ಶಶಿ ಹೆಗಡೆಗೆ ‘ಬ್ರೋ’ ಎಂದು ಕರೆದು ಪ್ರೀತಿಸಿ ಮದುವೆಯಾದ ‘ಶ್ರೀರಸ್ತು ಶುಭಮಸ್ತು’ ನಟಿ ಲಾವಣ್ಯಾ ಭಾರದ್ವಾಜ್.

 

ಕನ್ನಡ ಕಿರುತೆರೆಯ ನಟಿ ಶಶಿ ಲಾವಣ್ಯಾ ಅವರು  ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟು ಖುಷಿ ಖುಷಿಯಾಗಿ ಜೀವನ ಮಾಡುತ್ತಿದ್ದಾರೆ. ಆದರೆ ಈ ಹಿಂದೆ ಲಾವಣ್ಯಾ ಅವರು ಶಶಿ ಹೆಗಡೆಗೆ ಬ್ರೋ ಎಂದು ಕರೆಯುತ್ತಿದ್ದರಂತೆ.’ರಾಜಾ ರಾಣಿ’ ಧಾರಾವಾಹಿಯಲ್ಲಿ ಲಾವಣ್ಯಾ ಭಾರದ್ವಾಜ್ ಹಾಗೂ ಶಶಿ ಹೆಗಡೆ ಅವರು ಭೇಟಿಯಾಗಿದ್ದರು. ಮೊದಲ ದಿನ ಶಶಿಗೆ ಲಾವಣ್ಯಾ ಅವರು ಬ್ರೋ ಬ್ರೋ ಎಂದು ಕರೆಯುತ್ತಿದ್ದರಂತೆ. ಆಮೇಲೆ ಶಶಿ ಅವರು ಬ್ರೋ ಅಂತ ಕರೀಬೇಡ ಅಂದರಂತೆ. ಲಾವಣ್ಯಾ ಅವರು ಆಮೇಲೆ ಬ್ರೋ ಅಂತ ಕರೆಯೋದನ್ನು ನಿಲ್ಲಿಸಿದರು. ಬರುಬರುತ್ತ ಇವರಿಬ್ಬರು ಪರಸ್ಪರ ಅರ್ಥ ಮಾಡಿಕೊಂಡರು, ಸ್ನೇಹಿತರಾದರು.ಆರಂಭದಲ್ಲಿ ಧಾರಾವಾಹಿ ಸೆಟ್‌ನಲ್ಲಿ ನಾಲ್ಕು ಜನರು ( ಲಾವಣ್ಯಾ, ಶಶಿ ಹೆಗಡೆ, ಶಿಲ್ಪಾ ಶೆಟ್ಟಿ ) ಸ್ನೇಹಿತರಾದರು. ಈ ನಾಲ್ಕು ಜನರು ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದರು, ಟ್ರಿಪ್‌ಗೆ ಹೋಗುತ್ತಿದ್ದರು. 6 ತಿಂಗಳುಗಳ ಕಾಲ ಲಾವಣ್ಯಾ ಅವರು ಹೇಗೆ? ಏನು? ಅಂತೆಲ್ಲ ತಿಳಿದುಕೊಂಡು ಒಂದು ದಿನ ಶಶಿ ಅವರು ಪ್ರೇಮ ನಿವೇದನೆ ಮಾಡಿದ್ದರು. ಆದರೆ ಲಾವಣ್ಯಾ ಮಾತ್ರ ಏನೂ ಉತ್ತರ ನೀಡಲಿಲ್ಲ.ಲಾವಣ್ಯಾ ಉತ್ತರಕ್ಕೆ ಕಾಯದೆ ಶಶಿ ಅವರು ಅವರ ಮನೆಗೆ ಹೋಗಿ ಮದುವೆ ಮಾತುಗಳನ್ನಾಡಿದ್ದರಂತೆ. ಅಂತೂ ಶಶಿ, ಲಾವಣ್ಯಾ ಅವರು ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಇವರಿಬ್ಬರು ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು. ಸಾಕಷ್ಟು ಬಾರಿ ಜಗಳ ಆಡಿದರೂ ಕೂಡ ಇವರಿಬ್ಬರು ಯಾವತ್ತೂ ಬ್ರೇಕಪ್ ಮಾಡಿಕೊಳ್ಳಬೇಕು ಅಂದುಕೊಂಡಿರಲಿಲ್ಲ. ಮದುವೆ ದಿನ ಅಂತರ್‌ಪರದೆ ತೆಗೆಯುವಾಗ ಶಶಿ ಹಾಗೂ ಲಾವಣ್ಯಾಗೆ ಸ್ವಲ್ಪ ಭಯ ಆಗಿತ್ತಂತೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ ಹೇಳಿಕೆ.

Fri Feb 24 , 2023
  ಕಾಂಗ್ರೆಸ್ ನಿಂದ ಮೂರನೇ ಭಾಗ್ಯ ಘೋಷಣೆ ಹಿನ್ನೆಲೆ ಈಗಾಗಲೇ ನಾವು 5 ಕೆಜಿ ಅಕ್ಕಿ ಕೊಡುತ್ತಿದ್ದೇವೆ ನಾವು 10 ಕೆಜಿ ಕೊಡ್ತೀವಿ ಅಂದ್ರೆ ಕಾಂಗ್ರೆಸ್ ನವರು 20ಕೆಜಿ ಕೊಡ್ತೀನಿ ಅಂತಾರೆ ಸುಳ್ಳು ಹೇಳೋರಿಗೆ ಏನು ಹೇಳೋದು,ಕಾಂಗ್ರೆಸ್ ಪಾರ್ಟಿ ಹೇಳಿದ್ದು ಮಾಡಿದ್ದಾರಾ ಗರೀಬಿ ಹಠಾವ್ ಅಂದಿದ್ರು, ರೋಟಿ ಕಪಡಾ ಮಕಾನ್ ಅಂದಿದ್ರು, ಅವೆಲ್ಲ ಆಗಿದ್ದಾವಾ?ಅವೆಲ್ಲ ಆಗಿದ್ರೆ ಇವತ್ತು ಯಾಕೆ 10 ಕೆಜಿ ಅಕ್ಕಿ ಕೊಡ್ತಿದ್ರು ಕಾಂಗ್ರೆಸ್ ಪಾರ್ಟಿ ಅಂದ್ರೆ ಸುಳ್ಳು […]

Advertisement

Wordpress Social Share Plugin powered by Ultimatelysocial