ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಿದ ಹಿನ್ನಲೆ.

 

ಸಾಸಲು ಗ್ರಾಮದಲ್ಲಿ ನೂರಾರು ಯುವಕರು ಕಾಂಗ್ರೆಸ್ ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರೂ ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಿದ ಹಿನ್ನಲೆಯಲ್ಲಿ ಪ್ರತಿನಿತ್ಯವು ಒಂದಲ್ಲ ಒಂದು ಹಳ್ಳಿಯಲ್ಲಿ ಅನ್ಯ ಪಕ್ಷವನ್ನು ತೊರೆದು ಜೆಡಿಎಸ್ ಅಭ್ಯರ್ಥಿ ಎಚ್ ಟಿ ಮಂಜು ಅವರ ಪರ ಜೈಕಾರ ಮೊಳಗುತ್ತಿವೆ.ಅದರಂತೆಯೇ ಇಂದು ಸಾಸಲು ಗ್ರಾಮದಲ್ಲಿ ಸಿಂಗಮ್ಮ ದೇವಿ ಜಾತ್ರೆಯಲ್ಲಿ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಿ ಎಂ ಕಿರಣ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗುವ ಮೂಲಕ ಘೋಷಿತ ಅಭ್ಯರ್ಥಿ ಎಚ್ ಟಿ ಮಂಜು ಅವರಿಗೆ ಸಾಥ್ ನೀಡುವುದಾಗಿ ನೂರಾರು ಯುವಕರು ಭರವಸೆ ನೀಡಿ ಜೈಕಾರ ಹಾಕಿದರು ನಂತರ ಮಾತಾಡಿದ ವೀರಶೈವಾ ಲಿಂಗಾಯತ ಮಹಾ ಸಭಾ ತಾಲ್ಲೂಕು ಅಧ್ಯಕ್ಷರು ಮಾತಾಡಿ ನಮ್ಮ ಸಮಾಜವನ್ನು ಕಡೆಗಣಿಸಿದರೆ ಎನ್ ಆಗುತ್ತೆ ನಮ್ಮ ಶಕ್ತಿ ಎಂಬುವುದನ್ನು ಕೆಲವರು ಅರ್ಥಯಿಸಿ ಕೊಳ್ಳಬೇಕು ಎಂದರೆ ನಮ್ಮ ಸಮಾಜದ ಒಂದೇ ಒಂದು ಮಾತವು ಬೇರೆ ಯಾರಿಗೂ ಹಾಕದಂತೆ ಜೆಡಿಎಸ್ ಪಕ್ಷಕ್ಕೆ ಹಾಕಬೇಕು. ಈ ಬಾರಿ ನಮ್ಮ ತಾಲ್ಲೂಕು ಸಂಪೂರ್ಣ ಜೆಡಿಎಸ್ ಮಯ ವಾಗಿದೆ ಸುಮಾರು 40 ಸಾವಿರ ಅಂತರದಲ್ಲಿ ಎಚ್ ಟಿ ಮಂಜುನಾಥ್ ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಸಭೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು ನಂತರ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಿ ಎಂ ಕಿರಣ್ ಅವರು ಮಾತನಾಡಿ ಸಾದಾ ನಾವು ನೀವು ಎಲ್ಲರು ಒಗ್ಗಟ್ಟು ಪ್ರದರ್ಶನ ಮಾಡುವ ಸಮಯ ಬಂದಿದೆ. ಅಭಿವೃದ್ಧಿ ಕಾಣದಂತೆ ಇರುವ ನಮ್ಮ ತಾಲ್ಲೂಕನ್ನು ಈ ಬಾರಿ ಮಂಜಣ್ಣನ ಗೆಲುವಿನ ಆಧಾರದ ಮೇಲೆ ನಿಂತಿದೆ. ಅದರಲ್ಲೂ ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿ ಎಚ್ ಟಿ ಮಂಜಣ್ಣ ನ ಪರವಾಗಿ ಇಡೀ ನಮ್ಮ ಕ್ಷೇತ್ರವೇ ಬೆನ್ನಲುಬಾಗಿ ನಿಂತಿದೆ. ಅದರಂತೆ ನಿಮ್ಮ ಊರಿನ ಕೆಲಸಗಳು ಹಾಗೂ ನಿಮ್ಮ ಮನೆಯ ಕೆಲಸಗಳು ಯಾವುದೇ ಆಗಬೇಕು ಅಂದರು ನಿಮ್ಮ ಜೊತೆಗೆ ನಾವೆಲ್ಲರೂ ಇದ್ದೇವೆ ನೀವ್ಯಾರು ಭಯ ಪಡುವ ಅಗತ್ಯವೆ ಇಲ್ಲ ಎಂದು ಕಾರ್ಯಕ್ರಮದಲ್ಲಿ ಅಸನರಾಗಿದ್ದ ಮಹಿಳೆಯರಿಗೆ ಹಾಗೂ ಯುವಕರಿಗೆ ಧೈರ್ಯ ತುಂಬಿದರು ಇದೆ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರು ಎ ಎನ್ ಜಾನಕಿರಾಮ್,ಡಿಸಿಸಿ ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷರು ಅಶೋಕ್, ಎಪಿಎಂಸಿ ಮಾಜಿ ಅಧ್ಯಕ್ಷರು ಐನೋರಹಳ್ಳಿ ಮಲ್ಲೇಶ್,ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು ಕೃಷ್ಣೆಗೌಡ, ಇತರರು ಹಾಜರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಷಾ ಸುಂದರರಾಜ್ 7 ಬಾರಿ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್ ಆಗಿದ್ದರು.

Wed Mar 1 , 2023
  ಉಷಾ ಸುಂದರರಾಜ್ 7 ಬಾರಿ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್ ಆಗಿದ್ದರು. ಅವರು ಪ್ರಥಮ ಮಹಿಳಾ ಅರ್ಜುನ ಪ್ರಶಸ್ತಿ ವಿಜೇತೆ. ಅವರು ಮೈಸೂರು ಬ್ಯಾಂಕಿನಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರವರೆಗಿನ ಹುದ್ದೆ ನಿರ್ವಹಿಸಿದ್ದರು. ಉಷಾ ಅವರು 1942ರ ಮಾರ್ಚ್ 1ರಂದು ಬೆಂಗಳೂರಿನಲ್ಲಿ ಜನಿಸಿದರು. ಮಲ್ಲೇಶ್ವರಂ ಹೆಣ್ಣು ಮಕ್ಕಳ ಪ್ರೌಢಶಾಲೆ, ಮೌಂಟ್ ಕಾರ್ಮಲ್ ಕಾಲೇಜು ಹಾಗೂ ಸೆಂಟ್ರಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದರು. ಇಂಗ್ಲಿಷ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1961ರಲ್ಲಿ ರಾಷ್ಟ್ರೀಯ ಚಾಂಪಿಯನ್ […]

Advertisement

Wordpress Social Share Plugin powered by Ultimatelysocial