60 K G. ತೂಕದ ಮೊದಲ ಮೀನು ಮಲ್ಪೆ.

ಮಲ್ಪೆ: ಮಲ್ಪೆ ಬಂದರಿನಲ್ಲಿ 60 ಕೆ.ಜಿ. ತೂಕದ ಮಡಲು ಮೀನು ಬಲೆಗೆ ಸಿಕ್ಕಿದೆ. ಸನ್ಮಯ ಬೋಟಿನ ಬಲೆಗೆ ಬಿದ್ದ ಈ ಮೀನನ್ನು ನೋಡಲು ಮಲ್ಪೆ ಬಂದರಿನಲ್ಲಿ ಜನ ಜಮಾಯಿಸಿದ್ದರು.ಈ ಮೀನು ಗಂಟೆಗೆ 110 ಕಿ.ಮೀ.ನಂತೆ ಜಗತ್ತಿನಾದ್ಯಂತ ಇತರ ಮೀನುಗಳಿಗಿಂತ ವೇಗವಾಗಿ ಚಲಿಸುತ್ತದೆ.ಇದು ಬಂಗುಡೆ, ಬೂತಾಯಿ, ಅಕ್ಟೋಪಸ್‌ ಇನ್ನಿತರ ಮೀನಗಳನ್ನು ತಿನ್ನುತ್ತದೆ. ಇದರಲ್ಲಿ ಮರ್ಲಿನ್‌ ಎಂಬ ಜಾತಿಯ ಮೀನೂ ಇದೆ. ಇದರ ಮಾಂಸ ರುಚಿಕರವಾಗಿರುತ್ತದೆ ಎಂದು ಕಡಲಜೀವಿ ಶಾಸ್ತ್ರದ ಸಂಶೋಧಕ ಕಾರವಾರದ ಡಾ| ಶಿವಕುಮಾರ್‌ ಹರಗಿ ತಿಳಿಸಿದ್ದಾರೆ.ಮಡಲು ಮೀನು  ಕೆ.ಜಿ.ಗೆ 120 ರೂಪಾಯಿಯಂತೆ ಮಾರಾಟವಾಗಿದೆ, ಸಾಮಾನ್ಯವಾಗಿ 35 ಕೆ.ಜಿ. ವರೆಗೆ ಬಂದಿದ್ದರೂ ಈ ಮೀನು 60 ಕೆ.ಜಿ. ಇರುವುದು ಬಲು ಅಪರೂಪ ಎಂದು ಮೀನು ವ್ಯಾಪಾರಿ ವಿಕ್ರಮ್‌ ಹೇಳಿದ್ದಾರೆ. ವೈಜ್ಞಾನಿಕವಾಗಿ ಸೈಲ್‌ ಮೀನು ಎಂದು ಕರೆಯಲಾಗುತ್ತಿದ್ದು, ಸ್ಥಳೀಯವಾಗಿ ಮಡಲಿನ ಆಕೃತಿ (ತೆಂಗಿನ ಸೋಗೆ) ಇರುವುದರಿಂದ ಮಡಲು ಮೀನು ಎಂದು ಕರೆಯುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

BENGALURU: ವಿಕಲಚೇತನ ಮಹಿಳೆಗೆ ಕಾಲಿನಿಂದ ಒದ್ದ ಬೆಂಗಳೂರು ಟ್ರಾಫಿಕ್ ಪೊಲೀಸ್ ಎಎಸ್ಐ ಆರ್ ನಾರಾಯಣ ಅಮಾನತು;

Mon Jan 31 , 2022
ಬೆಂಗಳೂರು, ಜನವರಿ 31: ಟ್ರಾಫಿಕ್ ಪೊಲೀಸ್ ಅಸಿಸ್ಟೆಂಟ್ ಸಬ್-ಇನ್‌ಸ್ಪೆಕ್ಟರ್ (ಎಎಸ್‌ಐ) ಆರ್ ನಾರಾಯಣ್ ಕರ್ನಾಟಕದ ರಾಜಧಾನಿ ಬೆಂಗಳೂರು ಜನವರಿ 29 ರಂದು ಮಹಿಳೆಯೊಬ್ಬರನ್ನು ಒದೆಯುವುದನ್ನು ನೋಡಿದ ನಂತರ ಅಮಾನತುಗೊಳಿಸಲಾಗಿದೆ. ಹಲಸೂರು ಗೇಟ್ ಟ್ರಾಫಿಕ್ ಪೊಲೀಸ್ ಠಾಣೆಗೆ ಲಗತ್ತಿಸಿರುವ ಆರ್ ನಾರಾಯಣ ಅವರು ವಾಹನಗಳನ್ನು ಎಳೆದುಕೊಂಡು ಹೋಗುವಾಗ ಕಲ್ಲು ತೂರಾಟ ನಡೆಸಿದ ವಿಕಲಚೇತನ ಮಹಿಳೆಗೆ ಥಳಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೆಸಿ ರಸ್ತೆಯ ಮೈಸೂರು ಕಟ್ಟಡದ ಬಳಿ […]

Advertisement

Wordpress Social Share Plugin powered by Ultimatelysocial