ಎಮ್.ಆರ್.ಪಾಟೀಲ್’ರಿಂದ ಅಬ್ಬರದ ಪ್ರಚಾರ..!

ಕೇಂದ್ರ ಸಚಿವರು, ಹಾಗೂ ಕ್ಷೇತ್ರದ ಉಸ್ತುವಾರಿಗಳ ಸಾಥ್! ಕುಂದಗೋಳ: ಮೋಸ ಮಾಡುವ ಕಾಂಗ್ರೆಸ್ ಈಗ ಮತ್ತೆ ಗ್ಯಾರಂಟಿ ಕಾರ್ಡ್ ಜೊತೆ ಬಂದಿದ್ದಾರೆ. ಅವರ ಮೇಲೆ ಜನರಿಗೆ ವಿಶ್ವಾಸವಿಲ್ಲ. ಅದು ಬೋಗಸ್ ಕಾರ್ಡ, ಚುನಾವಣೆವರೆಗೂ ಮಾತ್ರ ಗ್ಯಾರಂಟಿ, ಆಮೇಲೆ ಗಳಗಂಟಿ ಎಂದು ಕೇಂದ್ರ ಸಚಿವ ಕೈಲಾಸ ಚೌದ್ರಿ ಅವರು ಹೇಳಿದರು.

ಅವರು ಮಂಗಳವಾರ ಶೆರೆವಾಡ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಅವರ ಪರವಾಗಿ ಹರಿಯಾಣದ ಶಾಸಕ ಹಾಗೂ ಕ್ಷೇತ್ರದ ಉಸ್ತುವಾರಿ ಅಸ್ಸಿಂ ಗೋಯಲ್ ಅವರ ಜೊತೆಗೂಡಿ ರೋಡ್ ಶೋ ನಡೆಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತದಿಂದ ದೇಶದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಎಲ್ಲ ಸಮೂದಾಯಗಳ ಪರವಾಗಿ ಅಭಿವೃದ್ಧಿ ಯೋಜನೆಗಳೊಂದಿಗೆ ಮೋದಿಯವರು ಶ್ರಮಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸುವ ಮೂಲಕ ಮೋದಿ ಅವರಿಗೆ ಶಕ್ತಿ ತುಂಬಬೇಕು ಎಂದು ಹೇಳಿದರು.

ಈಗಾಗಲೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆ, ರೈತ ವಿದ್ಯಾನಿಧಿ ಯೋಜನೆ ಸೇರಿದಂತೆ ಇನ್ನಿತರ ಜನಪರ ಯೋಜನೆ ಅನುಷ್ಠಾನ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಕಾರ್ಯಗಳು ಹಾಗೂ ಸುಭದ್ರ ದೇಶಕ್ಕಾಗಿ ಬಿಜೆಪಿಯನ್ನು ಪ್ರತಿಯೊಬ್ಬ ಮತದಾರರು ಬೆಂಬಲಿಸುವುದರ ಮೂಲಕ ಬಿಜೆಪಿ ಅಭ್ಯರ್ಥಿ ಎಮ್.ಆರ್‌.ಪಾಟೀಲ್ ಅವರಿಗೆ ಹೆಚ್ಚು ಮತಗಳಿಂದ ಗೆಲುವಿಗೆ ಕಾರಣರಾಗಬೇಕೆಂದು ಕರೆ ಕೊಟ್ಟರು.

ಕೈಲಾಸ ಚೌದ್ರಿ ಭರ್ಜರಿ ರೋಡ್ ಶೋ ಕೇಂದ್ರ ಕೃಷಿ ಸಚಿವ ಕೈಲಾಸ ಚೌದ್ರಿ ಅವರು ಮಂಗಳವಾರ ಕುಂದಗೋಳ ವಿಧಾನಸಭಾ ಮತಕ್ಷೇತ್ರದಲ್ಲಿ ಸಂಚರಿಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು. ಬೆಳಿಗ್ಗೆ ಶೆರೆವಾಡ ಗ್ರಾಮದಲ್ಲಿ ತೆರೆದ ವಾಹನದಲ್ಲಿ ಸಂಚರಿಸಿ ಮತ ಬೇಟೆಯಾಡಿದರು. ಕುಂದಗೋಳ ಕ್ಷೇತ್ರದಲ್ಲಿ ಅವರು ನಡೆಸಿದ ಭರ್ಜರಿ ಪ್ರಚಾರಕ್ಕೆ ವ್ಯಾಪಕ ಜನ ಬೆಂಬಲ ವ್ಯಕ್ತವಾಯಿತು.

ಕನಿಷ್ಠ 50 ಸಾವಿರ ಅಂತರದ ಮತದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ  ಕುಂದಗೋಳ ವಿಧಾನಸಭಾ ಮತಕ್ಷೇತ್ರದಲ್ಲಿ ಭರ್ಜರಿ ಚುನಾವಣೆ ಪ್ರಚಾರ ಕೈಗೊಂಡ ಕೇಂದ್ರ ಕೃಷಿ ಸಚಿವ ಕೈಲಾಸ ಚೌದ್ರಿ ಅವರು ಪಟ್ಟಣದಲ್ಲಿನ ಪಕ್ಷದ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಈ ವೇಳೆ ಎಮ್.ಆರ್.ಪಾಟೀಲ ಅವರ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ನಮ್ಮ ಡಬಲ್ ಎಂಜಿನ್ ಸರ್ಕಾರವನ್ನು ಡಬಲ್ ಸ್ಪೀಡ್ ಅಲ್ಲಿ ಮತ್ತೆ ಚಲಾಯಿಸೋಣ. ನಮ್ಮ ಗುರಿ ಸ್ಪಷ್ಟ, ಕೇಂದ್ರದಲ್ಲಿ ನರೇಂದ್ರ ಮೋದಿ ಇರೋವರೆಗೂ ಕರ್ನಾಟಕದ ಅಭಿವೃದ್ಧಿ ಖಂಡಿತ ಸಾಧ್ಯ. ಭಾರತೀಯ ಜನತಾ ಪಕ್ಷದ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಮೇ.10 ರಂದು ನಡೆಯುವ ಚುನಾವಣೆಯಲ್ಲಿ ಎಲ್ಲರೂ ಕಮಲ ಚಿಹ್ನೆಗೆ ಮತ ನೀಡುವಂತೆ ಮತದಾರರಲ್ಲಿ ತಿಳಿಹೇಳಿ ಬಿಜೆಪಿ ಮತ್ತೆ ಅಧಿಕಾರಕ್ಕೆ ತರೋಣ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಅವರನ್ನು ಕನಿಷ್ಠ 50 ಸಾವಿರ ಅಂತರದಿಂದ ಗೆಲ್ಲಿಸಿಕೊಂಡು ಬರೋಣ. ಈ ಬಗ್ಗೆ ಎಲ್ಲರೂ ಸಂಕಲ್ಪ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಹರಿಯಾಣದ ಶಾಸಕ ಹಾಗೂ ಕ್ಷೇತ್ರದ ಉಸ್ತುವಾರಿ ಅಸ್ಸಿಂ ಗೋಯಲ್, ಅಭ್ಯರ್ಥಿ ಎಮ್.ಆರ್.ಪಾಟೀಲ್, ತಾಲೂಕು ಅಧ್ಯಕ್ಷ ರವಿಗೌಡ ಪಾಟೀಲ, ಡಿ.ವಾಯ್, ಲಕ್ಕನಗೌಡ್ರ, ದಾನಪ್ಪ ಗಂಗಾಯಿ, ಮುಖಂಡರಾದ ಶಿವಾನಂದ ಉಳಾಗಡ್ಡಿ, ಸಿದ್ದಪ್ಪ ಹಣಿ, ಮಂಜುಳಾ ಮಡ್ಲಿ, ಮಲ್ಲಿಕಾರ್ಜುನಗೌಡ ಖಾನಗೌಡ್ರ, ವಿರೂಪಾಕ್ಷ ಯಡವಣ್ಣವರ, ಉಮೇಶ ಕುಸುಗಲ್, ಲಿಂಗರಾಜ ಮೆಣಸಿನಕಾಯಿ, ಮಹೇಶಗೌಡ ಪಾಟೀಲ, ಬಸನಗೌಡ ಶಿವನಗೌಡ, ನಿಂಗನಗೌಡ ಮರಿಗೌಡ್ರ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.

ವಿವಿಧ ಪಕ್ಷ ತೊರೆದು ನೂರಾರು ಯುವಕರು ಬಿಜೆಪಿ ಸೇರ್ಪಡೆ  ಕುಂದಗೋಳ: ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದ್ದು, ಬಿಜೆಪಿಯ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ನೂರಾರು ಯುವಕರ ಪಡೆ ಎಮ್.ಆರ್.ಪಾಟೀಲ ಅವರ ನೇತೃತ್ವದಲ್ಲಿ ಶೆರೆವಾಡ ಹಾಗೂ ರಾಮನಕೊಪ್ಪ ಗ್ರಾಮದಲ್ಲಿ ಯುವ ಮುಖಂಡರು ಬಿಜೆಪಿ ಪಕ್ಷ ಸೇರ್ಪಡೆಯಾದರು. ಕ್ಷೇತ್ರದಲ್ಲಿ ಮತಯಾಚನೆ ಕೈಗೊಂಡ ಅವರು, ಅಭಿವೃದ್ಧಿ ಕಾರ್ಯಗಳ ಕರಪತ್ರ ಹಂಚಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ಇದೇ ವೇಳೆ ಶೆರೆವಾಡ ಗ್ರಾಮದ ಜನತೆ ಹಾರ ಹಾಕಿ ಪ್ರೀತಿಯಿಂದ ಬರಮಾಡಿಕೊಂಡು, ಪ್ರತಿ ಬೀದಿಗಳಲ್ಲಿ ಪ್ರಚಾರ ನಡೆಸುವ ಸಂದರ್ಭದಲ್ಲಿ ಮಹಿಳೆಯರು ಆರತಿ ಬೆಳಗಿ, ಶುಭ ಕೋರಿದರು‌.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆ. ಆರ್. ಪೇಟೆ ಮಾಜಿ ಶಾಸಕ ರಾಮದಾಸ್ ರಿಂದ ಕೊಳ್ಳೇಗಾಲದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠ..!

Wed Apr 26 , 2023
ಮಾಜಿ ಶಾಸಕ ರಾಮದಾಸ್ ಮಾತನಾಡಿ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಜನತೆ ಪ್ರಬುದ್ಧರು, ಪ್ರಜ್ಞೆವಂತರು, ಅಭಿವೃದ್ಧಿಗೆ ಹೆಚ್ಚು ಹೊತ್ತು ಕೊಡುವ ನಾಯಕರನ್ನು ಅರಿಸುವುದರಲ್ಲಿ ಆಲೋಚನ ಶಕ್ತಿ ಇರುವಂತವರು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಮಹೇಶ್ ರವರು ಒಂದು ಆದರ್ಶಗಳನ್ನು ಇಟ್ಟುಕೊಂಡು, ಅನೇಕ ಹೋರಾಟಗಳನ್ನು ಮಾಡಿ ಸತತ ಪ್ರಯತ್ನದಿಂದ bsp ಮೂಲಕ ಗೆದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷಕ್ಕೆ ಪಕ್ಷಾಂತರಗೊಂಡರು,ಬಿಜೆಪಿ ಕೊಟ್ಟಂತ ಅಭಿವೃದ್ಧಿಯನ್ನ ಕ್ಷೇತ್ರಕ್ಕೆ ಒದಗಿಸುವುದರಲ್ಲಿ ಪ್ರಾಮಾಣಿಕ ಕೆಲಸವನ್ನು ಮಾಡಿದ್ದಾರೆ… ಕ್ಷೇತ್ರದ […]

Advertisement

Wordpress Social Share Plugin powered by Ultimatelysocial