ಲಂಡನ್‌, ಫೆಬ್ರವರಿ 20: ರಾಣಿ ಎಲಿಜಬೆತ್ (95) ಅವರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ ಎಂದು ಬಕಿಂಗ್‌ಹ್ಯಾಮ್‌ನ ಅರಮನೆ ಮಾಹಿತಿ ನೀಡಿದೆ;

ಲಂಡನ್‌, ಫೆಬ್ರವರಿ 20: ರಾಣಿ ಎಲಿಜಬೆತ್ (95) ಅವರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ ಎಂದು ಬಕಿಂಗ್‌ಹ್ಯಾಮ್‌ನ ಅರಮನೆ ಮಾಹಿತಿ ನೀಡಿದೆ. ಈ ಬಗ್ಗೆ ಯುಕೆ ಅಧಿಕಾರಿಗಳು ಭಾನುವಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

“”ರಾಣಿ ಇಂದು ಕೋವಿಡ್‌ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ,” ಎಂದು ಬಕಿಂಗ್ಹ್ಯಾಮ್ ಅರಮನೆ ಹೇಳಿಕೆಯಲ್ಲಿ ತಿಳಿಸಿದೆ.

“ಶೀತವನ್ನೂ ಒಳಗೊಂಡಂತೆ ಅವರಿಗೆ ಕೋವಿಡ್‌ನ ಸೌಮ್ಯ ರೋಗಲಕ್ಷಣಗಳಿವೆ. ಈ ವಾರ ಅವರು ತಮ್ಮ ವಿಂಡ್ಸರ್ ಕ್ಯಾಸಲ್ ನಿವಾಸದಲ್ಲಿ ಅಲ್ಪ ಪ್ರಮಾಣದಲ್ಲಿ ಕರ್ತವ್ಯಗಳನ್ನು ಮುಂದುವರಿಸುವ ನಿರೀಕ್ಷೆಯಿದೆ,” ಎಂದು ಬಕಿಂಗ್‌ಹ್ಯಾಮ್‌ನ ಅರಮನೆ ಹೇಳಿದೆ.

“ಅವರು ವೈದ್ಯಕೀಯ ಆರೈಕೆಯನ್ನು ಪಡೆಯುವುದನ್ನು ಮುಂದುವರಿಸುತ್ತಾರೆ ಮತ್ತು ಎಲ್ಲಾ ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ,” ಎಂದು ಕೂಡಾ ವರದಿ ಉಲ್ಲೇಖ ಮಾಡಿದೆ. ರಾಣಿಯ ಮಗ, ಪ್ರಿನ್ಸ್ ಚಾರ್ಲ್ಸ್ ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಇಬ್ಬರೂ ಈ ತಿಂಗಳ ಆರಂಭದಲ್ಲಿ ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ.

ರಾಣಿ ಎಲಿಜಬೆತ್‌ ಅವರ ಹಿರಿಯ ಮಗ ಪ್ರಿನ್ಸ್ ಚಾರ್ಲ್ಸ್ ಫೆಬ್ರುವರಿ 10 ರಂದು ವಿಂಡ್ಸರ್‌ನಲ್ಲಿ ತಾಯಿಯನ್ನು ಭೇಟಿಯಾಗಿದ್ದರು. ಅದಾದ ಎರಡು ದಿನಗಳಲ್ಲಿ ಚಾರ್ಲ್ಸ್‌ ಅವರಿಗೆ ಕೋವಿಡ್‌ ಇರುವುದು ದೃಢವಾಗಿತ್ತು. ಈಗ ಬೇರೆ ಯಾರಿಗೆ ಕೊವಿಡ್‌ ಸೋಂಕು ದೃಢಪಟ್ಟಿದೆ ಎಂಬುವುದು ಸ್ಪಷ್ಟವಾಗಿಲ್ಲ.

95 ವರ್ಷದ ರಾಣಿ ಎಲಿಜಬೆತ್ ಈಗಾಗಲೇ ಮೂರು ಡೋಸ್‌ ಕೊರೊನಾ ವೈರಸ್‌ ಲಸಿಕೆಗಳನ್ನು ಹಾಕಿಸಿಕೊಂಡಿದ್ದಾರೆ. ಕೋವಿಡ್‌ ಪಾಸಿಟಿ‌ವ್‌ಗೆ ಒಳಗಾಗುವ ಜನರು ಕನಿಷ್ಠ ಐದು ದಿನಗಳವರೆಗೆ ಸ್ವಯಂ-ಪ್ರತ್ಯೇಕಿಸಬೇಕಾಗುತ್ತದೆ, ಆದರೂ ಮುಂಬರುವ ವಾರದಲ್ಲಿ ಇಂಗ್ಲೆಂಡ್‌ಗೆ ಆ ನಿರ್ಬಂಧವನ್ನು ತೆಗೆದುಹಾಕಲು ಬ್ರಿಟಿಷ್ ಸರ್ಕಾರ ಯೋಜಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನವದೆಹಲಿ: ದೇಶದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಲ್ಲಿ ಭಾರೀ ಇಳಿಕೆ ಕಂಡುಬಂದಿದೆ;

Mon Feb 21 , 2022
ನವದೆಹಲಿ: ದೇಶದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಲ್ಲಿ ಭಾರೀ ಇಳಿಕೆ ಕಂಡುಬಂದಿದೆ. 24 ಗಂಟೆಗಳ ಅವಧಿಯಲ್ಲಿ 16,051 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 206 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ. ದೇಶದಲ್ಲಿ ಸದ್ಯ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 2,02,131ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇಕಡ 1.93ರಷ್ಟಿದೆ. ಕೋವಿಡ್ ಚೇತರಿಕೆ ದರ ಶೇಕಡ 98.33ರಷ್ಟಿದೆ. ದೇಶದಲ್ಲಿ ಈವರೆಗೆ 5,12,109 ಮಂದಿ ಕೋವಿಡ್‌ನಿಂದ ಅಸುನೀಗಿದ್ದಾರೆ. ಈವರೆಗೆ 175 […]

Advertisement

Wordpress Social Share Plugin powered by Ultimatelysocial