ಅವರು ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ತಮ್ಮದೇ ಆದ ವಿಭಿನ್ನತೆಯಿಂದ ಖ್ಯಾತ ಪಡೆದಿದ್ದವರು. ಕನ್ನಡ ಚಿತ್ರರಂಗದಲ್ಲಿ ಹಲವಾರು ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಟ್ಟ ಮಹಾನ್ ದಿಗ್ಗಜ. 1976 ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಹಲವಾರು ಚಿತ್ರಗಳಲ್ಲಿ ನಟಿಸಿ, ನಿರ್ದೇಶಿಸಿ, ನಿರ್ಮಾಣವನ್ನು ಸಹ ಮಾಡಿ ಅಭಿಮಾನಿಗಳಲ್ಲಿ ಮನದಲ್ಲಿ ನೆಲಿಸಿದ್ದವರು. ಇವರ ನಟನೆಯ ಕೊನೆಯ ಚಿತ್ರ ತರುಣ್ ಸುಧೀರ್ ನಿರ್ದೇಶನದ ಚೌಕ. ನಮ್ಮೆಲ್ಲರಿನ್ನು ಈ ಚಿತ್ರದ ಮೂಲಕ ಕೊನೆಯದಾಗಿ ನಕ್ಕು ನಗಿಸಿ, ಮನರಂಜನೆಯನ್ನು ನೀಡಿ ಕಣ್ಮರೆಯಾದ್ರು. ನಮ್ಮೊಂದಿಗೆ ಇಂದು ಕಾಶಿನಾಥ್ ಇಲ್ಲದಿರಬಹುದು, ಆದರೆ ಸಾಧನೆ ಮತ್ತು ನೆನಪುಗಳು ಇಂದಿಗೂ ಅಮರ.

 

Please follow and like us:

Leave a Reply

Your email address will not be published. Required fields are marked *

Next Post

ಶಿವಾಜಿನಗರಕ್ಕೆ ಕಂಟಕವಾದ ಮಣಿಪುರಿಗಳು

Fri May 8 , 2020
ಬೆಂಗಳೂರು: ಹೊಂಗಸಂದ್ರಕ್ಕೆ ಬಿಹಾರಿಗಳು ಕಂಟಕವಾದAತೆ ಶಿವಾಜಿನಗರಕ್ಕೆ ಮಣಿಪುರ ಮತ್ತು ಅಸ್ಸೋಂ ಮೂಲದ ನಾಲ್ವರಿಂದ ಹಲವಾರು ಮಂದಿಗೆ ಕೊರೊನಾ ಸೋಂಕು ಹರಡಿರುವ ಸಾಧ್ಯತೆಗಳಿವೆ. ಖಾಸಗಿ ಹೋಟೆಲ್‌ನ ಹೌಸ್‌ಕೀಪರ್‌ನಿಂದ ಈ ನಾಲ್ಕು ಮಂದಿಗೆ ಸೋಂಕು ಹರಡಿದೆ. ಜ್ಯುವೆಲರಿ ಶಾಪ್, ಫರ್ನೀಚರ್ ಶಾಪ್, ಚಿಕನ್ ಸೆಂಟರ್ ಹಾಗೂ ಖಾಸಗಿ ಹೊಟೇಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದವರಿಗೆ ಕೊರೊನಾ ಕಾಣಿಸಿಕೊಂಡಿದೆ. ಈ ನಾಲ್ವರು ಶಿವಾಜಿನಗರದಾದ್ಯಂತ ಓಡಾಡಿರುವುದರಿಂದ ಇವರ ಜೊತೆ ಪ್ರಾಥಮಿಕ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದವರನ್ನು […]

Advertisement

Wordpress Social Share Plugin powered by Ultimatelysocial