ಲತಾ ಮಂಗೇಶ್ಕರ್ ನಿಧನದ ಬಳಿಕ ಅವರು ಸಂಪಾಧಿಸಿದ ಆಸ್ತಿ ಬಗ್ಗೆ ಚರ್ಚೆ ಆರಂಭ ಆಗಿದೆ.

ಲತಾ ಮಂಗೇಶ್ಕರ್ ನಿಧನದ ಬಳಿಕ ಅವರು ಸಂಪಾಧಿಸಿದ ಆಸ್ತಿ ಬಗ್ಗೆ ಚರ್ಚೆ ಆರಂಭ ಆಗಿದೆ. ಏಳು ದಶಕಗಳಲ್ಲಿ ಅವರು ಸಂಪಾದಿಸಿದ ಆಸ್ತಿ ಮೌಲ್ಯ ಸುಮಾರು 368 ಕೋಟಿ ರೂ. ಎಂದು ವರದಿಯಾಗಿದೆ. ಇಷ್ಟು ದೊಡ್ಡ ಮೊತ್ತದ ಆಸ್ತಿ ಈಗ ಯಾರಿಗೆ ಸೇರಬೇಕು? ಯಾರ ಪಾಲಾಗುತ್ತೆ ಈ ಆಸ್ತಿ?ಎನ್ನುವ ಪ್ರಶ್ನೆ ಎದ್ದಿದೆ. ಲತಾ ಮಂಗೇಶ್ಕರ್ ಅವರ ಅದ್ದೂರಿ ಮನೆ, ಐಷಾರಾಮಿ ಕಾರುಗಳು ಹಾಡಿನಿಂದ ಬರುವ ರಾಯಲ್ಟಿ ಬಗ್ಗೆ ಚರ್ಚೆಯಾಗುತ್ತಿದೆ.ಲತಾ ಮಂಗೇಶ್ಕರ್ ಏಳು ದಶಕಗಳ ಕಾಲ ನಿರಂತರವಾಗಿ ಚಿತ್ರರಂಗದಲ್ಲಿ ದುಡಿದಿದ್ದಾರೆ. ಇಷ್ಟು ವರ್ಷ ಹಾಡುಗಳ ಮೂಲಕ ಗಳಿಸಿದ ಒಟ್ಟು ಆಸ್ತಿ ಮೌಲ್ಯ ಒಂದೆರಡು ಕೋಟಿಯಲ್ಲ. ಲತಾ ಮಂಗೇಶ್ಕರ್ ವಿವಾಹವಾಗದೇ ಇದ್ದಿದ್ದರಿಂದ ಸಹಜವಾಗಿಯೇ ನೂರಾರು ಕೋಟಿ ಮೌಲ್ಯದ ಆಸ್ತಿ ಈಗ ಯಾರಿಗೆ ಸೇರಬೇಕು ಅನ್ನುವ ಬಿಸಿಬಿಸಿ ಚರ್ಚೆ ಬಾಲಿವುಡ್‌ನಲ್ಲಿ ಆಗುತ್ತಿದೆ.ಲತಾ ಮಂಗೇಶ್ಕರ್ ತನ್ನ 92ನೇ ವಯಸ್ಸಿನಲ್ಲಿ ಅಪಾರ ಅಭಿಮಾನಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಸಿನಿಮಾದ ಸಂಗೀತ ಕ್ಷೇತ್ರದಲ್ಲಿ ಸುಮಾರು ಏಳು ದಶಕಗಳ ಕಾಲ ಗಾಯಕಿಯಾಗಿ ಮಾಡಿದ ಸಾಧನೆ ಒಂದೆರಲ್ಲ. ಹಾಗೇ ಈ ಏಳು ದಶಕದಲ್ಲಿ ಸುಮಾರು 368 ಕೋಟಿ ಆಸ್ತಿ ಸಂಪಾಧಿಸಿದ್ದರು ಎಂದು ವರದಿಯಾಗಿದೆ. ಲತಾ ಮಂಗೇಶ್ಕರ್ ಅವರ ಈ ಆಸ್ತಿ ಯಾರಿಗೆ ಸೇರುತ್ತೆ? ಮುಂದೆ ರಾಯಲ್ಟಿ ಮೂಲಕ ಬರುವ ಹಣ ಯಾರಿಗೆ ಹೋಗಬೇಕು? ಎಂಬ ಚರ್ಚೆಯಾಗುತ್ತಿದೆ. ಲತಾ ಮಂಗೇಶ್ಕರ್ ಅವರಿಗೆ ಮೂವರು ಸಹೋದರಿಯರು ಹಾಗೂ ಒಬ್ಬ ಸಹೋದರ ಇದ್ದಾರೆ. ಈ ಆಸ್ತಿಯ ಮೊತ್ತವೆಲ್ಲಾ ಇವರಿಗೆ ಸೇರಬೇಕಾ? ಇಲ್ಲಾ ಚಾರಿಟಿಗೆ ಹೋಗುತ್ತಾ? ಎನ್ನುವ ಕುತೂಹಲ ಬಾಲಿವುಡ್‌ನಲ್ಲಿದೆ.ಲತಾ ಮಂಗೇಶ್ಕರ್ ಸಂಪಾದಿಸಿದ ಆಸ್ತಿ ಲತಾ ಮಂಗೇಶ್ಕರ್ ಅವರಿಗೆ ಕಾರುಗಳು ಮೇಲೆ ಒಲವಿತ್ತು. ಮೂಲಗಳ ಪ್ರಕಾರ ಇವರ ಬಳಿ ದುಬಾರಿ ಕಾರುಗಳಿತ್ತು. ಚಿನ್ನದ ಆಭರಣಗಳೆಂದರೆ ಲತಾ ಮಂಗೇಶ್ಕರ್‌ಗೆ ಬಲು ಇಷ್ಟ. ಮುಂಬೈನ ಪೆಡ್ಡಾರ್ ರಸ್ತೆಯಲ್ಲಿ ವಿಂಟೇಜ್ ಬಂಗ್ಲೇ ಇದೆ. ಅಲ್ಲಿಯೇ ಲತಾ ಮಂಗೇಶ್ಕರ್ ವಾಸವಿದ್ದರು. ಇದಲ್ಲದೆ ಬೇರೆ ಕಡೆಗಳಲ್ಲಿ ಲತಾ ಮಂಗೇಶ್ಕರ್ ಅವರ ಆಸ್ತಿ ಹೊಂದಿರಬಹುದೆಂದು ಚರ್ಚೆ ನಡೆಯುತ್ತಿದೆ. ಈ ಎಲ್ಲಾ ಆಸ್ತಿಗೂ ಸದ್ಯ ವಾರಸುದಾರು ಇಲ್ಲದೆ ಇರುವುದರಿಂದ ಸಹಜವಾಗಿಯೇ ಇದು ಸಹೋದರ ಹಾಗೂ ಸಹೋದರಿಗೆ ಸೇರಲಿದೆ ಎನ್ನಲಾಗಿದೆ.ಲತಾ ಮಂಗೇಶ್ಕರ್ ಏಳು ವರ್ಷಗಳಿಂದ ಕೇವಲ ಹಾಡಿನಿಂದ ಸಾಕಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದರು. ಕಳೆದ ಒಂದೆರಡು ದಶಕಗಳಿಂದ ಲತಾ ಮಂಗೇಶ್ಕರ್ ಹಾಡುವುದನ್ನು ನಿಲ್ಲಿಸಿದ್ದರು. ಆದರೂ ಅವರ ಹಾಡಿನಿಂದ ವರ್ಷಕ್ಕೆ 5 ಕೋಟಿಯಷ್ಟು ಸಂಪಾದನೆ ಮಾಡುತ್ತಿದ್ದರು. ಇನ್ನು ಮುಂದೆನೂ ಆ ಹಾಡುಗಳಿಗೆ ಇಷ್ಟೇ ಮೊತ್ತದ ಹಣ ಸಿಗಲಿದೆ. ಅದು ಯಾರಿಗೆ ಸೇರಬೇಕು ಎಂಬುದು ಕೂಡ ಈಗ ಚರ್ಚೆಯಲ್ಲಿದೆಲತಾ ಮಂಗೇಶ್ಕರ್ ಬದುಕಿದ್ದಾಗಲೇ ಚಾರಿಟಬಲ್ ಟ್ರಸ್ಟ್ ಒಂದನ್ನು ಆರಂಭಿಸಿದ್ದರು. ಕೆಲ ಮೂಲಗಳ ಪ್ರಕಾರ, ಲತಾ ಮಂಗೇಶ್ಕರ್ ಆಸ್ತಿಯಲ್ಲಿ ಕೆಲವು ಭಾಗ ಈ ಟ್ರಸ್ಟ್ ಪಾಲಾಗಲಿದೆ. ಇನ್ನು ಉಳಿದಂತೆ ಸಹೋದರ ಹಾಗೂ ಸಹೋದರಿಯರಿಗೆ ಸೇರಲಿದೆ. ಅಲ್ಲದೆ ಲತಾ ಮಂಗೇಶ್ಕರ್ ಅವರಿಗೆ ಸಹೋದರ ಹಾಗೂ ಸಹೋದರಿಯರ ಮಕ್ಕಳು ಮೇಲೆ ತುಂಬಾನೇ ಪ್ರೀತಿ ಇತ್ತು. ಈ ಕಾರಣಕ್ಕೆ ಮೊಮ್ಮಗಳಿಗೆ ಆಸ್ತಿ ಬರೆದಿರಬಹುದು ಎನ್ನಲಾಗಿದೆ. ಈಗಾಗಲೇ ಲತಾ ಮಂಗೇಶ್ಕರ್ ವಾರ ವಕೀಲರು ಈ ಬಗ್ಗೆ ಕಾರ್ಯೋನ್ಮುಖರಾಗಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೂರದರ್ಶನ ವಾಹಿನಿಯಲ್ಲಿ 1988ರಲ್ಲಿ ಆರಂಭಗೊಂಡಿದ್ದ ಮಹಾಭಾರತ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.

Tue Feb 8 , 2022
  ನವದೆಹಲಿ: ದೂರದರ್ಶನ ವಾಹಿನಿಯಲ್ಲಿ 1988ರಲ್ಲಿ ಆರಂಭಗೊಂಡಿದ್ದ ಮಹಾಭಾರತ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಅದರಲ್ಲಿ ನಟಿಸಿದ್ದ ನಟರನ್ನೇ ನಿಜವಾದ ‘ದೇವರು’ ಎಂದುಕೊಂಡವರಿಗೂ ಕಮ್ಮಿಯೇನಿಲ್ಲ. ಅಂಥವರಲ್ಲಿ ಒಬ್ಬರಾಗಿದ್ದುದು ಭೀಮನ ಪಾತ್ರದ ಮೂಲಕ ಮನೋಜ್ಞ ಅಭಿನಯ ನೀಡಿದ್ದ ನಟ ಪ್ರವೀಣ್ ಕುಮಾರ್ ಸೋಬ್ತಿ.ದೀರ್ಘಕಾಲದ ಎದೆ ಸೋಂಕಿನ ಸಮಸ್ಯೆಯಿಂದ ಬಳಲುತ್ತಿದ್ದ ಪ್ರವೀಣ್‌ ಅವರು ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ನವದೆಹಲಿಯ ಅಶೋಕ್ ವಿಹಾರ್ ನಿವಾಸದಲ್ಲಿ ಇವರು ಕೊನೆಯುಸಿರೆಳೆದಿದ್ದಾರೆ.ಇವರು […]

Advertisement

Wordpress Social Share Plugin powered by Ultimatelysocial