ಕಮಲದ ಬೇರು ಆರೋಗ್ಯಕ್ಕೆ ಎಷ್ಟು ಉಪಕಾರಿ?????

ಕಮಲದ  ಬೇರನ್ನು ಹೆಚ್ಚಾಗಿ ಚೀನಾ, ಕೊರಿಯಾ, ಭಾರತ ಮತ್ತು ಜಪಾನ್ ನಲ್ಲಿ ಖಾದ್ಯಗಳಿಗೆ ಬಳಕೆ ಮಾಡಿಕೊಳ್ಳುವರು. ಆದರೆ ಭಾರತೀಯರು ಹಿಂದಿನಿಂದಲೂ ಇದನ್ನು ಆಯುರ್ವೇದದಲ್ಲಿ ಹಲವಾರು ರೀತಿಯ ಕಾಯಿಲೆಗಳ ನಿವಾರಣೆಗೆ ಬಳಕೆ ಮಾಡುತ್ತಲಿದ್ದರು. ಮುಖ್ಯವಾಗಿ ಚರ್ಮ, ಹೊಟ್ಟೆ, ಶ್ವಾಸಕೋಶ ಮತ್ತು ಇತರ ಕಾಯಿಲೆಗಳಿಗೆ ಇದನ್ನು ಬಳಕೆ ಮಾಡಲಾಗುತ್ತಿತ್ತು.
ಕಮಲದ ಬೇರಿನಲ್ಲಿರುವ ಪೌಷ್ಠಿಕ ಸತ್ವಗಳು 100 ಗ್ರಾಂ ಹಸಿ ಕಮಲ ಬೇರಿನಲ್ಲಿ 79.10 ಗ್ರಾಂ ನೀರು ಮತ್ತು 74 ಕೆಸಿಎಎಲ್ ಶಕ್ತಿ ಇದೆ. ಕಮಲ ಬೇರಿನಲ್ಲಿ ಇರುವ ಇತರ ಕೆಲವು ಪೋಷಕಾಂಶಗಳು ಈ ರೀತಿಯಾಗಿ ಇದೆ. 2.60 ಗ್ರಾಂ ಪ್ರೋಟೀನ್ 17.23 ಗ್ರಾಂ ಕಾರ್ಬೋಹೈಡ್ರೇಟ್ಸ್ 4.9 ಗ್ರಾಂ ನಾರಿನಾಂಶ 45 ಗ್ರಾಂ ಕ್ಯಾಲ್ಸಿಯಂ 1.16 ಗ್ರಾಂ ಕಬ್ಬಿಣಾಂಶ 23 ಮಿ.ಗ್ರಾಂ ಮೆಗ್ನಿಶಿಯಂ 100 ಮಿ.ಗ್ರಾಂ ಪೋಸ್ಪರಸ್ 556 ಮಿ.ಗ್ರಾಂ. ಪೊಟಾಶಿಯಂ 450 ಮಿ.ಗ್ರಾಂ. ಸೋಡಿಯಂ 0.39 ಮಿ.ಗ್ರಾಂ ಸತು 44 ಮಿ.ಗ್ರಾಂ. ವಿಟಮಿನ್ ಸಿ 0.25 ಮಿ.ಗ್ರಾಂ.  ಜೀರ್ಣಕ್ರಿಯೆ ಸುಧಾರಣೆ ಹೆಚ್ಚಿನವರಿಗೆ ಇಂದಿನ ದಿನಗಳಲ್ಲಿ ಮಲಬದ್ಧತೆ ಸಮಸ್ಯೆಯು ಕಾಡುವುದು ಹೆಚ್ಚು, ಇದಕ್ಕಾಗಿ ಕಮಲದ ಬೇರನ್ನು ಬಳಸಬಹುದು. ಯಾಕೆಂದರೆ ಇದರಲ್ಲಿ ಅಧಿಕ ನಾರಿನಾಂಶವಿದೆ. ಇದು ಮಲವನ್ನು ಮೆದುಗೊಳಿಸುವುದು ಮತ್ತು ಮಲಬ್ಧತೆ ಸಹಿತ ಕರುಳಿನ ಕ್ರಿಯೆಯನ್ನು ಸರಾಗವಾಗಿಸುವುದು. ಭೇದಿ ನಿವಾರಣೆ ಮಾಡಲು ಇದು ತುಂಬಾ ಪರಿಣಾಮಕಾರಿ.
ರಕ್ತದೊತ್ತಡ ನಿಯಂತ್ರಿಸುವುದು ಕಮಲದ ಬೇರಿನಲ್ಲಿ ಇರುವ ಪೊಟಾಶಿಯಂ ಅಂಶವು ರಕ್ತನಾಳಗಳಿಗೆ ಆರಾಮ ನೀಡುವುದು ಮತ್ತು ರಕ್ತ ಸರಬರಾಜು ಸರಿಯಾಗಿ ಆಗಲು ನೆರವಾಗುವುದು. ಇದು ದೇಹದಲ್ಲಿ ಇರುವ ದ್ರವಾಂಶವನ್ನು ಸಮತೋಲನದಲ್ಲಿ ಇಡುವುದು ಮತ್ತು ರಕ್ತದ ಮೇಲೆ ಸೋಡಿಯಂನ ಪ್ರಭಾವ ಕಡಿಮೆ ಮಾಡುವುದು. ಇದರಿಂದಾಗಿ ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡುತ್ತದೆ.
ಪ್ರತಿರೋಧಕ ವ್ಯವಸ್ಥೆ ಬಲಗೊಳಿಸುವುದು ದೇಹಕ್ಕೆ ಯಾವುದೇ ಕಾಯಿಲೆಗಳು ಬಾಧಿಸದಂತೆ ಇರಬೇಕಾದರೆ ಆಗ ಪ್ರಮುಖವಾಗಿ ಪ್ರತಿರೋಧಕ ವ್ಯವಸ್ಥೆಯು ಬಲವಾಗಿರಬೇಕು. ಕಮಲ ಹೂವಿನ ಬೇರಿನಲ್ಲಿರುವಂತಹ ವಿಟಮಿನ್ ಸಿಯು ಬಿಳಿ ರಕ್ತದ ಕಣಗಳನ್ನು ಹೆಚ್ಚಿಸುವುದು ಮತ್ತು ಇದರಿಂದ ಯಾವುದೇ ರೋಗದ ವಿರುದ್ಧ ಇದು ಹೋರಾಡುವಂತೆ ಮಾಡುವುದು. ದೇಹದ ಪ್ರತಿರೋಧಕ ವ್ಯವಸ್ಥೆಯು ಬಲಗೊಳ್ಳುವುದು.
ಹೃದಯದ ಆರೋಗ್ಯ ಕಾಪಾಡುವುದು ಕಮಲ ಹೂವಿನ ಬೇರಿನಲ್ಲಿ ಪಿರಿಡಾಕ್ಸಿನ್ ಎನ್ನುವ ಅಂಶವಿದ್ದು, ಹೋಮೋಸಿಸ್ಟೈನ್ ಅಂಶವನ್ನು ಇದು ಕಡಿಮೆ ಮಾಡುತ್ತದೆ. ಅಧಿಕ ಮಟ್ಟದಲ್ಲಿ ಹೋಮೋಸಿಸ್ಟೈನ್ ಇದ್ದರೆ ಅದರಿಂದ ಹೃದಯಾಘಾತದ ಅಪಾಯ ಹೆಚ್ಚಾಗಿರುವುದು. ಪೊಟಾಶಿಯಂ ಮತ್ತು ಆಹಾರದ ನಾರಿನಾಂಶದಿಂದಾಗಿ ರಕ್ತದಲ್ಲಿನ ಕೊಲೆಸ್ಟ್ರಾಲ್ ನ್ನು ಇದು ತೆಗೆಯುವುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

D.K Suresh : ನಮ್ಮ ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ | Speed News Kannada

Thu Jan 13 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial