2022ರಲ್ಲಿ Lenovo ಬಿಡುಗಡೆ ಮಾಡಲಿದೆ ಅತ್ಯದ್ಭುತ ಗೇಮಿಂಗ್ ಸ್ಮಾರ್ಟ್‌ಫೋನ್;

ಸ್ಮಾರ್ಟ್‌ಫೋನ್ ಪ್ರಿಯರ ಪಾಲಿಗೆ 2022 ಹಬ್ಬದ  ವಾತಾವರಣವನ್ನು ಸೃಷ್ಟಿಸಲು ಸಜ್ಜಾಗಿದೆ. ಈಗಾಗಲೇ ದೈತ್ಯ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳಾದ ಸ್ಯಾಮ್‌ಸಂಗ್‌, ಕ್ವಾಲ್‌ಕಾಮ್, ಓಪ್ಪೊ, ಒನ್ ಪ್ಲಸ್‌ಗಳು 2022ರಲ್ಲಿ ಮಾರುಕಟ್ಟೆಗೆ ತಮ್ಮ ವಿನೂತನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿವೆ.
ಇದರ ಬೆನ್ನಿಗೇ ಮತ್ತೊಂದು ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಲೆನೊವೊ  ಕೂಡಾ ತಾನ್ಯಾರಿಗೂ ಕಡಿಮೆ ಇಲ್ಲ ಎಂಬಂತೆ ಗೇಮಿಂಗ್ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.

ಲೀಜಿಯಾನ್ ವೈ90 ನಾಮಕರಣ;
ಸಂಸ್ಥೆಯು ಬಿಡುಗಡೆ ಮಾಡಿರುವ ಅಧಿಕೃತ ಟೀಸರ್ ಪ್ರಕಾರ, ಈ ನೂತನ ಗೇಮಿಂಗ್ ಸ್ಮಾರ್ಟ್‌ಫೋನ್‌ಗೆ ಲೀಜಿಯಾನ್ ವೈ90 ಎಂದು ನಾಮಕರಣ ಮಾಡಲಾಗಿದೆ. ಸಂಸ್ಥೆಯು ಈ ಮಾದರಿಯ ವೈಶಿಷ್ಟ್ಯತೆಯನ್ನು ಬಹಿರಂಗಪಡಿಸಿಲ್ಲವಾದರೂ, ಕೆಲವು ವೈಶಿಷ್ಟ್ಯಗಳನ್ನು ವೈಬೊ ಅಂತರ್ಜಾಲ ತಾಣದಲ್ಲಿ ಬಯಲು ಮಾಡಿದೆ.
ಲೆನೊವೊ ಲೀಜಿಯಾನ್ ವೈ90 ಸ್ಮಾರ್ಟ್‌ಫೋನ್ 6.2 ಇಂಚಿನ ಇ4 ಅಮೋಲೆಡ್ ಪರದೆ ಹೊಂದಿದ್ದು, 144Hz ನವೀಕರಿಸಬಲ್ಲ ಕ್ರಮಾಂಕ ಹಾಗೂ 720Hz ಸ್ಪರ್ಶಿಸುವ ಮಾದರಿಯ ಕ್ರಮಾಂಕವನ್ನು ಹೊಂದಿದೆ.

ಮೊಬೈಲ್ ಗೇಮಿಂಗ್ ಜನಪ್ರಿಯತೆ;
ಇದಕ್ಕೂ ಮುನ್ನ ಲೆನೊವೊ ಸಂಸ್ಥೆಯು ಏಪ್ರಿಲ್ 8, 2021ರಂದು ತಾನು ಗೇಮಿಂಗ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿರುವುದಾಗಿ ಪ್ರಕಟಿಸಿತ್ತು. ಕಳೆದ ವರ್ಷ ಮೊಬೈಲ್ ಗೇಮಿಗ್ ಬಳಕೆದಾರರ ಸಂಖ್ಯೆ 2.6 ಬಿಲಿಯನ್‌ಗೆ ಏರಿಕೆಯಾದ ಹಿನ್ನೆಲೆಯಲ್ಲಿ, ಮೊಬೈಲ್ ಗೇಮಿಂಗ್ ಗಳಿಸುತ್ತಿರುವ ಜನಪ್ರಿಯತೆ ಹಾಗೂ ಅದು ಸುವರ್ಣ ಯುಗವನ್ನು ಪ್ರವೇಶಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಲೆನೊವೊ ಲೀಜಿಯಾನ್ ಡ್ಯುಯಲ್ ಫೋನ್ ಬಿಡುಗಡೆ ಮಾಡಲು ನಿರ್ಧರಿಸಿತ್ತು.

ಗೆಲ್ಲಲೆಂದೇ ಮಾರುಕಟ್ಟೆಗೆ ಬಿಡುಗಡೆ;
ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಎಲ್ಲ ಸ್ಮಾರ್ಟ್‌ಫೋನ್‌ಗಳು ಈ ವೈಶಿಷ್ಟ್ಯವನ್ನು ಒಳಗೊಂಡಿದ್ದು, ಸ್ಪರ್ಧೆಯಲ್ಲಿ ಗೆಲ್ಲುವುದೇ ಮುಖ್ಯವಾಗಿರುವುದರಿಂದ ವೈವಿಧ್ಯಮಯ ಗೇಮಿಂಗ್ ಸಾಮರ್ಥ್ಯ ಹೊಂದಿರುವ ವಿಶೇಷ ವಿನ್ಯಾಸದ ಸ್ಮಾರ್ಟ್‌ಫೋನ್ ಅನ್ನು ಗೆಲ್ಲಲೆಂದೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಲೆನೊವೊ ಹೇಳಿಕೊಂಡಿತ್ತು.

ಎರಡನೆ ತಲೆಮಾರಿನ ತಂತ್ರಜ್ಞಾನ;

ಲೀಜಿಯಾನ್ ಡ್ಯುಯಲ್ 2 ಸ್ಮಾರ್ಟ್‌ಫೋನ್ ಎರಡನೆ ತಲೆಮಾರಿನ ಸುಧಾರಿತ ತಂತ್ರಜ್ಞಾನ ವಾಸ್ತುಶಿಲ್ಪ(ATA 2.0) ಒಳಗೊಂಡಿದ್ದು, ಆಟಗಾರರಿಗೆ ಸರಿಸಾಟಿಯಿಲ್ಲದ ಅನುಭವ ನೀಡುತ್ತದೆ. ಈ ಮಾದರಿಯನ್ನು ಉನ್ನತ ಪ್ರದರ್ಶನಕ್ಕಾಗಿ ಯಾಂತ್ರೀಕರಣಗೊಳಿಸಲಾಗಿದ್ದು, ಸ್ಮಾರ್ಟ್‌ಫೋನ್ ಕತ್ತರಿಸಿದ ಅಂಚು ಹಾಗೂ ಆಟಗಾರರು ಮೊದಲು ಎಂಬ ವೈಶಿಷ್ಟ್ಯದೊಂದಿಗೆ ಮೊಬೈಲ್ ಗೇಮರ್‌ಗಳಿಗೆ ಸ್ಪರ್ಧಾತ್ಮಕ ಲಾಭವನ್ನು ನೀಡಲಿದೆ ಎಂದು ಲೆನೊವೊ ತನ್ನ ಪ್ರಕಟಣೆಯಲ್ಲಿ ಹೇಳಿಕೊಂಡಿತ್ತು.

ಡ್ಯುಯಲ್ ಹ್ಯಾಪ್ಟಿಕ್ಸ್;

ಲೀಜಿಯಾನ್ ಡ್ಯುಯಲ್ 2 ಸ್ಮಾರ್ಟ್‌ಫೋನ್ ಆರ್‌ಜಿಬಿ ಲೈಟಿಂಗ್ ತಂತ್ರಜ್ಞಾನ ಒಳಗೊಂಡಿದ್ದು, ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 885 ಮೊಬೈಲ್ ವೇದಿಕೆ ಹೊಂದಿದೆ. ಇದರೊಂದಿಗೆ 18ಜಿಬಿ ಎಲ್‌ಪಿಡಿಡಿಆರ್5 ನೆನಪಿನ ಸಾಮರ್ಥ್ಯವಿದ್ದು, 51ಜಿಬಿ ಯುಎಫ್‌ಎಸ್ ಸಂಗ್ರಹ ಸಾಮರ್ಥ್ಯವಿದೆ. ಆಕ್ಟಾ-ಟ್ರಿಗರ್ ಹಾಗೂ ಡ್ಯುಯಲ್ ಹ್ಯಾಪ್ಟಿಕ್ಸ್ ಫೀಡ್‌ಬ್ಯಾಕ್ ತಂತ್ರಜ್ಞಾನವು ಆಟಗಾರರಿಗೆ ಸಂತೃಪ್ತ ಅನುಭವ ನೀಡುತ್ತದೆ. ಇದು ಗೇಮಿಂಗ್ ವಿನೋದದಲ್ಲಿ ಮುಳುಗಿ ಹೋಗಲು ಸಹಜವಾಗಿ ಲಬ್ಧವಾಗುವ ಮತ್ತು ಅದ್ಭುತ ನಿಶ್ಚಿತತೆಯನ್ನು ಒದಗಿಸುತ್ತದೆ. ಈ ಮಾದರಿಯು 6.92 ಇಂಚಿನ ವಿಶಾಲವಾದ ಅಮೋಲ್ಡ್ ಎಚ್‌ಡಿಆರ್ 10+ ಡಿಸ್‌ಪ್ಲೇಯೊಂದಿಗೆ ಅಲ್ಟ್ರಾ ಫಾಸ್ಟ್ 144Hz ನವೀಕರಿಸಬಲ್ಲ ಕ್ರಮಾಂಕ ಹಾಗೂ 720Hz ಸ್ಪರ್ಶ ಮಾದರಿಯ ಕ್ರಮಾಂಕ ಒಳಗೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಟ್ಟುಹಬ್ಬದ ಶುಭಾಶಯಗಳು ಚಿತ್ರತಂಡದ ಜೊತೆ ಮಾತುಕತೆ | Huttu Habbada Shubhashayagalu | Kavitha Gowda | SNK

Sun Jan 2 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial