CRICKET:ಪಂತ್,ರಾಹುಲ್ ಗೆ ಪ್ರಮೋಷನ್,ರಹಾನೆ, ಪೂಜಾರಗೆ ಡಿಮೋಷನ್;

ಟೀಂ ಇಂಡಿಯಾ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಬಿಸಿಸಿಐ ಸೆಂಟ್ರಲ್ ಕಾಂಟ್ರಾಕ್ಟ್ಸ್ ನಲ್ಲಿ ಪ್ರಮೊಷನ್ ಸಿಕ್ಕಿದೆಯಂತೆ.

ಬಿಸಿಸಿಐ ಪ್ರಕಟಿಸಲಿರುವ ಸೆಂಟ್ರಲ್ ಕಾಂಟ್ರಾಕ್ಟ್ಸ್ ನಲ್ಲಿ ಈ ಇಬ್ಬರು ಗ್ರೇಡ್-ಎ ಪ್ಲಸ್ ವಿಭಾಗಕ್ಕೆ ಬಡ್ತಿ ಪಡೆಯುವ ಸಾಧ್ಯತೆಗಳಿವೆ. 2021 ವರ್ಷಕ್ಕೆ ಬಿಸಿಸಿಐ ಘೋಷಿಸಿದ ಒಪ್ಪಂದದಲ್ಲಿ ಈ ಇಬ್ಬರೂ ಗ್ರೇಡ್-ಎ ಯಲ್ಲಿದ್ದರು.

ಕಳೆದು ಒಂದು ವರ್ಷದಲ್ಲಿ ಕೆ.ಎಲ್.ರಾಹುಲ್ ಮತ್ತು ರಿಷಬ್ ಪಂತ್ ಎಲ್ಲಾ ಪಾರ್ಮೆಟ್ ಗಳ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯರಾಗಿದ್ದಾರೆ. ಹೀಗಾಗಿ ಸೆಂಟ್ರಲ್ ಗುತ್ತಿಗೆಯಲ್ಲಿ ಬಡ್ತಿ ಸಿಗುವ ನಿರೀಕ್ಷೆ ಇದೆ.ಇದುವರೆಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ ಪ್ರೀತ್ ಬುಮ್ರಾ ಮಾತ್ರ ಗ್ರೇಡ್-ಎ ಪ್ಲಸ್ ವಿಭಾಗದಲ್ಲಿದ್ದಾರೆ.

ಈ ನಡುವೆ ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗರಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರನ್ನು ಕಾಂಟ್ರಾಕ್ಟ್ ನಲ್ಲಿ ಡಿಮೋಷನ್ ಮಾಡುವ ಸಾಧ್ಯತೆಗಳಿವೆ. ಸದ್ಯ ಬ್ಯಾಡ್ ಪಾರ್ಮ್ ನಲ್ಲಿರುವ ಈ ಇಬ್ಬರು ಆಟಗಾರರು ಎ ಗ್ರೇಡ್ ನಲ್ಲಿದ್ದು, ಇದೀಗ ಬಿ ಗ್ರೇಡ್ ಗೆ ಇಳಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಇದಲ್ಲದೇ ಕಳೆದ ಒಂದು ವರ್ಷದಿಂದ ಟೀಂ ಇಂಡಿಯಾದಲ್ಲಿ ಮಿಂಚುತ್ತಿರುವ ಸಿರಾಜ್ ಗೆ ಗ್ರೇಡ್ ಸಿ ಯಿಂದ ಗ್ರೇಡ್ ಬಿಗೆ ಬಡ್ತಿ ನೀಡುವ ಸಾಧ್ಯತೆಗಳಿವೆ. ಶರ್ದೂಲ್, ಹನುಮವಿಹಾರಿ ಗೂ ಬಡ್ತಿ ಸಾಧ್ಯತೆ ಇದ್ದು, ಉಮೇಶ್ ಯಾದವ್, ಇಶಾಂತ್ ಶರ್ಮಾ ಗೆ ಡಿಮೋಷನ್ ಪಕ್ಕಾ ಎನ್ನಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BSA ಗೋಲ್ಡ್‌ಸ್ಟಾರ್ 650 ಭಾರತದಲ್ಲಿ ಬಿಡುಗಡೆ;

Wed Jan 26 , 2022
ಬೆಂಗಳೂರು: ಭಾರತದಲ್ಲಿ ಇಂದು 73ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬ್ರಿಟಿಷರ ಗುಲಾಮಗಿರಿಯಿಂದ 1947ರಲ್ಲಿ ಸ್ವಾತಂತ್ರ್ಯ ಪಡೆದ ನಂತರ, ಭಾರತವು 1950 ಜನೆವರಿ 26ರಂದು ಗಣರಾಜ್ಯವಾಯಿತು. ಸ್ವಾತಂತ್ರ್ಯದ ಪಡೆದ ಬಳಿಕವೂ ಭಾರತದಲ್ಲಿ ದೀರ್ಘಕಾಲದವರೆಗೆ ಬ್ರಿಟಿಷ್ ಕಂಪನಿಗಳು ಪ್ರಾಬಲ್ಯ ಹೊಂದಿದ್ದವು. ಗಳಲ್ಲಿ ದೇಶ ಕಟ್ಟುವ ಕೆಲಸ ಮಾಡುತ್ತಿದ್ದವು. ಕ್ರಮೇಣ ಭಾರತೀಯ ಉದ್ಯಮಿಗಳು ಮತ್ತು ಕಂಪನಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸುತ್ತಾ ಹೋದರು. ಅದರ ಪ್ರತಿಫಲವೆಂಬಂತೆ ಇಂದು ಅನೇಕ ಪ್ರಸಿದ್ಧ ಬ್ರಿಟಿಷ್ ಬ್ರ್ಯಾಂಡ್‌ಗಳು ಭಾರತೀಯ ಕಂಪನಿಗಳ ಭಾಗವಾಗಿವೆ. […]

Advertisement

Wordpress Social Share Plugin powered by Ultimatelysocial