ನವದೆಹಲಿ, ಏಪ್ರಿಲ್ 06: ಸುಮಾರು 200 ಕ್ಕೂ ಹೆಚ್ಚು ಬಾರಿ ಧ್ವನಿ ಮತಕ್ಕೆ

 

ನವದೆಹಲಿ, ಏಪ್ರಿಲ್ 06: ಸುಮಾರು 200 ಕ್ಕೂ ಹೆಚ್ಚು ಬಾರಿ ಧ್ವನಿ ಮತಕ್ಕೆ ಒಳಗಾದ ಬಳಿಕ ಮಸೂದೆಯೊಂದು ಮಂಗಳವಾರ ಕೊನೆಗೂ ಅಂಗೀಕಾರಗೊಂಡಿದೆ. ಶಾಸನದಲ್ಲಿ ಒಳಗೊಂಡಿರುವ ಕಾರ್ಯವಿಧಾನದ ಕಠಿಣತೆಯನ್ನು ಈ ಘಟನೆಯು ಒತ್ತಿಹೇಳುತ್ತದೆ ಎಂದು ವರದಿ ಉಲ್ಲೇಖಿಸಿದೆ.

ಬಿಲ್ ಚಾರ್ಟರ್ಡ್ ಅಕೌಂಟೆಂಟ್ಸ್, ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟೆಂಟ್ಸ್ ಮತ್ತು ಕಂಪನಿ ಸೆಕ್ರೆಟರಿಗಳ (ತಿದ್ದುಪಡಿ) ಬಿಲ್ (ಸಿಎ ಬಿಲ್), 2022 ಭಾರೀ ಚರ್ಚೆಗೆ ಕಾರಣವಾಗಿದ್ದು ಸುಮಾರು 200 ಕ್ಕೂ ಹೆಚ್ಚು ಬಾರಿ ಧ್ವನಿ ಮತ ನಡೆದ ಬಳಿಕ ಅಂಗೀಕಾರಗೊಂಡಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಉತ್ತರ ಸೇರಿದಂತೆ ಮಸೂದೆಯ ಮೇಲಿನ ಚರ್ಚೆಯು ಸುಮಾರು 2 ಗಂಟೆ 20 ನಿಮಿಷಗಳನ್ನು ತೆಗೆದುಕೊಂಡಿದೆ. 106 ಕಲಂಗಳು ಮತ್ತು ಷರತ್ತುವಾರು ತಿದ್ದುಪಡಿಗಳ ಮೇಲಿನ ಮತದಾನ ಪ್ರಕ್ರಿಯೆಯು 30 ನಿಮಿಷಗಳ ಕಾಲ ತೆಗೆದುಕೊಂಡಿದೆ. ಇದು ಒಟ್ಟು ಸಮಯದ ಶೇಕಡಾ 18 ರಷ್ಟಿದೆ.

ನಿಯಮಗಳ ಪ್ರಕಾರ, ಪ್ರತಿ ಷರತ್ತಿಗೆ ತಿದ್ದುಪಡಿಗಳನ್ನು ತರಲು ಸದಸ್ಯರ ಸಂಖ್ಯೆಯನ್ನು ಆಧರಿಸಿ ಎರಡು ಬಾರಿ ಮತ ಹಾಕಬೇಕಾಗುತ್ತದೆ. ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸವಾದಿ) ಜಾನ್ ಬ್ರಿಟ್ಟಾಸ್ ಅವರು ವಿಧೇಯಕದ ವಿವಿಧ ಷರತ್ತುಗಳಿಗೆ ತಿದ್ದುಪಡಿಗಾಗಿ 163 ಸೂಚನೆಗಳನ್ನು ನೀಡಿದರು.

ಇನ್ನು ಅವರು ವಿಧೇಯಕದ ಷರತ್ತು-ವಾರು ಪರಿಗಣನೆಯ ಸಮಯದಲ್ಲಿ ಬಹುತೇಕ ಎಲ್ಲವನ್ನು ತಿದ್ದುಪಡಿ ಮಾಡುವ ಸೂಚನೆ, ಸಲಹೆ ನೀಡಿದರು. ಹಾಗೆಯೇ ಸಿಪಿಐ ಸಂಸದ ಬಿನೋಯ್ ವಿಶ್ವಂ ಕೂಡ ಕೆಲವು ತಿದ್ದುಪಡಿಗಳನ್ನು ಮಂಡಿಸಿದರು.

ಎಲ್ಲಾ ತಿದ್ದುಪಡಿಗಳನ್ನು ಸದನದ ಮತಕ್ಕೆ ಹಾಕಬೇಕಾಗಿರುವುದರಿಂದ, ಮಸೂದೆಯನ್ನು ಅಂಗೀಕರಿಸುವ ಮೊದಲು 200 ಕ್ಕೂ ಹೆಚ್ಚು ಬಾರಿ ಧ್ವನಿ ಮತವನ್ನು ತೆಗೆದುಕೊಳ್ಳಲಾಯಿತು. ಉಪ ಸಭಾಪತಿ ಹರಿವಂಶ್ ಅವರ ಧ್ವನಿಯನ್ನು ತೀವ್ರ ಪರೀಕ್ಷೆಗೆ ಒಳಪಡಿಸಲಾಯಿತು. ಪ್ರತಿ ಸದಸ್ಯರು ತಿದ್ದುಪಡಿ ಸೂಚನೆ, ಸಲಹೆ ನೀಡಿ ಮತ ನಡೆದಿದೆ. ಬಹಳ ಸಮಯದ ನಂತರ, ಹಲವಾರು ಷರತ್ತುಗಳು ಮತ್ತು ತಿದ್ದುಪಡಿಗಳೊಂದಿಗೆ ಮಸೂದೆಯನ್ನು ಸಾಕಷ್ಟು ಸಮಯ ತೆಗೆದುಕೊಂಡು ಅಂಗೀಕಾರ ಮಾಡಲಾಗಿದೆ ಎಂದು ಸೆಕ್ರೆಟರಿಯೇಟ್ ಅಧಿಕಾರಿಗಳು ಹೇಳುತ್ತಾರೆ.

ಈ ಮಸೂದೆಯು ಚಾರ್ಟರ್ಡ್ ಅಕೌಂಟೆಂಟ್ಸ್ ಆಕ್ಟ್, 1949, ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟೆಂಟ್ಸ್ ಆಕ್ಟ್, 1959, ಮತ್ತು ಕಂಪನಿ ಸೆಕ್ರೆಟರಿ ಆಕ್ಟ್, 1980 ಅನ್ನು ತಿದ್ದುಪಡಿ ಮಾಡುತ್ತದೆ. ಇದು ಮೂರು ಕಾಯಿದೆಗಳ ಅಡಿಯಲ್ಲಿ ಶಿಸ್ತಿನ ಕಾರ್ಯವಿಧಾನವನ್ನು ಬದಲಾಯಿಸುತ್ತದೆ. ಕಾಯ್ದೆಗಳ ಅಡಿಯಲ್ಲಿ ರಚಿಸಲಾದ ಮೂರು ಸಂಸ್ಥೆಗಳ ಪ್ರಾತಿನಿಧ್ಯದೊಂದಿಗೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯ ನೇತೃತ್ವದಲ್ಲಿ ಸಮನ್ವಯ ಸಮಿತಿಯನ್ನು ಮಸೂದೆ ಕಡ್ಡಾಯಗೊಳಿಸುತ್ತದೆ. ಶಾಸನವು ಮೂರು ಕಾಯಿದೆಗಳ ಅಡಿಯಲ್ಲಿ ಕೆಲವು ದಂಡಗಳನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, ಐದು ವರ್ಷಗಳ ಅವಧಿಯಲ್ಲಿ ಸಂಸ್ಥೆಯ ಪಾಲುದಾರ ಅಥವಾ ಮಾಲೀಕರು ಪದೇ ಪದೇ ತಪ್ಪಿತಸ್ಥರೆಂದು ಕಂಡುಬಂದರೆ, ಸಂಸ್ಥೆಯ ವಿರುದ್ಧ ಶಿಸ್ತು ಕ್ರಮವನ್ನು ತೆಗೆದುಕೊಳ್ಳಬಹುದು.

ಇತ್ತೀಚಿನ ವರ್ಷಗಳಲ್ಲಿ, ಹಲವಾರು ವಂಚನೆಗಳು ಮತ್ತು ಹಗರಣಗಳು ನಡೆದಿವೆ. ಈ ಸಂದರ್ಭದಲ್ಲಿ ಶಾಸನಬದ್ಧ ಲೆಕ್ಕಪರಿಶೋಧನೆಗಳನ್ನು ನಡೆಸುವ ಸ್ವತಂತ್ರ ಲೆಕ್ಕಪರಿಶೋಧಕರ ಪಾತ್ರವನ್ನು ಪ್ರಮುಖ ಎಂದು ಪರಿಗಣಿಸಲಾಗಿದೆ. ಸುಮಾರು 13 ವರ್ಷಗಳ ಹಿಂದೆ, ಸತ್ಯಂ ಕಂಪ್ಯೂಟರ್ ಸರ್ವಿಸಸ್ ಲಿಮಿಟೆಡ್‌ನ ಸಂಸ್ಥಾಪಕ ಅಧ್ಯಕ್ಷ ಬಿ ರಾಮಲಿಂಗರಾಜು ವಿರುದ್ಧದ ಪ್ರಕರಣ ದಾಖಲಾಗಿದ್ದವು. ಈ ಕಂಪನಿಯಲ್ಲಿ 5,040 ಕೋಟಿ ರೂಪಾಯಿ ಮೌಲ್ಯದ ನಗದು ಇದೆ ಎಂದು ತಿಳಿದು ಬಂದಿತ್ತು.

ಅಕ್ಟೋಬರ್ 2018 ರಲ್ಲಿ, ಎನ್‌ಬಿಎಫ್‌ಸಿ ಸಾಲ ಮರುಪಾವತಿಯಲ್ಲಿ ನಿರಂತರವಾಗಿ ಅಡೆ ತಡೆ ಇರುವ ಕಾರಣದಿಂದಾಗಿ ಕೇಂದ್ರ ಸರ್ಕಾರವು ಐಎಲ್‌ಅಂಡ್ ಎಫ್‌ಎಸ್ ಮಂಡಳಿಯನ್ನು ರದ್ದುಗೊಳಿಸಲು ನಿರ್ಧರಿಸಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಲೀಕ ಮುಕೇಶ್ ಅಂಬಾನಿ ಮತ್ತೊಮ್ಮೆ ಅಗ್ರಸ್ಥಾನ!

Wed Apr 6 , 2022
. 2021ರಲ್ಲಿ ಇದೇ ಮೂವರು ಬಿಲಿಯನೇರ್‌ಗಳು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದರು. ವರದಿ ಪ್ರಕಾರ, ಮುಕೇಶ್ ಅಂಬಾನಿ ಒಟ್ಟು ಸಂಪತ್ತು 90. Additionally, we have online casinos where you can bet on the top overseas soccer leagues including: clickmiamibeach.com Italy, Spain, France and England. 7 ಶತಕೋಟಿ ಡಾಲರ್ ನಷ್ಟಿದೆ. ಕಳೆದ ಆರ್ಥಿಕ ವರ್ಷಕ್ಕಿಂತ ಶೇ.7ರಷ್ಟು ಹೆಚ್ಚಳವಾಗಿದೆ. ವಿಶ್ವದ 10ನೇ ಶ್ರೀಮಂತ ವ್ಯಕ್ತಿ ಮುಕೇಶ್ […]

Advertisement

Wordpress Social Share Plugin powered by Ultimatelysocial