ಬೆಂಗಳೂರಿನಲ್ಲೇ ಪರಭಾಷೆಯಲ್ಲಿ ‘ಕೆಜಿಎಫ್ 2’ ಬಿಡುಗಡೆ?

 

‘ಕೆಜಿಎಫ್ 2’ ಸಿನಿಮಾ ಬಿಡುಗಡೆಗೆ ಹತ್ತು ದಿನಕ್ಕೂ ಕಡಿಮೆ ದಿವಸ ಬಾಕಿ ಉಳಿದಿವೆ. ಯಾವ-ಯಾವ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂಬುದು ಬಹುತೇಕ ನಿಗದಿಯಾಗಿದೆ. ಕೊನೆ ಸಮಯದ ಬದಲಾವಣೆಗಳು ಇನ್ನೂ ಆಗಲಿಕ್ಕಿವೆ.

ಭಾರಿ ಸಂಖ್ಯೆಯ ಚಿತ್ರಮಂದಿರಗಳಲ್ಲಿ ‘ಕೆಜಿಎಫ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ದೇಶದಲ್ಲಷ್ಟೆ ಅಲ್ಲದೆ ವಿದೇಶಗಳಲ್ಲಿಯೂ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳುತ್ತಿದೆ.

ಕರ್ನಾಟಕದಲ್ಲಿ ‘ಕೆಜಿಎಫ್ 2’ ಸಿನಿಮಾ ಸ್ವಾಗತಕ್ಕೆ ಚಿತ್ರಮಂದಿರಗಳು ಸಜ್ಜಾಗುತ್ತಿವೆ. ಯಶ್‌ರ ಕಟೌಟ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಪೋಸ್ಟರ್‌ಗಳು, ಫ್ಲೆಕ್ಸ್‌ಗಳ ಮುದ್ರಣಗಳು, ಹೊಸ ದರದ ಟಿಕೆಟ್ ಪ್ರಿಂಟ್ ಹೀಗೆ ಹಲವು ವಿಧದಲ್ಲಿ ಚಿತ್ರಮಂದಿರಗಳು ತಯಾರಾಗುತ್ತಿವೆ. ಈ ನಡುವೆ ಬೆಂಗಳೂರಿನಲ್ಲಿ ಸಿನಿಮಾದ ಬಿಡುಗಡೆ ಮತ್ತು ಚಿತ್ರಮಂದಿರಗಳ ಹಂಚಿಕೆ ವಿಷಯವಾಗಿ ಸಣ್ಣ ಅಸಮಾಧಾನವೊಂದು ಆರಂಭವಾಗಿದೆ. ಈ ಅಸಮಾಧಾನ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸೂಚನೆಯೂ ಇದೆ.

ಗಾಂಧಿನಗರದಲ್ಲಿ ಪರಭಾಷೆಯಲ್ಲಿ ‘ಕೆಜಿಎಫ್ 2’ ಬಿಡುಗಡೆ!?
‘ಕೆಜಿಎಫ್ 2’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಬೆಂಗಳೂರಿನಲ್ಲಿ ಕನ್ನಡ ಮಾತ್ರವೇ ಅಲ್ಲದೆ ತೆಲುಗು, ಹಿಂದಿ, ತಮಿಳು ಆವೃತ್ತಿಗಳನ್ನೂ ಬಿಡುಗಡೆ ಮಾಡಲು ಚಿತ್ರತಂಡ ರೆಡಿಯಾಗಿದೆ. ಆದರೆ ಇದಕ್ಕೆ ಈಗಲೇ ಅಭಿಮಾನಿಗಳಿಂದ, ಕನ್ನಡಪರರಿಂದ ವಿರೋಧ ವ್ಯಕ್ತವಾಗುತ್ತಿದೆ. ಗಾಂಧಿನಗರದ ಭೂಮಿಕನಲ್ಲಿ ‘ಕೆಜಿಎಫ್ 2’ ತೆಲುಗು ಆವೃತ್ತಿ ಬಿಡುಗಡೆ ಆಗಲಿದೆ. ಅದೇ ಅಭಿನಯದಲ್ಲಿ ಹಿಂದಿ ಆವೃತ್ತಿ ಬಿಡುಗಡೆ ಆಗಲಿದೆ. ಅನುಪಮ ಮತ್ತು ತ್ರಿವೇಣಿಯಲ್ಲಿ ಕನ್ನಡ ಭಾಷೆಯಲ್ಲಿಯೇ ಸಿನಿಮಾ ಬಿಡುಗಡೆ ಆಗಲಿದೆ.

ಕನ್ನಡ ಸಿನಿಮಾ, ಕರ್ನಾಟಕದಲ್ಲಿ ಬೇರೆ ಭಾಷೆಯಲ್ಲಿ ಬಿಡುಗಡೆ ಏಕೆ?

ಆದರೆ ಕರ್ನಾಟಕದಲ್ಲಿ, ಕನ್ನಡ ಸಿನಿಮಾ ಒಂದು ಬೇರೆ ಭಾಷೆಗಳಲ್ಲಿ ಏಕೆ ಬಿಡುಗಡೆ ಆಗಬೇಕು? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇನ್ನಾವುದೇ ರಾಜ್ಯದಲ್ಲಿ ಅವರದ್ದೇ ಸಿನಿಮಾ ಅವರದ್ದೇ ರಾಜ್ಯದಲ್ಲಿ ಬೇರೆ ಭಾಷೆಗಳಲ್ಲಿ ಬಿಡುಗಡೆ ಆದದ್ದಿಲ್ಲ. ಹಾಗಿದ್ದ ಮೇಲೆ ‘ಕೆಜಿಎಫ್ 2’ ಸಿನಿಮಾ ಏಕೆ ಬೆಂಗಳೂರಿನಲ್ಲಿ ಕನ್ನಡದ ಹೊರತಾಗಿ ಬೇರೆ ಭಾಷೆಯಲ್ಲಿ ಬಿಡುಗಡೆ ಆಗಬೇಕು. ಬೆಂಗಳೂರಿನಾದ್ಯಂತ ಕನ್ನಡ ಭಾಷೆಯಲ್ಲಿಯೇ ‘ಕೆಜಿಎಫ್ 2’ ಬಿಡುಗಡೆ ಆಗಬೇಕು. ಬೇರೆ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿ ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

‘ಮಾಲ್‌ಗಳಲ್ಲಿ ಬೇಕಾದರೆ ಹಾಕಿಕೊಳ್ಳಲಿ’

ಮಾಲ್‌ಗಳಲ್ಲಿ ಒಂದೊ ಎರಡು ಶೋ ಹಾಕಿಕೊಳ್ಳಲಿ ಆದರೆ ಗಾಂಧಿನಗರದಂಥಹಾ ಏರಿಯಾದಲ್ಲಿ ಮೇನ್ ಥಿಯೇಟರ್‌ಗಳಲ್ಲಿ ಸಿನಿಮಾದ ಪರಭಾಷೆ ಆವೃತ್ತಿ ಬಿಡುಗಡೆ ಮಾಡುವುದು ಬೇಡ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ವಿವಿಧ ಭಾಷೆಯ ಜನರಿದ್ದಾರೆ. ಅವರೆಲ್ಲರಿಗೂ ನಮ್ಮ ಕನ್ನಡ ಭಾಷೆಯ ಸಿನಿಮಾವನ್ನು ಹೆಮ್ಮೆಯಿಂದ ತೋರಿಸುವ ಅವಕಾಶ ಇದು, ಭಾಷೆಯ ವಿಷಯಕ್ಕೆ ಬಡಿದಾಡಿ ಈ ಅವಕಾಶ ಕಳೆದುಕೊಳ್ಳಬೇಡಿ ಎಂದು ಮತ್ತೊಬ್ಬರು ಬುದ್ಧಿವಾದ ಹೇಳಿದ್ದಾರೆ.

ಆತಂಕಕಾರಿ ಐಡಿಯಾಗಳನ್ನು ಕೊಟ್ಟಿದ್ದಾರೆ

ಅಭಿನಯ ಚಿತ್ರಮಂದಿರದ ಬಳಿ ಮಾರ್ವಾಡಿ, ಜೈನ್ ಸಮುದಾಯದ ಜನ ಹೆಚ್ಚಿಗಿದ್ದಾರೆ ಹಾಗಾಗಿ ಅಲ್ಲಿ ಹಿಂದಿ ಸಿನಿಮಾಗಳನ್ನು ಹಾಕುವ ಸಂಪ್ರದಾಯ ಮೊದಲಿಂದಲೂ ನಡೆದು ಬಂದಿದೆ ಈಗಲೂ ಅದೇ ಮುಂದುವರೆಯಲಿ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು, ಗಾಂಧಿನಗರದ ಸುತ್ತ ಮುತ್ತ ಇರುವ ಅನ್ಯಭಾಷಿಕರನ್ನು ‘ಎತ್ತಂಗಡಿ’ ಮಾಡಿಸಲು ಇದೇ ಸೂಕ್ತ ಅವಕಾಶ ಎಂಬ ಆತಂಕಕಾರಿ ಐಡಿಯಾವನ್ನು ತೇಲಿ ಬಿಟ್ಟಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆ ಆಗುತ್ತಿದ್ದು, ಸಿನಿಮಾವು ಯಾವ ಭಾಷೆಯಲ್ಲಿ ಎಲ್ಲೆಲ್ಲಿ ಬಿಡುಗಡೆ ಆಗಲಿದೆ ಎಂಬ ನಿಖರ ಪಟ್ಟಿ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನವದೆಹಲಿ, ಏಪ್ರಿಲ್ 06: ಸುಮಾರು 200 ಕ್ಕೂ ಹೆಚ್ಚು ಬಾರಿ ಧ್ವನಿ ಮತಕ್ಕೆ

Wed Apr 6 , 2022
  ನವದೆಹಲಿ, ಏಪ್ರಿಲ್ 06: ಸುಮಾರು 200 ಕ್ಕೂ ಹೆಚ್ಚು ಬಾರಿ ಧ್ವನಿ ಮತಕ್ಕೆ ಒಳಗಾದ ಬಳಿಕ ಮಸೂದೆಯೊಂದು ಮಂಗಳವಾರ ಕೊನೆಗೂ ಅಂಗೀಕಾರಗೊಂಡಿದೆ. ಶಾಸನದಲ್ಲಿ ಒಳಗೊಂಡಿರುವ ಕಾರ್ಯವಿಧಾನದ ಕಠಿಣತೆಯನ್ನು ಈ ಘಟನೆಯು ಒತ್ತಿಹೇಳುತ್ತದೆ ಎಂದು ವರದಿ ಉಲ್ಲೇಖಿಸಿದೆ. ಬಿಲ್ ಚಾರ್ಟರ್ಡ್ ಅಕೌಂಟೆಂಟ್ಸ್, ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟೆಂಟ್ಸ್ ಮತ್ತು ಕಂಪನಿ ಸೆಕ್ರೆಟರಿಗಳ (ತಿದ್ದುಪಡಿ) ಬಿಲ್ (ಸಿಎ ಬಿಲ್), 2022 ಭಾರೀ ಚರ್ಚೆಗೆ ಕಾರಣವಾಗಿದ್ದು ಸುಮಾರು 200 ಕ್ಕೂ ಹೆಚ್ಚು ಬಾರಿ […]

Advertisement

Wordpress Social Share Plugin powered by Ultimatelysocial