ಕೆಸಿಸಿ ಆಯ್ತು.. ಸಿಸಿಎಲ್ ಬಂತು..

ಳೆದೊಂದು ವಾರದಿಂದ ಸೆಲೆಬ್ರೆಟಿಗಳ ಕ್ರಿಕೆಟ್ ಪಂದ್ಯಗಳು ಜೋರಾಗಿ ನಡೆಯುತ್ತಿದೆ. ಕಳೆದ ವಾರ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಹಾಗೂ ಕರ್ನಾಟಕ ಚಲನಚಿತ್ರ ಕ್ಲಬ್ ಎರಡೂ ಒಟ್ಟಿಗೆ ನಡೆದಿದೆ. ಈ ಬೆನ್ನಲ್ಲೇ ಮತ್ತೊಂದು ಪಂದ್ಯಾವಳಿಗಳು ಆರಂಭ ಆಗಲಿದೆ. ಅದುವೇ ಟಿಸಿಎಲ್.ಹೌದು, ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 2 ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಹೀಗಾಗಿ ಮುಂದಿನ ತಿಂಗಳು ಕೂಡ ತಾರೆಯರ ಕ್ರಿಕೆಟ್ ಅಬ್ಬರ ಜೋರಾಗಿಯೇ ಇರುತ್ತೆ.ಎನ್ 1 ಕ್ರಿಕೆಟ್ ಅಕಾಡೆಮಿ ಕಳೆದ ಬಾರಿ ಟೆಲಿವಿಷನ್ ಪ್ರೀಮಿಯರ್ ಲೀಗ್ ಅನ್ನು ಅದ್ದೂರಿಯಾಗಿ ಆರಂಭಿಸಿತ್ತು. ಈಗ ಅದರ ಸೀಸನ್ -2 ಆರಂಭ ಮಾಡುವುದಕ್ಕೆ ರೆಡಿಯಾಗಿದೆ. ಮಾರ್ಚ್ ತಿಂಗಳಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್-2 ಆರಂಭವಾಗುತ್ತಿದ್ದು, ವೇದಿಕೆ ಸಜ್ಜಾಗುತ್ತಿದೆ. ಮುಂದಿನ ತಿಂಗಳು ಮಾರ್ಚ್ 12,13,14,15ರಂದು ಒಟ್ಟು ನಾಲ್ಕು ದಿನಗಳ ಕಾಲ ಟಿಸಿಎಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.”ಕಳೆದ ವರ್ಷದಿಂದ ಟಿಪಿಎಲ್ ಆರಂಭಿಸಿದ್ದೇವೆ. ಮೊದಲ ಸೀಸನ್ ಯಶಸ್ವಿಯಾಗಿತ್ತು. ಇದೀಗ ಎರಡನೇ ಸೀಸನ್ ನಡೆಸಲು ಎಲ್ಲಾ ತಯಾರಿ ನಡೆಯುತ್ತಿದೆ. ಮಾರ್ಚ್ ಎರಡನೇ ವಾರ ಟಿಪಿಎಲ್ ಸೀಸನ್ 2 ನಡೆಯಲಿದೆ. ಈ ಬಾರಿ ಡೇ ಅಂಡ್ ನೈಟ್ ಪಂದ್ಯಾವಳಿ ನಡೆಯಲಿದೆ. ತಂಡ, ನಾಯಕರ ಆಯ್ಕೆ ಎಲ್ಲವೂ ನಡೆದಿದೆ. ಮಾರ್ಚ್ 7ರಂದು ಜೆರ್ಸಿ ಲಾಂಚ್ ಮಾಡಲಿದ್ದೇವೆ. ಟಿಪಿಎಲ್ ಟ್ರೋಫಿ ಗೆದ್ದ ತಂಡದ ಸದಸ್ಯರಿಗೆ ಪರ್ಪಲ್ ರಾಕ್ ಎಂಟರ್ಟೈನರ್ಸ್ ದ್ವಿಚಕ್ರ ವಾಹನವನ್ನು ನೀಡುತ್ತಿದೆ. ಕಳೆದ ಬಾರಿ ಟೂರ್ನಮೆಂಟ್ ಮುಗಿದ ಮೇಲೆ ಪ್ರೊಡಕ್ಷನ್ ಮ್ಯಾನೇಜರ್ ಪಾರ್ಥ ಅವರಿಗೆ ಧನ ಸಹಾಯ ಮಾಡಿದ್ದೇವು. ಈ ಬಾರಿಯೂ ಕೂಡ ಹಿರಿಯ ಕಲಾವಿದರಿಗೆ ಸಹಾಯ ಧನ ನೀಡಲು ಚಿಂತನೆ ಮಾಡಿದ್ದೇವೆ” ಎಂದು ಎನ್ 1 ಕ್ರಿಕೆಟ್ ಅಕಾಡೆಮಿ ಆಯೋಜಕರಾದ ಬಿ.ಆರ್. ಸುನಿಲ್ ಕುಮಾರ್ ತಿಳಿಸಿದ್ದಾರೆ.ಅಂದ್ಹಾಗೆ, ಟಿಸಿಎಲ್ ಪಂದ್ಯಾವಳಿಗಳು ಬೆಂಗಳೂರಿನ ಅಶೋಕ ರೈಸಿಂಗ್ ಸ್ಟಾರ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿದೆ. ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಆಯನಿಲೀಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಎಂಬ ಆರು ತಂಡಗಳು ಟ್ರೋಫಿಗಾಗಿ ಸೆಣೆಸಾಡಲಿವೆ. ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ ಒಂದೊಂದು ತಂಡದ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಸಿಸಿಎಲ್‌, ಕೆಸಿಸಿಯ ಹಾಗೇ ಟಿಸಿಎಲ್‌ನಲ್ಲೂ ಪ್ರತಿತಂಡಕ್ಕೂ ಓನರ್ ಹಾಗೂ ಸೆಲೆಬ್ರೆಟಿ ರಾಯಬಾರಿಗಳಿದ್ದಾರೆ. ‘ದಿ ಪರ್ಪಲ್ ರಾಕ್ ಪ್ಯಾಂಥರ್ಸ್’ ತಂಡದ ಮಾಲೀಕರು ಗಣೇಶ್ ಪಾಪಣ್ಣ ಹಾಗೂ ಯತೀಶ್ ವೆಂಕಟೇಶ್ ವಹಿಸಿಕೊಂಡಿದ್ದಾರೆ. ಹಾಗೇ ‘ಅಶ್ವಸೂರ್ಯ ರಿಯಾಲಿಟೀಸ್’ಕ್ಕೆ ರಂಜಿತ್ ಕುಮಾರ್ , ಮೊಹಮ್ಮದ್ ಜಾಕೀರ್ ಹುಸೇನ್ ಮತ್ತು ಪೂಜಾ ಶ್ರೀ ‘ಆನಿಹೆಲ್ಪ್ ಟೂರ್ನಿವಲ್’, ಫೈಜಾನ್ ಖಾನ್ ‘ಇನ್ಸೇನ್ ಕ್ರಿಕೆಟ್ ಟೀಂ’, ಮೊನೀಶ್ ‘ದಿ ಬುಲ್ ಸ್ಕ್ವಾಡ್’, ಅನಿಲ್ ಬಿ.ಆರ್, ದೇವನಾಥ್.ಡಿ ಹಾಗೂ ರವಿ.ಜಿ.ಎಸ್ ‘ಆಕ್ಸ್ ಫರ್ಡ್ ವಿನ್ ಟೀಂ’ ಮಾಲೀಕರಾಗಿದ್ದಾರೆ. ಐಶ್ವರ್ಯ ಸಿಂದೋಗಿ, ವಿರಾನಿಕ ಶೆಟ್ಟಿ, ರಾಶಿಕಾ ಶೆಟ್ಟಿ, ಸೊಹಾರ್ಧ, ಗಾನವಿ ಸುರೇಶ್, ಸೀಮಾ ವಸಂತ್, ಅದ್ವಿತಿ ಶೆಟ್ಟಿ, ಶ್ವೇತ ಪ್ರಸಾದ್, ಲಿಖಿತಾ ಅನಂತ್, ಯಶಸ್ವಿನಿ, ಆಶಿಕಾ ಗೌಡ, ಶ್ವೇತ ಕೊಗ್ಲೂರ್ ಟಿಪಿಎಲ್ ಸೀಸನ್ -2 ರಾಯಬಾರಿಗಳಾಗಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆ. ಚಂದ್ರನಾಥ ಆಚಾರ್ಯ ಮಹಾನ್ ಕಲಾವಿದ.

Tue Feb 28 , 2023
  ನಮ್ಮ ಮಹಾನ್ ಕಲಾವಿದ ಕೆ. ಚಂದ್ರನಾಥ ಆಚಾರ್ಯರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವವರು.ಚಂದ್ರನಾಥ ಆಚಾರ್ಯರು, 1949ರ ಫೆಬ್ರವರಿ 28ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನಿಸಿದರು. ತಂದೆ ಮಹಾಲಿಂಗ ಆಚಾರ್ಯರು. ತಾಯಿ ಸುಶೀಲಮ್ಮ. ತಾವು ಬೆಳೆದು ಬಂದ ಪರಿಸರ ಮತ್ತು ತಾವು ಕಂಡ ತಾಯಿಯ ತಂದೆ ಮಧೂರ ಮಹಾಲಿಂಗಾಚಾರ್ಯ ಮತ್ತು ಶಿವರಾಮ ಕಾರಂತರಂತಹ ವ್ಯಕ್ತಿತ್ವಗಳಿಂದ ಚಂದ್ರನಾಥ ಆಚಾರ್ಯರು ಅಪಾರವಾಗಿ ಪ್ರಭಾವಿತರಾದವರು. ಕಾಲೇಜು ಶಿಕ್ಷಣದ ವೇಳೆಯ ಹೊತ್ತಿಗೆ ಅವರಲ್ಲಿ ಕಲಾವಿದನಾಗಬೇಕೆಂಬ ಆಶಯ […]

Advertisement

Wordpress Social Share Plugin powered by Ultimatelysocial