“ಲವ್ ಬರ್ಡ್ಸ್” ಚಿತ್ರದಲ್ಲಿ ಲಾಯರ್ ಆದ ಸಂಯುಕ್ತ ಹೊರನಾಡು.

ತಾರಾ ಜೋಡಿ ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ನಾಯಕ-ನಾಯಕಿಯಾಗಿ ನಟಿಸಿರುವ “ಲವ್ ಬರ್ಡ್ಸ್” ಚಿತ್ರದಲ್ಲಿ ನಟಿ ಸಂಯುಕ್ತ ಹೊರನಾಡು ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಯಾರಿಗೂ ಅಂಜದ ದಿಟ್ಟ ಹುಡುಗಿಯಾಗಿ, ತೆಗೆದುಕೊಂಡ ಎಲ್ಲಾ ಕೇಸ್ ಗಳಲ್ಲೂ ಯಶಸ್ಸು ಗಳಿಸುವ ಯಶಸ್ವಿ ಲಾಯರ್ ಆಗಿ ಅಭಿನಯಿಸಿರುವ ಸಂಯುಕ್ತ ಹೊರನಾಡು ಪಾತ್ರದ ಹೆಸರು ಮಾಯಾ. ಈಕೆ ನಾಯಕ ಹಾಗೂ ನಾಯಕಿ ದೀಪಕ್ – ಪೂಜಾ ಇಬ್ಬರಿಗೂ ಗೆಳತಿ ಕೂಡ.

ಯಂಗ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಯುಕ್ತ ಹೊರನಾಡು ಅವರ ಪಾತ್ರಕ್ಕೆ ಸರಿಹೊಂದುವ ಕಾಸ್ಟ್ಯೂಮ್ಸ್ ಗಳನ್ನು ಬಳಸಿಕೊಳ್ಳಲಾಗಿದೆ ಹಾಗೂ ಮೊದಲ ಬಾರಿಗೆ ಸಂಯುಕ್ತ ಹೊರನಾಡು ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ.

ಶ್ರೀಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಕಡ್ಡಿಪುಡಿ ಚಂದ್ರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಮೊದಲ ಹಾಡು ಜನವರಿ 22 ರಂದು ಬಿಡುಗಡೆಯಾಗಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಲ್ಲದ ರುಚಿ ಕೆಡಿಸಲು ಕಾಂಗ್ರೆಸ್ ಪಡೆ ರಣತಂತ್ರ.

Sat Jan 21 , 2023
  ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕೂಡ ಒಂದು. ಇದು ಬಿಜೆಪಿಯ ಭದ್ರಕೋಟೆ. 2 ಬಾರಿ ಕ್ಷೇತ್ರವನ್ನಾಳಿರುವ ಬಿಜೆಪಿಯ ಅರವಿಂದ ಬೆಲ್ಲದ, ಹ್ಯಾಟ್ರಿಕ್ ಜಯದ ಉಮೇದಿಯಲ್ಲಿದ್ದಾರೆ. ತಂದೆ ಚಂದ್ರಕಾಂತ ಬೆಲ್ಲದ 3 ಬಾರಿ ಹಾಗೂ ಪುತ್ರ ಅರವಿಂದ 2 ಬಾರಿ ಶಾಸಕರಾಗಿದ್ದು, ‘ಬೆಲ್ಲದ’ ರುಚಿಗೆಡಿಸಲು ಕೈ ಪಡೆಯಲ್ಲಿ ರಣತಂತ್ರ ರೂಪಿಸಲಾಗುತ್ತಿದೆ. ಕ್ಷೇತ್ರದಲ್ಲಿ 1983ರ ಚುನಾವಣೆ ಯಲ್ಲಿ ಕಾಂಗ್ರೆಸ್​ನ ಎಸ್.ಆರ್. ಮೋರೆ, 1985ರಲ್ಲಿ ಸ್ವತಂತ್ರ ಅಭ್ಯರ್ಥಿ ಚಂದ್ರಕಾಂತ ಬೆಲ್ಲದ, […]

Advertisement

Wordpress Social Share Plugin powered by Ultimatelysocial