ಕುವೆಂಪು ಸಾಹಿತ್ಯ ಕ್ಷೇತ್ರದ ಪ್ರಸಿದ್ಧಹೆಸರು

ಇಪ್ಪತ್ತನೆಯ ಶತಮಾನದಿಂದ ಈಚೆಗಿನ ಕನ್ನಡ ಸಾಹಿತ್ಯ ಚರಿತ್ರೆ ಕುವೆಂಪು ಅವರ ಸಾಹಿತ್ಯಕ ಬೆಳವಣಿಗೆ, ಸಾಧನೆ, ಸಿದ್ಧಿಗಳಿಂದ, ಅವರು ಇತರ ಕವಿಗಳ ಮೇಲೆ ಬೀರಿದ ಪ್ರಭಾವದಿಂದ ಕಂಗೊಳಿಸುತ್ತಿದೆ. ಕಾವ್ಯ, ನಾಟಕ, ಸಣ್ಣ ಕಥೆ, ಕಾದಂಬರಿ, ವಚನ, ಕವನ, ಮಹಾಕಾವ್ಯ, ಸಾಹಿತ್ಯ ವಿಮರ್ಶೆ – ಈ ಒಂದೊಂದು ಪ್ರಕಾರದಲ್ಲೂ ಗಣನೀಯವಾದ ಕೊಡುಗೆಯನ್ನು ಕುವೆಂಪು ನೀಡಿದ್ದಾರೆ. ಕನ್ನಡಕ್ಕೆ ರಾಷ್ಟ್ರಮಟ್ಟದ ಖ್ಯಾತಿಯನ್ನು ತಂದುಕೊಟ್ಟ ಮೊದಲಿಗರಲ್ಲಿ ಅವರೂ ಒಬ್ಬರು.
ಕುವೆಂಪು ಅವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ಹರಿಯುತ್ತಿರುವ ತುಂಗಾ ನದಿಯನ್ನು ದಾಟಿ ಒಂಬತ್ತು ಮೈಲು ಹೋದರೆ ಕಾಡಿನ ನಡುವೆ ಬೆಟ್ಟಕ್ಕೆ ಅಂಟಿಕೊಂಡಂತೆ ಇರುವ ಮನೆ ಕುಪ್ಪಳ್ಳಿ. ಅದೇ ಅವರ ಊರು. ಅವರು ಹುಟ್ಟಿದ್ದು ಮಾತ್ರ ಕೊಪ್ಪಕ್ಕೆ ಸಮೀಪವಾದ ಹಿರೇಕೊಡಿಗೆಯಲ್ಲಿದ್ದ ತಮ್ಮ ತಾಯಿಯ ತವರುಮನೆಯಲ್ಲಿ. 1904ರ ಡಿಸೆಂಬರ್ 29ನೇ ತಾರೀಖು. ಕುವೆಂಪು ಬೆಳೆದದ್ದು ಕುಪ್ಪಳ್ಳಿಯಲ್ಲಿ. ಮನೆಯ ಸುತ್ತಲಿನ ಸುಂದರ ಪರಿಸರ, ಪ್ರಕೃತಿ ಸಂಪತ್ತು, ಹಿರಿಯರ ಜೊತೆ ಪಾಲ್ಗೊಳ್ಳುತ್ತಿದ್ದ ಶಿಕಾರಿಯಂತಹ ಸಾಹಸ ಯಾತ್ರೆಗಳು, ಈ ಎಲ್ಲವೂ ಕವಿ ಶಿಶುವಿನ, ಕವಿ ಬಾಲಕನ, ಕವಿ ತರುಣನ ಚೇತನದ ಆಳಕ್ಕೆ ನದಿಯಾಗಿ, ಜಲಪಾತವಾಗಿ ಧುಮ್ಮಿಕ್ಕಿ ಮಡುಗಟ್ಟಿನಿಂತುವು.
ಕವಿ ಬಾಲಕನಿಗೆ ಚಿಕ್ಕಂದಿನಿಂದಲೇ ಸಾಹಿತ್ಯ ಸಂಸ್ಕಾರವೂ ದೊರಕಿತು. ಮನೆಯಲ್ಲಿ ತಂದೆ, ಚಿಕ್ಕಪ್ಪ ಇಬ್ಬರೂ ಸಾಹಿತ್ಯಾಸಕ್ತರು. ಜೈಮಿನಿ ಭಾರತ, ತೊರವೆ ರಾಮಾಯಣಗಳ ವಾಚನ ಮನೆಯಲ್ಲಿ ನಡೆಯುತ್ತಿತ್ತು. ಬಾಲಕ ಅದನ್ನು ಆಸಕ್ತಿಯಿಂದ ಕೇಳುತ್ತಿದ್ದ. ಹುಡುಗನಿಗೆ ಜೊತೆಯ ಇತರ ಬಾಲಕರೊಡನೆ ಮನೆಯೇ ಶಾಲೆಯೂ ಆಯಿತು. ಅನೇಕ ‘ಐಗಳು’ ಬಂದು ಹೋಗಿ ಮಾಡಿ ವಿದ್ಯಾಭ್ಯಾಸ ಕುಂಟುತ್ತಾ ನಡೆಯಿತು. ಕಡೆಗೆ ರೋಮನ್ ಕ್ಯಾಥೊಲಿಕ್ ‘ಐಗಳು’ ಒಬ್ಬರು ಇಂಗ್ಲೀಷ್ ಬಾಷಾ ಸಾಹಿತ್ಯಗಳ ಪರಿಚಯ ನೀಡಿದರು. ಎಂಟನೇ ವಯಸ್ಸಿನಲ್ಲಿ ಅವರನ್ನು ತೀರ್ಥಹಳ್ಳಿಯ ಶಾಲೆಗೆ ಸೇರಿಸಲಾಯಿತು. ಮೊದಲನೆಯ ಮಹಾಯುದ್ದದಲ್ಲಿ ಅವರ ಕುಟುಂಬಕ್ಕೆ ಆದ ನಷ್ಟಗಳಿಂದ ಅವರ ಕುಟುಂಬ ಸಹಾ ತೀರ್ಥಹಳ್ಳಿಗೆ ವಾಸ್ತವ್ಯ ಬದಲಾಯಿಸಿತು. ಚಿಕ್ಕವರಾದ ಪುಟ್ಟಪ್ಪ, ಅವರ ತಾಯಿ ಮತ್ತು ಪುಟ್ಟಪ್ಪನವರಿಗಿಂತಲೂ ಕಿರಿಯರಾದ ಎರಡು ಹೆಣ್ಣು ಮಕ್ಕಳನ್ನು ಅವರ ತಂದೆ ಅಗಲಿದರು.
ಮುಂದೆ ಪುಟ್ಟಪ್ಪನವರ ವಿದ್ಯಾಭ್ಯಾಸ ಮೈಸೂರಿನ ಹಾರ್ಡ್ವಿಕ್ ಹೈಸ್ಕೊಲಿನಲ್ಲಿ ಮುಂದುವರೆಯಿತು. ಷೆಲ್ಲಿ, ವರ್ಡ್ಸ್ ವರ್ತ್, ಕೀಟ್ಸ್ ಮುಂತಾದ ಆಂಗ್ಲ ಕವಿಗಳ ಕವನಗಳನ್ನು ಸ್ವತಂತ್ರವಾಗಿ ಓದುವ ಶಕ್ತಿ ಅವರಿಗೆ ಬಂದಿತ್ತು. ಟಾಲ್ಸ್ ಟಾಯ್ ಕಾದಂಬರಿಗಳು, ಪೌರಾತ್ಯ, ಪಾಶ್ಚಾತ್ಯ ತತ್ವಜ್ಞರ ಬರವಣಿಗೆಗಳು ಅವರ ಭಾವ ಬುದ್ಧಿಗಳಿಗೆ ಪುಷ್ಟಿ ನೀಡಿದವು. ಶ್ರೀರಾಮಕೃಷ್ಣಾಶ್ರಮದ ಮೈಸೂರು ಶಾಖೆಯ ಅಧ್ಯಕ್ಷರಾದ ಶ್ರೀ ಸ್ವಾಮಿ ಸಿದ್ದೇಶ್ವರಾನಂದರು ಬಾಲಕನಿಗೆ ತುಂಬ ಪ್ರಿಯರಾಗಿ ಅವನ ಸಕಲ ಯೋಗಕ್ಷೇಮವನ್ನೂ ವಹಿಸಿಕೊಂಡರು. ಸರ್ವಧರ್ಮ ಸಮನ್ವಯಾಚಾರ್ಯರಾದ ಶ್ರೀರಾಮಕೃಷ್ಣ ಪರಮಹಂಸರೂ ಅವರ ಶಿಷ್ಯರಾದ ಸ್ವಾಮಿ ವಿವೇಕಾನಂದರೂ ಪುಟ್ಟಪ್ಪನವರಿಗೆ ಆದರ್ಶವ್ಯಕ್ತಿಗಳಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಹಲ್ಲೆ.

Thu Dec 29 , 2022
18 ನೆ ತಾರೀಖು ನಡೆದಿರುವ ಘಟನೆ. ಚಂದ್ರಶೇಖರ್, ಹಾಗು ಬದ್ರಿಪ್ರಸಾದ್ ಅನ್ನೊರ ಮೇಲೆ ಹಲ್ಲೆ. ಗಿರೀಶ್,ಅಬ್ಬಿಗೆರೆ ವೆಂಕಟೇಶ್,ಗೋವಿಂದ,ಮುನಿರಾಜು,ಸೋಮಸುಂದರ್,ಮುನಿಸ್ವಾಮಿ ಓಡೆಯರ್ ಎಂಬುವವರ ಮೇಲೆ ದೂರು ದಾಖಲು. ಹಲವು ದಿನಗಳಿಂದ ಎರಡು ಗುಂಪುಗಳ ನಡುವೆ ವೈಮನಸ್ಸು. ಕುಂಬಾರ ಸಂಘದ ಕಛೇರಿಗೆ ಬಂದಿದ್ದ ಚಂದ್ರಶೇಖರ್ ಹಾಗು ಭದ್ರಿಪ್ರಸಾದ್. ಇದೇ ವೇಳೆ ಚಂದ್ರಶೇಖರ ಹಾಗು ಭದ್ರಿಪ್ರಸಾದ್ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೊ ಆರೋಪ. ಕಲಾಸಿಪಾಳ್ಯ ಬಳಿ ಇರುವ ಎನ್.ಎಂ.ಹೆಚ್ ಹೋಟೆಲ್ ಬಳಿ ಹಲ್ಲೆ. ಹೆಲ್ಮೆಟ್ ಹಾಗು […]

Advertisement

Wordpress Social Share Plugin powered by Ultimatelysocial