‘ನಾನೇ ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇನೆಂದು ಸಚಿವ ಕೆ.ಎಸ್‌. ಕುಮಾರಸ್ವಾಮಿ ಹೇಳಿದರು.

 

ಬೆಂಗಳೂರು: ‘ನಾನೇ ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇನೆಂದು ಸಚಿವ ಕೆ.ಎಸ್‌.

ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂಬುದು ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ಅದರ ಸಹ ಸಂಘಟನೆಗಳ ಕಾರ್ಯಸೂಚಿ. ಆ ಕಾರಣದಿಂದ ಮುಂದೊಂದು ದಿನ ಕೆಂಪುಕೋಟೆಯಲ್ಲಿ ಯಾರಾದರೂ ಕೇಸರಿ ಧ್ವಜ ಹಾರಿಸಬಹುದು ಎಂದು ಈಶ್ವರಪ್ಪ ಹೇಳಿದ್ದರು’ ಎಂದರು.

‘ಹಿಂದೂ ಸಂಸ್ಕೃತಿ, ಪರಂಪರೆಯಲ್ಲಿ ಕೇಸರಿ ಬಣ್ಣ ಹಾಗೂ ಕೇಸರಿ ವಸ್ತ್ರಕ್ಕೆ ಪೂಜ್ಯ ಸ್ಥಾನವಿದೆ. ಧಾರ್ಮಿಕ ಕ್ಷೇತ್ರದಲ್ಲಿರುವವರು ಕೇಸರಿ ವಸ್ತ್ರಗಳನ್ನು ಧರಿಸುತ್ತಾರೆ. ಬಿಜೆಪಿ, ಆರ್‌ಎಸ್ ಎಸ್ ಮತ್ತದರ ಸಹ ಸಂಘಟನೆಗಳು ಕೇಸರಿ ಬಾವುಟವನ್ನು ಇಟ್ಟುಕೊಂಡೇ ಹೋರಾಟ ಮಾಡುತ್ತಿವೆ. ಹಿಂದೂಗಳ ಪಾಲಿಗೆ ಕೇಸರಿ ಪವಿತ್ರ ವಸ್ತ್ರ. ಅದರ ಘನತೆಯನ್ನು ಯಾರೂ ಹಾಳು ಮಾಡಬಾರದು’ ಎಂದು ಹೇಳಿದರು.

‘ಕರ್ನಾಟಕ ಸೇರಿದಂತೆ ದಕ್ಷಿಣದ ಎಲ್ಲ ರಾಜ್ಯಗಳಲ್ಲಿಯೂ ಧ್ವಜ ಸ್ತಂಭಗಳನ್ನು ನೆಡುವ, ಅವುಗಳಲ್ಲಿ ತಮ್ಮ ಸಂಘಟನೆಗಳ ಬಾವುಟ ಹಾರಿಸುವ ಪದ್ಧತಿ ಇದೆ. ಖಾಲಿ ಇರುವ ಧ್ವಜ ಸ್ತಂಭಗಳಲ್ಲಿ ಕೇಸರಿ ಬಾವುಟ ಹಾರಿಸುವುದನ್ನು ನೋಡಿದ್ದೇವೆ. ಈ ವಿಷಯವನ್ನು ದೊಡ್ಡದು ಮಾಡಿ ಸದನದ ಕಲಾಪವನ್ನು ಹಾಳು ಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಯಬೇಕಿತ್ತು. ಸಚಿವರೊಬ್ಬರ ರಾಜೀನಾಮೆ ಪಡೆಯಬೇಕು ಎಂಬುದನ್ನೇ ಪ್ರತಿಷ್ಠೆ ಮಾಡಿಕೊಂಡು ಜನರ ನಿರೀಕ್ಷೆಗಳನ್ನು ಕಡೆಗಣಿಸಲಾಗುತ್ತಿದೆ. ಹತ್ತು ನಿಮಿಷ ಕಲಾಪ ನಡೆಸಿ, ಮುಂದೂಡುವುದು ಸರಿಯಲ್ಲ. ಅಧಿವೇಶನಕ್ಕೆ ಪ್ರತಿದಿನ ₹ 1.5ರಿಂದ ₹ 2 ಕೋಟಿ ವೆಚ್ಚವಾಗುತ್ತಿದೆ. ಸರಿಯಾಗಿ ಕಲಾಪ ನಡೆಸಲಾಗದಿದ್ದರೆ ಅನಿರ್ದಿಷ್ಟಾವಧಿಗೆ ಮುಂದೂಡಬೇಕು ಎಂದು ಆಗ್ರಹಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್ ಮೂರನೇ ತರಂಗವು ಪುಣೆ ಜಿಲ್ಲೆಯಲ್ಲಿ ಪ್ರಕರಣ ಏರಿಕೆ!

Fri Feb 18 , 2022
ಜನವರಿ 22 ರಂದು ಗರಿಷ್ಠ ಮಟ್ಟಕ್ಕೆ ತಲುಪಿದ ನಂತರ ಪ್ರಕರಣಗಳು ಆರಂಭದಲ್ಲಿ ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸಿದವು ಮತ್ತು ನಂತರ ಒಂದು ವಾರದವರೆಗೆ ಪ್ರಸ್ಥಭೂಮಿಯಲ್ಲಿದ್ದರೆ, ಪುಣೆ ಜಿಲ್ಲೆಯಲ್ಲಿ ಉದ್ದನೆಯ ಬಾಲವು ತ್ವರಿತವಾಗಿ ತೆಳುವಾಗಲು ನಿರಾಕರಿಸುತ್ತಿದೆ. ಜನವರಿ 1 ರಂದು, ಪುಣೆ ಜಿಲ್ಲೆಯಲ್ಲಿ ದಿನನಿತ್ಯದ ಪ್ರಕರಣಗಳ ಹೊರೆ 620 ರಷ್ಟಿತ್ತು, ಇದು ಜನವರಿ 4 ರ ವೇಳೆಗೆ 1,649 ಮತ್ತು ಜನವರಿ 6 ರ ವೇಳೆಗೆ 3,668 ಕ್ಕೆ ಏರಿತು. ಜನವರಿ 14 […]

Advertisement

Wordpress Social Share Plugin powered by Ultimatelysocial