ಕೊಪ್ಪಳ:ಸಂಭ್ರಮದಿಂದ ರಂಜಾನ್‌ ಆಚರಣೆ : ಪ್ರಾರ್ಥನೆಯಲ್ಲಿ ಭಾಗಿಯಾದ ಜನಾರ್ಧನ ರೆಡ್ಡಿ.

ಬಾಂಧವರು ನಡೆಸುತ್ತಿದ್ದ ಪ್ರಾರ್ಥನೆಯಲ್ಲಿ ಸ್ವತಃ ರೆಡ್ಡಿಯವರು ಭಾಗಿಯಾಗಿ ಸೌಹಾರ್ದತೆ ಮೆರೆದರು.  ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಶ್ರೀ ಗಾಲಿ ಜನಾರ್ಧನ ರೆಡ್ಡಿಯವರು ಇಂದು ನಗರದ ಜಯನಗರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆ ಯಲ್ಲಿ ತಾವು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.ನಂತರ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.ರಂಜಾನ್ ಹಬ್ಬವು ಮುಸ್ಲಿಂ ಸಮುದಾಯದ ಬಹು ದೊಡ್ಡ ಹಬ್ಬವಾಗಿದ್ದು ಈ ಹಬ್ಬದ 30 ದಿನಗಳ ಕಾಲ ಕಟ್ಟುನಿಟ್ಟಾಗಿ ಉಪವಾಸವಿದ್ದು ಆಚರಣೆ ಮಾಡುವುದು ಅಷ್ಟು ಸುಲಭವಲ್ಲ ಎಂದರು. ಹಬ್ಬವನ್ನು ಮುಸ್ಲಿಂ ಬಾಂಧವರು ಶಾಂತಿ, ನೆಮ್ಮದಿ ಹಾಗೂ ಸೌಹಾರ್ಧತೆಯಿಂದ ಆಚರಣೆ ಮಾಡುವುದರ ಮೂಲಕ ಮಾದರಿಯಾಗಿದ್ದಾರೆ. ಜೊತೆಗೆ ಸರ್ವ ಧರ್ಮ ಸಮುದಾಯ ಗಳೊಂದಿಗೆ ಮುಸ್ಲಿಂ ಬಾಂಧವರು ಸ್ನೇಹ ಸಹೋದರತ್ವ ಭಾವನೆಯಿಂದ ಬೆರೆತಿರುವುದು ಸಂತಸದ ವಿಷಯ.ಮುಂದಿನ ದಿನಗಳಲ್ಲಿ ಗಂಗಾವತಿಯ ಇಡೀ ಕ್ಷೇತ್ರದಲ್ಲಿ ಶಾಂತಿ ಸೌಹಾರ್ಧತೆ,ನೆಮ್ಮದಿ ಕಾಪಾಡಿಕೊಳ್ಳುವ ಮೂಲಕ ಇಡೀ ದೇಶಕ್ಕೆ ಮಾದರಿ ಕ್ಷೇತ್ರ ಮಾಡುವುದಾಗಿ ಭರವಸೆ ನೀಡಿದರು.

 

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

North Vernon Men Face Youngster Porn Expenses

Sat Apr 22 , 2023
President Donald Trump, who mentioned he expects to be criminally charged this week. Nearly one million baby sexual exploitation photos and movies have been recognized to date. A man who employed a scammer hitman in an try to retaliate towards a teenager he had beforehand exchanged sexually specific media information […]

Advertisement

Wordpress Social Share Plugin powered by Ultimatelysocial