ಎಲ್‌ಪಿಜಿ ಬೆಲೆ, ಐಎಂಪಿಎಸ್‌ ಶುಲ್ಕ: ಫೆ.1ರಿಂದ ಬದಲಾಗುವ ನಿಯಮಗಳನ್ನು ತಿಳಿಯಿರಿ

ನಮ್ಮ ಸಾಮಾನ್ಯ ಜೀವನದಲ್ಲಿ ವೈಯಕ್ತಿಕ ಹಣಕಾಸು ಬಹಳ ಮುಖ್ಯವಾಗಿದೆ. ನಮ್ಮ ನಿರಂತರ ಜೀವನದ ವೈಯಕ್ತಿಕ ಹಣಕಾಸಿನ ಮೇಲೆ ಯಾವುದೇ ನಿಯಮ ಬದಲಾವಣೆಯು ಪ್ರಭಾವ ಬೀರಲಿದೆ. ಕೆಲವು ನಿಯಮ ಬದಲಾವಣೆಯು ನಮಗೆ ಸಹಕಾರಿಯಾದರೆ, ಕೆಲವು ಬದಲಾವಣೆಯಿಂದ ನಮ್ಮ ಜೇಬಿಗೆ ಕತ್ತರಿ ಬೀಳಲಿದೆ.ಫೆಬ್ರವರಿ 1 ರಿಂದ ಮಂಗಳವಾರದಿಂದ, ಸಾಮಾನ್ಯ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುವ ಕೆಲವು ಬ್ಯಾಂಕಿಂಗ್, ಹಣಕಾಸು ಸಂಬಂಧಿತ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಆದ್ದರಿಂದ, ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಇಲ್ಲವಾದರೆ ನಿಮ್ಮ ವೈಯಕ್ತಿಕ ಹಣಕಾಸಿನ ನಿರ್ವಹಣೆಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಈ ನಡುವೆ ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬಜೆಟ್ 2022 ಅನ್ನು ಮಂಡಿಸಲಿದ್ದಾರೆ. ಕೇಂದ್ರ ಸರ್ಕಾರದ ಈ ಬಜೆಟ್‌ ಕೂಡಾ ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.ಕಳೆದ ತಿಂಗಳು ಕೆಲವು ಬದಲಾವಣೆಗಳು ಆಗಿದೆ. ಕಾರುಗಳು ಬೆಲೆ ಅಧಿಕವಾಗಿದೆ. ಹಾಗೆಯೇ ಎಟಿಎಂ ವಹಿವಾಟಿನ ಮೇಲಿನ ಶುಲ್ಕವೂ ಅಧಿಕವಾಗಿದೆ. ಈ ತಿಂಗಳಿನಲ್ಲಿ ಎಲ್‌ಪಿಜಿ ಬೆಲೆ ಬದಲಾವಣೆಯಿಂದ ಹಿಡಿದು ಐಎಂಪಿಎಸ್‌ ವಹಿವಾಟುಗಳ ಮೇಲಿನ ಹೆಚ್ಚಿದ ಶುಲ್ಕದವರೆಗೆ ಹಲವಾರು ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಆಗಲಿದೆ. ಹಾಗಾದರೆ ಈ ತಿಂಗಳಿನಲ್ಲಿ ಯಾವೆಲ್ಲಾ ಬದಲವಾಣೆಗಳು ಆಗಿದೆ ಹಾಗೂ ಯಾವೆಲ್ಲಾ ಬದಲಾವಣೆಗಳು ಆಗಲಿದೆ ಎಂದು ತಿಳಿಯಲು ಮುಂದೆ ಓದಿ…ಎಸ್‌ಬಿಐ ಐಎಂಪಿಎಸ್‌ ವಹಿವಾಟು ಶುಲ್ಕಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಐಎಂಪಿಎಸ್‌ ವಹಿವಾಟು ಶುಲ್ಕವನ್ನು ಹೆಚ್ಚಳ ಮಾಡಿದೆ. ಗ್ರಾಹಕರು ಫೆಬ್ರವರಿ 1 ರಿಂದ ಹೊಸ ವಹಿವಾಟು ದರಗಳ ಪ್ರಕಾರ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬ್ಯಾಂಕ್ ಗ್ರಾಹಕರು IMPS ಮೂಲಕ ಈ ಸೌಲಭ್ಯದಲ್ಲಿ ಕನಿಷ್ಠ ಒಂದು ರೂಪಾಯಿಯಿಂದ 5 ಲಕ್ಷ ರೂ ವರ್ಗಾವಣೆ ಮಾಡಬಹುದಾಗಿದೆ. ಅಂದರೆ ಎಸ್‌ಬಿಐ ಹಣದ ವಹಿವಾಟುಗಳ ಮಿತಿಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿದೆ. ಆದರೆ ಶುಲ್ಕವನ್ನು ವಿಧಿಸುತ್ತದೆ. ರೂ 2 ಲಕ್ಷದಿಂದ ರೂ 5 ಲಕ್ಷದ ನಡುವಿನ ಐಎಂಪಿಎಸ್ ವಹಿವಾಟುಗಳಿಗೆ ರೂ 20 + ಜಿಎಸ್‌ಟಿ ಅನ್ನು ವಿಧಿಸಲಾಗುತ್ತದೆ ಎಂದು ಎಸ್‌ಬಿಐ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. 2 ಲಕ್ಷಕ್ಕಿಂತ ಕಡಿಮೆ ಮೊತ್ತದ 2 ಲಕ್ಷಕ್ಕಿಂತ ಕಡಿಮೆ ಮೊತ್ತದ IMPS ವಹಿವಾಟುಗಳಿಗೆ ಶುಲ್ಕ ಇರುವುದಿಲ್ಲ.ಫೆಬ್ರವರಿ 1, 2022 ರಿಂದ ತನ್ನ ಚೆಕ್ ಪಾವತಿ ನಿಯಮಗಳನ್ನು ಬ್ಯಾಂಕ್‌ ಆಫ್‌ ಬರೋಡಾ ಬದಲಾವಣೆ ಮಾಡಿದೆ. ಬ್ಯಾಂಕ್ ಆಫ್ ಬರೋಡಾ ಚೆಕ್‌ಗಳ ಮೂಲಕ ಮಾಡಿದ ಪಾವತಿಗಳಿಗೆ ಪಾಸಿಟಿವ್‌ ಪೇ ದೃಢೀಕರಣವನ್ನು ಕಡ್ಡಾಯಗೊಳಿಸಿದೆ. ಪಾಸಿಟಿವ್‌ ಪೇ ಮೂಲಕ ಚೆಕ್‌ನಲ್ಲಿ ಮೋಸವಾದರೆ ಪತ್ತೆ ಮಾಡಲಾಗುತ್ತದೆ. ಅದನ್ನು ಪಾವತಿ ಮಾಡದಂತೆ ತಡೆಯಲಾಗುತ್ತದೆ. ಇದರರ್ಥ ಪಾವತಿ ಮೊತ್ತವನ್ನು ಬದಲಾಯಿಸಿದ ಅಥವಾ ಕದ್ದ ಬಗ್ಗೆ ತಿಳಿಯಲು ಚೆಕ್‌ ಬಗ್ಗೆ ಪರಿಶೀಲನೆ ನಡೆಸುವುದು. ಚೆಕ್ ವಂಚನೆಯನ್ನು ನಿಲ್ಲಿಸಲು ಇದು ಪರಿಣಾಮಕಾರಿ ಮಾರ್ಗವಾಗಿದೆ. ಬ್ಯಾಂಕ್‌ ಆಫ್ ಬರೋಡಾದ ಈ ನಿಯಮವು 10 ಲಕ್ಷಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ.ಎಲ್‌ಪಿಜಿ ಬೆಲೆ ಬದಲಾವಣೆಪ್ರತಿ ತಿಂಗಳ ಮೊದಲ ದಿನದಂದು, ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಎಲ್‌ಪಿಜಿ ಬೆಲೆಗಳನ್ನು ನವೀಕರಿಸುತ್ತವೆ. ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಕಚ್ಚಾ ದರಗಳನ್ನು ಗಮನಿಸಿ ಈ ಬದಲಾವಣೆಯನ್ನು ಮಾಡಲಾಗುತ್ತದೆ. ಸಿಲಿಂಡರ್‌ಗಾಗಿ ಬುಕ್‌ ಮಾಡುವ ಮೊದಲು ಹೊಸ ದರವನ್ನು ನೀವು ಪರಿಶೀಲನೆ ಮಾಡುವುದು ಉತ್ತಮ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒತ್ತಡ ನಿವಾರಿಸಲು ಇದು ಬೆಸ್ಟ್‌ ಪ್ಲೇಸ್

Tue Feb 1 , 2022
ಕೋವಿಡ್-19 ಸಾಂಕ್ರಾಮಿಕ ರೋಗ ಜಗತ್ತನ್ನು ಆವರಿಸಿದ ಬಳಿಕ ಅನೇಕ ಜನರು ಆರೋಗ್ಯದತ್ತ ಗಮನ ಹರಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೈನಂದಿನ ಜೀವನದ ಒತ್ತಡದಿಂದ ಪಾರಾಗಲು, ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಾಜಾತನವನ್ನು ಅನುಭವಿಸಲು ಹಲವರು ಪ್ರವಾಸ ಕೈಗೊಳ್ಳಲು ಇಷ್ಟಪಡುತ್ತಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada   Please follow and like us:

Advertisement

Wordpress Social Share Plugin powered by Ultimatelysocial