ಬೇಸಿಗೆಯಲ್ಲಿ ದೇಹದ ಬಗ್ಗೆ ಡಬಲ್‌ ಕಾಳಜಿ ತೆಗೆದುಕೊಳ್ಳಬೇಕು.

 

 ಚೆನ್ನಾಗಿ ನೀರು, ಜ್ಯೂಸ್‌, ಎಳನೀರು ಸೇರಿದಂತೆ ಇತರ ಪಾನೀಯಗಳನ್ನು ಸೇವಿಸುವ ಮೂಲಕ ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳಬೇಕು. ಬೇಸಿಗೆಯಲ್ಲಿ ಲಸ್ಸಿ ಕುಡಿಯುವುದು ಬಹಳ ಸೂಕ್ತ.

ಪ್ರತಿದಿನ ಒಂದು ಲೋಟ ಲಸ್ಸಿ ಕುಡಿದರೆ ಅದು ಬಹಳ ಪ್ರಯೋಜನಕಾರಿಯಾಗಿರುತ್ತದೆ.

ಲಸ್ಸಿಯನ್ನು ವಿಶೇಷವಾಗಿ ಮಧ್ಯಾಹ್ನ ಕುಡಿಯುವುದು ತುಂಬಾ ಒಳ್ಳೆಯದು. ಲಸ್ಸಿ ಸೇವನೆಯಿಂದ ದೇಹಕ್ಕೆ ಪೊಟ್ಯಾಶಿಯಂ, ಪ್ರೊಟೀನ್, ಕ್ಯಾಲ್ಸಿಯಂ ಮತ್ತು ಫಾಸ್ಪರಸ್‌ನಂತಹ ಪೋಷಕಾಂಶಗಳು ಸಿಗುತ್ತವೆ.

ಇವೆಲ್ಲವೂ ಬೇಸಿಗೆಯಲ್ಲಿ ದೇಹಕ್ಕೆ ಬಹಳ ಮುಖ್ಯ. ದೇಹವನ್ನು ತಂಪು ಮಾಡುವ ಲಸ್ಸಿ ಮುಖದ ಹೊಳಪನ್ನೂ ಹೆಚ್ಚಿಸಬಲ್ಲದು. ಊಟದ ನಂತರ ಲಸ್ಸಿ ಕುಡಿಯುವುದು ತುಂಬಾ ಪ್ರಯೋಜನಕಾರಿ. ಏಕೆಂದರೆ ಲಸ್ಸಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೊಟ್ಯಾಸಿಯಮ್ ಇರುತ್ತದೆ. ಇದು ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಬಿಪಿ ಸಮಸ್ಯೆ ಇರುವವರು ಬೇಸಿಗೆಯಲ್ಲಿ ಲಸ್ಸಿ ಕುಡಿಯಬೇಕು. ಬೇಸಿಗೆಯಲ್ಲಿ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಊಟದ ನಂತರ ಲಸ್ಸಿ ಕುಡಿಯಿರಿ.

ಲಸ್ಸಿ ಹೊಟ್ಟೆಯನ್ನು ಸ್ವಚ್ಛವಾಗಿಡುತ್ತದೆ. ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಹಾಗಾಗಿ ಬೆಳಗ್ಗೆ ಅಥವಾ ಮಧ್ಯಾಹ್ನ ಆಹಾರ ಸೇವಿಸಿದ ಬಳಿಕ ಲಸ್ಸಿ ಕುಡಿಯಿರಿ. ಒತ್ತಡದ ಜೀವನಶೈಲಿಯಿಂದಾಗಿ ಆರೋಗ್ಯದ ಕಡೆಗೆ ಗಮನಕೊಡಲು ಸಾಧ್ಯವಾಗುವುದಿಲ್ಲ. ಇದರಿಂದ ನಿಮ್ಮ ಟೆನ್ಷನ್‌ ಇನ್ನೂ ಹೆಚ್ಚಾಗಬಹುದು. ಲಸ್ಸಿ ಕುಡಿಯುವುದರಿಂದ ದೇಹಕ್ಕೆ ಚೈತನ್ಯ ಬರುತ್ತದೆ. ಆಯಾಸ ಕಡಿಮೆಯಾಗಿ ಒತ್ತಡವೂ ನಿವಾರಣೆಯಾಗುತ್ತದೆ.

ಲಸ್ಸಿ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಲಸ್ಸಿಯಲ್ಲಿರುವ ಪ್ರೋಬಯಾಟಿಕ್‌ಗಳು ಕೂಡ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಉಪಯುಕ್ತವಾಗಿವೆ. ಇದಲ್ಲದೇ ಲಸ್ಸಿ ಕುಡಿಯುವುದರಿಂದ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚುತ್ತದೆ.

ವಿಶೇಷವಾಗಿ ಕೊರೋನಾ ಅವಧಿಯಲ್ಲಿ, ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಇದು ಅವಶ್ಯಕವಾಗಿದೆ. ತೂಕವನ್ನು ಕಡಿಮೆ ಮಾಡಲು ಲಸ್ಸಿ ಸಹಾಯ ಮಾಡಬಲ್ಲದು. ಲಸ್ಸಿಯನ್ನು ಮೊಸರಿನಿಂದ ತಯಾರಿಸಲಾಗುತ್ತದೆ. ಮೊಸರಿನಲ್ಲಿ ಕೊಬ್ಬಿನಂಶ ಕಡಿಮೆ ಇರುತ್ತದೆ. ದೇಹದ ತೂಕವನ್ನು ನಿಯಂತ್ರಿಸಬಲ್ಲ ಲಸ್ಸಿಯಲ್ಲಿ ಹೆಚ್ಚಿನ ಪ್ರೋಟೀನ್ ಕೂಡ ಇರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಬ್ಬಿನ ಜ್ಯೂಸ್ ಬೇಸಿಗೆಯಲ್ಲಿ ದೇಶದಾದ್ಯಂತ ಸಿಗುವ ಪಾನೀಯ.

Tue Apr 26 , 2022
ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಬ್ಬಿನ ಜ್ಯೂಸ್ ಅಂದ್ರೆ ಇಷ್ಟಪಡ್ತಾರೆ. ವಿಭಿನ್ನ ರುಚಿ ಮತ್ತು ಪೌಷ್ಠಿಕಾಂಶದ ಗುಣಗಳು ಇದ್ರಲ್ಲಿರುತ್ತವೆ. ಒಂದು ಗ್ಲಾಸ್ ತಂಪಾದ ಕಬ್ಬಿನ ಜ್ಯೂಸ್ ಬರಿ ಬಾಯಾರಿಕೆ ನೀಗಿಸುವುದಿಲ್ಲ, ಜೊತೆಗೆ ಇಡೀ ದೇಹಕ್ಕೆ ಶಕ್ತಿ ತುಂಬುತ್ತದೆ. ಬೇಸಿಗೆಯ ಸಮಯದಲ್ಲಿ ಅತಿಯಾಗಿ ಬೆವರುವುದರಿಂದ ದೇಹದಲ್ಲಿನ ಎಲೆಕ್ಟ್ರೋಲೈಟ್ ಕಡಿಮೆಯಾಗುತ್ತದೆ. ಇದರಿಂದಾಗಿ ದೇಹವು ನಿರ್ಜಲೀಕರಣದಿಂದ ಬಳಲುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಮಧ್ಯಾಹ್ನ ಒಂದು ಲೋಟ ಕಬ್ಬಿನ ಜ್ಯೂಸ್ ಕುಡಿದರೆ ದೇಹಕ್ಕೆ ಶಕ್ತಿ ಬರುತ್ತದೆ. ಕಬ್ಬಿನ ಜ್ಯೂಸ್ […]

Advertisement

Wordpress Social Share Plugin powered by Ultimatelysocial