ಆಸ್ಕರ್ ವೇದಿಕೆಯಲ್ಲಿ ‘ನಾಟು…ನಾಟು…’ ಹಾಡು LIVE ಪ್ರದರ್ಶನ,

ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದ ‘ನಾಟು…ನಾಟು…’ ಹಾಡು ಅತ್ಯುತ್ತಮ ಮೂಲ ಗೀತೆ (ಒರಿಜನಲ್) ವರ್ಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಪಡೆದಿದೆ.ಈಗ 95ನೇ ಅಕಾಡೆಮಿ ಅವಾರ್ಡ್ಸ್‌ ವೇದಿಕೆಯಲ್ಲಿ ಚಿತ್ರದ ಜನಪ್ರಿಯ ‘ನಾಟು…ನಾಟು…’ ಹಾಡು ಲೈವ್ ಆಗಿ ಪ್ರದರ್ಶನವಾಗಲಿದೆ ಎಂದು ವರದಿಯಾಗಿದೆ.ಮಾರ್ಚ್ 12ರಂದು ಆಸ್ಕರ್ ಪ್ರಶಸ್ತಿ ಪ್ರಕಟಗೊಳ್ಳಲಿದೆ. ಅಂದು ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಗಾಯಕರಾದ ರಾಹುಲ್ ಸಿಪ್ಲಿಗಂಜ್ ಹಾಗೂ ಕಾಲಭೈರವ ಈ ಹಾಡನ್ನು ಹಾಡಲಿದ್ದಾರೆ ಎಂದು ‘ದಿ ಅಕಾಡೆಮಿ’ ತಿಳಿಸಿದೆ.ನಾಟು ನಾಟು ಹಾಡು ಈಗಾಗಲೇ ಜಗತ್ತಿನಾದ್ಯಂತ ಹೆಚ್ಚು ಜನಪ್ರಿಯವಾಗಿದೆ.

ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಚಿರುವ ಆರ್‌ಆರ್‌ಆರ್ ಈಗ ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿದೆ. ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದ ಈ ಹಾಡಿನ ಸಾಹಿತ್ಯವನ್ನು ಚಂದ್ರಬೋಸ್ ಬರೆದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಮ್ ಕಾರ್ಡ್ ಹಾಳು ಮಾಡಿದ್ದಕ್ಕೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ,

Wed Mar 1 , 2023
ಮೊಬೈಲ್ ಸಿಮ್ ಕಾರ್ಡ್ ಹಾಳು ಮಾಡಿದನೆಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಸಂಬಂಧಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಾಳ ಮಂದರ್ಗಿ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಭರತ ಸುಭಾಷ್ ಚಂದ್ರವಾಡಿ ಎಂಬವನನ್ನು ಕೊಲೆ ಮಾಡಲಾಗಿದೆ. ಈತ ತನ್ನ ಸಂಬಂಧಿ ಮಲ್ಲಿಕಾರ್ಜುನನ ಮೊಬೈಲ್ ನಲ್ಲಿದ್ದ ಸಿಮ್ ಕಾರ್ಡ್ ತೆಗೆದು ಇದ್ದಕ್ಕಿದ್ದಂತೆ ನೆಲಕ್ಕೆ ತಿಕ್ಕಿ […]

Advertisement

Wordpress Social Share Plugin powered by Ultimatelysocial