ಕಿಲಗೆರೆ ಗ್ರಾಮದಲ್ಲಿ ಶ್ರೀ ಮಂಟೇಸ್ವಾಮಿ ಚಂದ್ರಮಂಡಲೋತ್ಸವ…

ಚಾಮರಾಜನಗರ:- ತಾಲೂಕಿನ ಕಿಲಗೆರೆ ಗ್ರಾಮದ ಶ್ರೀ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಚಂದ್ರಮಂಡಲೋತ್ಸವ ಆಚರಣೆ ಮಾಡಲಾಯಿತು…..ಪ್ರತಿವರ್ಷ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ದೇವಸ್ಥಾನದಲ್ಲಿ ನಡೆಯುವ ಚಂದ್ರಮಂಡಲೋತ್ಸ ವದ ದಿನದಂದೇ ಈ ಗ್ರಾಮದಲ್ಲೂ ಸಹ ಆಚರಣೆ ಮಾಡಲಾಗುತ್ತದೆ…..ಅದರಂತೆಯೇ ಶುಕ್ರವಾರ ರಾತ್ರಿ ದೇವಾಲಯದಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ, ದೊಡ್ಡಮ್ಮತಾಯಿ, ರಾಚಪ್ಪಾಜಿ, ಚೆನ್ನಾಜಮ್ಮ ದೇವರುಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.ನಂತರ ದೇವಾಲಯದ ಸುತ್ತ ಮಂಗಳವಾದ್ಯ, ತಮಟೆ ಮೇಳಗಳೊಂದಿಗೆ ಸತ್ತಿ, ಸೂರಿಪಾನಿ, ನಂದಿಕಂಬದೊಂದಿಗೆ ಕಂಡಾಯ ಮೆರವಣಿಗೆ ಮಾಡಿ, ದೇವಸ್ಥಾನದ ಮುಂಭಾಗ ಬಿದಿರಿನಿಂದ ಚಂದ್ರಾಕಾರದಲ್ಲಿ ಕಟ್ಟಿದ ಮಂಡಕ್ಕೆ, ಹೊಂಬಾಳೆ, ಹೂಗಳನ್ನು ಶೃಂಗರಿಸಲಾಗಿತ್ತು. ನಂತರ ದೇವರ ಘೋಷಣೆಯೊಂದಿಗೆ ಪೂಜೆ ಸಲ್ಲಿಸಿ ಅಗ್ನಿ ಸ್ಪರ್ಶ ಮಾಡಲಾಯಿತು. ಆ ಚಂದ್ರಮಂಡಲವು ದಕ್ಷಿಣಕ್ಕೆ ಹೆಚ್ಚು ಉರಿಯಿತು‌….ಚಂದ್ರಮಂಡಲ ಯಾವ ದಿಕ್ಕಿನ‌ ಕಡೆಗೆ ಅತಿ ಹೆಚ್ಚಾಗಿ ಉರಿಯುತ್ತದೆಯೋ ಆ ದಿಕ್ಕಿನಲ್ಲಿ ಈ ವರ್ಷ ಚೆನ್ನಾಗಿ ಫಸಲು ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಇದೇ ದೇವಸ್ಥಾನಕ್ಕೆ ಬಂದಿದ್ದ ಭಕ್ತಾದಿಗಳು ಚಂದ್ರಮಂಡಲಕ್ಕೆ ತಾವು ತಂದಿದ್ದಂತಹ ದವಸ ಧಾನ್ಯಗಳನ್ನು ಎರಚಿ ಭಕ್ತಿ ಮೆರೆದರು.
ನಂತರ ದೇವಸ್ಥಾನಕ್ಕೆ ಬಂದಿದಂತಹ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ಅಕ್ಕಪಕ್ಕದ ಗ್ರಾಮಗಳಿಂದಲೂ ಸಹ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು…..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಧಾರವಾಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುತ್ತಿದೆ.

Sat Jan 7 , 2023
ಎಲ್‌ ಆ್ಯಂಡ್ ಟಿ ಕ್ರೆಡಿಬಲಿಟಿ ಇರುವ ಕಂಪನಿ ಅಂತಾ ಕುಡಿಯು ನೀರಿನ ನಿರ್ವಹಣೆ ಜವಾಬ್ದಾರಿ ಕೊಟ್ಟಿದ್ದೆವು ಹೆಸರಿಗೆ ತಕ್ಕಂತೆ ಅವರು ನಡೆದುಕೊಂಡಿಲ್ಲ ಜನರಿಗೆ ಅನಾನುಕೂಲತೆ ಆಗುತ್ತಿದೆ, ನಾಲೆಜ್ ಇಲ್ಲದ ಕಾರಣ ಅವಾಂತರ ಸೃಷ್ಟಿಸಿದ್ದಾರೆ ಸಮಸ್ಯೆ ಬಗ್ಗೆ ಸದನದಲ್ಲಿ ಮಾತನಾಡಿದ್ದೆ ಜಲಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದ150 ಹಂಗಾಮಿ ನೌಕರರನ್ನು ಖಾಯಂ ಮಾಡಬೇಕು ಹಂಗಾಮಿ ನೌಕರರಿಗೆ ಎಂಟು ತಿಂಗಳಿಂದ ವೇತನ ಮಾಡಿಲ್ಲ, ಕೂಡಲೇ ಮಾಡಬೇಕು ನಗರಾಭಿವೃದ್ಧಿ ಸಚಿವರಿಗೆ ಕೂಡಲೇ ಹುಬ್ಬಳ್ಳಿಗೆ ಬಂದು ಮೀಟಿಂಗ್ ಮಾಡಲು […]

Advertisement

Wordpress Social Share Plugin powered by Ultimatelysocial