ತೂಕ ಇಳಿಸಬೇಕೆಂಬುದು ಬಹುತೇಕರ ಕನಸು.

ತೂಕ ಇಳಿಸಬೇಕೆಂಬುದು ಬಹುತೇಕರ ಕನಸು. ಬಳುಕುವ ಬಳ್ಳಿಯಂತ ದೇಹ ಪಡೆಯಬೇಕೆಂದು ಮಾಡದ ಕಸರತ್ತಾದರೂ ಯಾವುದಿರಬಹುದು. ಅದಕ್ಕಾಗಿ ಊಟ ಬಿಡಬೇಕು ಅಂದುಕೊಂಡರೂ ಸಾಧ್ಯವಾಗದೆ ಬೇಸರಿಸಿಕೊಳ್ಳುವವರಲ್ಲಿ ನೀವೂ ಒಬ್ಬರೇ, ಹಾಗಿದ್ದರೆ ಇಲ್ಲಿ ಕೇಳಿ.ರಾತ್ರಿ ಮಲಗುವ ಮುನ್ನ ಹಾಗೂ ಮುಂಜಾನೆ ಎದ್ದಾಕ್ಷಣ ಕೆಲವು ಪಾನೀಯಗಳ ಸೇವನೆ ಮಾಡುವ ಮೂಲಕ ನೀವು ದೇಹ‌ ತೂಕವನ್ನು ಇಳಿಸಬಹುದು.ಬೆಳಿಗ್ಗೆ ಎದ್ದಾಕ್ಷಣ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಜೇನು, ಲಿಂಬೆರಸ ಹಿಂಡಿ ಕುಡಿಯುವುದರಿಂದ ದೇಹದ ಕೊಬ್ಬು ಕರಗಿ ತೂಕ ಕಡಿಮೆಯಾಗುತ್ತದೆ.ಖಾಲಿ ಹೊಟ್ಟೆಗೆ ಹುರಿದು ಹುಡಿ ಮಾಡಿಟ್ಟುಕೊಂಡ ಮೆಂತೆ ಸೇವಿಸುವುದರಿಂದಲೂ ಕೊಬ್ಬು ಕರಗುತ್ತದೆ ಹಾಗೂ ಮಧುಮೇಹದಂತಹ ರೋಗದಿಂದ ದೂರವಿರಲು ನೆರವಾಗುತ್ತದೆ.ರಾತ್ರಿ ಮಲಗುವ ವೇಳೆ ಸಕ್ಕರೆ ಬಳಸಿದ ಯಾವುದೇ ಪಾನೀಯವನ್ನು ಕುಡಿಯದಿರಿ. ಗ್ರೀನ್ ಟೀ ಒಳ್ಳೆಯದು. ತಣ್ಣನೆಯ ಹಾಲು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ ಹಾಗೂ ಉತ್ತಮ ನಿದ್ದೆ ನಿಮ್ಮದಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Birthday ದಿನವೇ ಕಣ್ಮುಚ್ಚಿದ ಕಂದಮ್ಮ!

Thu Feb 17 , 2022
ಆಂಧ್ರಪ್ರದೇಶ: ಮಕ್ಕಳು (Children) ಮನೆಯಲ್ಲಿದ್ದಾರೆ ಅಂದ್ರೆ ಅವರ ಮೇಲೆ ಎರಡೂ ಕಣ್ಣೂ ಇಟ್ಟಿರಬೇಕು. ಧಾರಾವಾಹಿ (Serial) ಬರ್ತಿದೆ, ಆನ್‌ಲೈನ್‌ನಲ್ಲಿ (Online) ಆಫೀಸ್ ಮೀಟಿಂಗ್ (Office Meeting) ಇದೆ ಅಂತ ನೀವು ಸ್ವಲ್ಪ ನಿರ್ಲಕ್ಷ್ಯ ತೋರಿದ್ರೋ ನಿಮ್ಮ ಮಕ್ಕಳು ನಿಮ್ಮ ಕಣ್ತಪ್ಪಿಸಿ, ಅಪಾಯ ಮೈಮೇಲೆ ಎಳೆದುಕೊಳ್ಳಬಹುದು. ಅದ್ಯಾಕೆ ಈ ರೀತಿ ಹೇಳ್ತೀವಿ ಅಂದ್ರೆ ಆಂಧ್ರ ಪ್ರದೇಶದಲ್ಲೂ (Andhra Pradesh) ಇಂಥದ್ದೇ ಒಂದು ಘಟನೆ ನಡೆದಿದೆ. ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದ ಮನೆಯಲ್ಲಿ ಸಾವಿನ […]

Advertisement

Wordpress Social Share Plugin powered by Ultimatelysocial