ತಮಿಳುನಾಡಿನಲ್ಲಿ ಲುಲು ಮಾಲ್ ಗೆ ಒಂದು ಇಟ್ಟಿಗೆ ಇಡಲು ಬಿಡುವುದಿಲ್ಲ :

ತಮಿಳುನಾಡಿನಲ್ಲಿ ಲುಲು ಮಾಲ್ ನಿರ್ಮಾಣಕ್ಕೆ ಒಂದು ಇಟ್ಟಿಗೆ ಇಡಲು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ಬಿಜೆಪಿ ಮತ್ತು ಎಐಎಡಿಎಂಕೆ ಮಾಲ್ ನಿರ್ಮಾಣಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದು, ಮಾಲ್ ನಿರ್ಮಾಣವಾದರೆ ಅದು ಸಣ್ಣ ಪುಟ್ಟ ಚಿಲ್ಲರೆ ವ್ಯಾಪಾರಿಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ ಎಂದಿದೆ.

ಚಿಲ್ಲರೆ ವ್ಯಾಪಾರಸ್ಥರು, ಸಣ್ಣಪುಟ್ಟ ಅಂಗಡಿ ಮಾಲೀಕರು ಮತ್ತು ಕಾರ್ಮಿಕರು ಮಾಲ್ ನಿರ್ಮಾಣದ ವಿರುದ್ಧ ಹೋರಾಟಕ್ಕೆ ಇಳಿಯುವಂತೆ ಎಐಎಡಿಎಂಕೆ ಕರೆ ನೀಡಿದೆ.

ಕೇರಳ, ಕರ್ನಾಟಕ ಹಾಗೂ ಅರಬ್ ರಾಷ್ಟ್ರಗಳಲ್ಲಿ ಹಲವಾರು ಮಾಲ್ ಮತ್ತು ಹೈಪರ್ ಮಾರ್ಕೆಟ್ ಹೊಂದಿರುವ ಪ್ರಸಿದ್ಧ ಉದ್ಯಮಿ ಪದ್ಮಶ್ರೀ ಎಂ.ಎ ಯೂಸುಫ್ ಅಲಿ ಮಾಲೀಕತ್ವದ ಲುಲು ಗ್ರೂಪ್ ತಮಿಳುನಾಡಿನಲ್ಲಿ ಎರಡು ಬೃಹತ್ ಮಾಲ್ ನಿರ್ಮಾಣಕ್ಕೆ ಮುಂದಾಗಿದೆ. ಕಳೆದ ತಿಂಗಳು ಸಿಎಂ ಎಂ. ಕೆ ಸ್ಟಾಲಿನ್ ಅಬುದಾಬಿಗೆ ಭೇಟಿ ನೀಡಿದ ವೇಳೆ ಯೂಸುಫ್ ಅಲಿ ಜೊತೆ 3,500 ಬಂಡವಾಳ ಹೂಡಿಕೆಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದ ಪ್ರಕಾರ, 2,500 ಕೋಟಿ ರೂಪಾಯಿಯಲ್ಲಿ ಎರಡು ಬೃಹತ್ ಮಾಲ್ ಮತ್ತು 100 ಕೋಟಿ ರೂಪಾಯಿಯಲ್ಲಿ ಆಹಾರ ಸಂಸ್ಕರಣೆ ಉಪಕ್ರಮ ಸ್ಥಾಪಿಸಲಾಗುತ್ತದೆ. ಸರ್ಕಾರದ ಈ ಒಪ್ಪದಕ್ಕೆ ಪ್ರತಿಪಕ್ಷ ಎಐಎಡಿಎಂಕೆ ಮತ್ತು ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದ.ಆಫ್ರಿಕಾ ಸರಣಿಗೆ ಟೀಂ ಇಂಡಿಯಾಗೆ ಹೊಸ ನಾಯಕ?

Mon May 9 , 2022
  ಮುಂಬೈ: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾಗೆ ಹೊಸ ನಾಯಕನ ಸಾರಥ್ಯ ಸಿಗುವ ಸಾಧ‍್ಯತೆಯಿದೆ. ಐಪಿಎಲ್ ನ ಸತತ ಕ್ರಿಕೆಟ್ ನಿಂದ ಬಳಲಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ. ಹೀಗಾಗಿ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ತಂಡಕ್ಕೆ ಹೊಸ ನಾಯಕನ ಆಗಮನವಾಗಲಿದೆ. ಕೆಎಲ್ ರಾಹುಲ್ ಅಥವಾ ರಿಷಬ್ ಪಂತ್ ಗೆ ಟಿ20 ಸರಣಿಗೆ […]

Advertisement

Wordpress Social Share Plugin powered by Ultimatelysocial