ಕೆಡಿ to ಸಾಗಾ ಆಫ್ ಅಶ್ವತ್ಥಾಮ: ಶಿವಣ್ಣ ನಟನೆಯ ಮುಂದಿನ 4 ಚಿತ್ರಗಳಿವು; ಅಬ್ಬರಿಸುವುದು ಖಚಿತ!

ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಶಿವಣ್ಣ ಹಲವಾರು ಸಮಯದ ಬಳಿಕ ವೇದ ಚಿತ್ರದ ಮೂಲಕ ಗೆಲುವಿನ ಹಾದಿಗೆ ಮರಳಿದ್ದಾರೆ. 2022ರ ವರ್ಷಾಂತ್ಯದಲ್ಲಿ ಬಿಡುಗಡೆಗೊಂಡ ವೇದ ಚಿತ್ರ ಸದ್ಯ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದ್ದು, ಶಿವಣ್ಣ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಸಂತಸ ಹೊರಹಾಕಿದ್ದಾರೆ.

ಈ ಹಿಂದಿನ ಎ ಹರ್ಷ ಹಾಗೂ ಶಿವ ರಾಜ್‌ಕುಮಾರ್ ಕಾಂಬಿನೇಶನ್ ಚಿತ್ರಗಳಿಗೂ ಇಬ್ಬರ ಕಾಂಬೊದಲ್ಲಿ ಬಂದಿರುವ ವೇದ ಚಿತ್ರಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದು, ಶಿವಣ್ಣ ಈ ರೀತಿಯ ಒಳ್ಳೆಯ ಕಥೆಗಳನ್ನು ಆರಿಸಿಕೊಳ್ಳಬೇಕು ಎಂದು ಅಭಿಮಾನಿಗಳು ಆಶಿಸಿದ್ದಾರೆ.

ಇನ್ನು ಶಿವ ರಾಜ್‌ಕುಮಾರ್ ಅವರ ಮುಂದಿನ ಚಿತ್ರಗಳ ಕಡೆ ಗಮನ ಹರಿಸಿದರೆ ಅಭಿಮಾನಿಗಳ ಆಶಯ ನಿಜ ಆಗುವ ಎಲ್ಲಾ ಲಕ್ಷಣಗಳೂ ಸಹ ಕಾಣುತ್ತಿವೆ. ಹೌದು, ಶಿವ ರಾಜ್‌ಕುಮಾರ್ ಯುಟ್ಯೂಬ್ ಸಂದರ್ಶನಗಳಲ್ಲಿ ತಮ್ಮ ಮುಂದಿನ ನಾಲ್ಕು ಚಿತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಈ ಚಿತ್ರಗಳ ಬಗ್ಗೆ ತಿಳಿದ ಕೂಡಲೇ ಅಭಿಮಾನಿಗಳು ಎಲ್ಲಾ ಚಿತ್ರಗಳು ಅಬ್ಬರಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಅಭಿಮಾನಿಗಳು ಮಾತ್ರವಲ್ಲದೇ ಸಿನಿ ರಸಿಕರೂ ಸಹ ಶಿವ ರಾಜ್‌ಕುಮಾರ್ ಲೈನ್ ಅಪ್ ಸಿನಿಮಾಗಳ ಕಡೆ ನೋಡಿ ಸಖತ್ ಆಯ್ಕೆ ಎಂದು ಮೆಚ್ಚುಗೆ ವ್ಯಕ್ತಪಸಿ ಚಿತ್ರಗಳ ಮೇಲೆ ನಿರೀಕ್ಷೆ ಹೆಚ್ಚಿಸಿಕೊಂಡಿದ್ದಾರೆ. ವೇದ ಗೆದ್ದ ಬಳಿಕ ಶಿವ ರಾಜ್‌ಕುಮಾರ್ ಮತ್ತದೇ ರೀತಿಯ ಚಿತ್ರಗಳನ್ನು ಮಾಡ್ತಾರಾ ಅಥವಾ ವೇದ ರೀತಿ ವಿಭಿನ್ನ ಪ್ರಯತ್ನವನ್ನೇನಾದರೂ ಮಾಡ್ತಾರಾ ಎಂಬ ಪ್ರಶ್ನೆ ಏಳುವಾಗಲೇ ಹೊಸವರ್ಷದ ಪ್ರಯುಕ್ತ ಬಿಡುಗಡೆಗೊಂಡ ಘೋಸ್ಟ್ ಚಿತ್ರದ ಮೋಷನ್ ಪೋಸ್ಟರ್ ಶಿವಣ್ಣ ವಿಭಿನ್ನ ಚಿತ್ರಗಳನ್ನೇ ಮಾಡ್ತಾ ಇದ್ದಾರೆ ಎಂಬ ಉತ್ತರ ನೀಡಿತು. ಇದಷ್ಟೇ ಅಲ್ಲದೇ ಶಿವ ರಾಜ್‌ಕುಮಾರ್ ಅವರ ಇತರೆ ಮುಂದಿನ ಚಿತ್ರಗಳೂ ಸಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡಬಲ್ಲ ಚಿತ್ರಗಳಾಗಿದ್ದು, ಅವುಗಳ ಮಾಹಿತಿ ಈ ಕೆಳಕಂಡಂತಿದೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆನಡಾದಲ್ಲಿನ್ನು ವಿದೇಶಿಯರು ಮನೆ ಕೊಳ್ಳುವಂತಿಲ್ಲ!

Tue Jan 3 , 2023
ಒಟ್ಟಾವ: ಕೆನಡಾದಲ್ಲಿ ವಿದೇಶೀಯರು ಮನೆ ಕೊಳ್ಳುವುದಕ್ಕೆ ಅಲ್ಲಿನ ಸರ್ಕಾರ ವಿಧಿಸಿರುವ ನಿಷೇಧ ಜ.1ರಿಂದಲೇ ಜಾರಿಯಾಗಿದೆ. ವಿದೇಶೀಯರಿಗೆ ಮನೆಗಳನ್ನು ಕೊಳ್ಳುವುದಕ್ಕೆ ಅವಕಾಶ ನೀಡಿರುವ ಪರಿಣಾಮ, ಸ್ವದೇಶೀಯರಿಗೆ ಮನೆಗಳು ಸಿಗದ ಮಟ್ಟಕ್ಕೆ ಬೆಲೆಗಳು ಏರಿವೆ! ಇದನ್ನು ಮನಗಂಡು ಸರ್ಕಾರ ಈ ನಿರ್ಧಾರ ಮಾಡಿದೆ. ನಿಷೇಧವಿರುವುದು ನಗರದಲ್ಲಿರುವ ಮನೆಗಳನ್ನು ಕೊಳ್ಳುವುದಕ್ಕೆ ಮಾತ್ರ. ಆದರೆ ಬೇಸಿಗೆ ಕಾಲದ ಮನರಂಜನಾ ನಿವಾಸಗಳನ್ನು ಕೊಳ್ಳುವುದಕ್ಕೆ ಈಗಲೂ ಅವಕಾಶ ನೀಡಲಾಗಿದೆ. ಆದರೆ ನಿರಾಶ್ರಿತರು, ಕೆನಡಾ ಪ್ರಜೆಗಳಲ್ಲದಿದ್ದರೂ ಇಲ್ಲೇ ಶಾಶ್ವತವಾಗಿ ವಾಸಿಸುವ ವ್ಯಕ್ತಿಗಳಿಗೆ […]

Advertisement

Wordpress Social Share Plugin powered by Ultimatelysocial