*175 ದಿನ ಪೂರೈಸಿದ “ಲಂಕೆ”* .

*175 ದಿನ ಪೂರೈಸಿದ “ಲಂಕೆ”* .
*ಸಂಕಷ್ಟದ ಸಮಯದಲ್ಲಿ ಸಂಭ್ರಮದ ವಾತಾವರಣ.*
ಕಳೆದ ಎರಡು ವರ್ಷಗಳಿಂದ ಕೊರೋನ ಹೊಡೆತಕ್ಕೆ ಸಿಲುಕಿ ಚಿತ್ರರಂಗ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಅಂತಹ ಸಂಕಷ್ಟದ ಸಮಯದಲ್ಲಿ ಬಿಡುಗಡೆಯಾಗಿ ಜನಮನ ಗೆದ್ದಿರುವ ಚಿತ್ರ “ಲಂಕೆ”.
ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿ, ರಾಮ್ ಪ್ರಸಾದ್ ಎಂ.ಡಿ ನಿರ್ಮಿಸಿ, ನಿರ್ದೇಶಿಸಿರುವ “ಲಂಕೆ” ಚಿತ್ರ 175 ದಿನಗಳನ್ನು ಪೂರೈಸಿದೆ.
ನಮ್ಮ ಚಿತ್ರ ಯಶಸ್ವಿ 175 ದಿನಗಳನ್ನು ಪೂರೈಸಿರುವುದು ನಿಜಕ್ಕೂ ಸಂತಸದ ವಿಷಯ. ಈ ಸಂದರ್ಭದಲ್ಲಿ ನಾಯಕ ಯೋಗಿ ಸೇರಿದಂತೆ ಇಡೀ ನಮ್ಮ ತಂಡಕ್ಕೆ ಧನ್ಯವಾದ. ಈ ಸಂತೋಷ ಹಂಚಿಕೊಳ್ಳಲು ಸದ್ಯದಲ್ಲೇ ಸಮಾರಂಭ ಆಯೋಜಿಸಲಿದ್ದೇವೆ.
ಈ ಖುಷಿ ಸಮಯದಲ್ಲಿ ಚಿತ್ರದಲ್ಲಿ ನಟಿಸಿರುವ ಸಂಚಾರಿ ವಿಜಯ್ ಇಲ್ಲದಿರುವುದು ನಮಗೆ ದುಃಖದ ಸಂಗತಿ.
ಮತ್ತೊಂದು ಖುಷಿಯ ವಿಚಾರವೆಂದರೆ ನಮ್ಮ ಚಿತ್ರ ತೆಲುಗಿನಲ್ಲೂ ನಿರ್ಮಾಣವಾಗುತ್ತಿದ್ದು, ಏಪ್ರಿಲ್ ನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. “ಲಂಕೆ” ಚಿತ್ರದಲ್ಲಿ ತಾಯಿ ಪಾತ್ರದ ಮೂಲಕ ಎಲ್ಲರ ಗಮನಸೆಳೆದಿದ್ದ ಎಸ್ಟರ್ ನರೋನ, ತೆಲುಗು ಅವತರಣಿಕೆಯಲ್ಲಿ ನೆಗಟೀವ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾನೇ ನಿರ್ದೇಶನ ಮಾಡಲಿದ್ದೇನೆ‌. ಈ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸದ್ಯದಲ್ಲೇ ನೀಡುತ್ತೇನೆ ಎಂದು “ಲಂಕೆ”ಯ ನಿರ್ದೇಶಕ ರಾಮ್ ಪ್ರಸಾದ್ ಎಂ.ಡಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅವರು ಪಾರ್ಶ್ವವಾಯುವಿಗೆ ಹತ್ತಿರವಾಗಿದ್ದರು ಎಂದು ಅಜಿತ್ ಅವರ ವೈದ್ಯರು!

Tue Mar 8 , 2022
ಕಾಲಿವುಡ್ ಸ್ಟಾಲ್ವರ್ಟ್ ಅಜಿತ್ ಕುಮಾರ್ ಕಳೆದ ಫೆಬ್ರವರಿಯಲ್ಲಿ ಚಿತ್ರಮಂದಿರಗಳನ್ನು ಹಿಟ್ ಮಾಡಿದ ಅವರ ಇತ್ತೀಚಿನ ಬಿಡುಗಡೆಯಾದ ವಲಿಮೈ ವೈಭವದಲ್ಲಿ ಮುಳುಗಿದ್ದಾರೆ. ಈ ಯೋಜನೆಯು ಅಜಿತ್ ಅವರ ವಿಶೇಷ ಚಿತ್ರಗಳಲ್ಲಿ ಒಂದಾಗಿದೆ ಎಂಬುದು ರಹಸ್ಯವಲ್ಲ. ನಮಗೆ ತಿಳಿದಿರುವಂತೆ, ಪ್ರಮುಖ ವ್ಯಕ್ತಿ ನಿಜ ಜೀವನದಲ್ಲಿ ಉತ್ಸಾಹಭರಿತ ಮೋಟರ್ ಹೆಡ್ ಮತ್ತು ಕಾರ್ ರೇಸರ್ ಆಗಿದ್ದು, ಚಿತ್ರದಲ್ಲಿನ ಬೈಕ್ ಸ್ಟಂಟ್‌ಗಳ ಸ್ಕೋಪ್ ಅವರನ್ನು ರೋಮಾಂಚನಗೊಳಿಸಿರಬೇಕು. ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ತಜ್ಞರ ಮೇಲ್ವಿಚಾರಣೆಯಲ್ಲಿ […]

Advertisement

Wordpress Social Share Plugin powered by Ultimatelysocial