ತಂದೆಯ ತಿಥಿ ದಿನವೇ ಮಗಳ ‘ದುರಂತ ಅಂತ್ಯ: ಅಡುಗೆ ಮಾಡುವ ವೇಳೆಯಲ್ಲಿ ನಡೆದ ಘಟನೆ , ಐವರ ಸ್ಥಿತಿ ಗಂಭೀರ ;

ಬೆಂಗಳೂರು: ತಂದೆಯ ತಿಥಿ ದಿನವೇ ಮಗಳು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೇ ವೇಳೇ ಐವರ ಸ್ಥಿತಿ ಚಿಂತಾಜನಕವಾಗಿದೆ. ಪರಮೇಶ್ವರಿ (42) ಮೃತ ಮಹಿಳೆಯಾಗಿದ್ದು, ಅವರು ತಮ್ಮ ತಂದೆಯ ತಿಥಿ ಕಾರ್ಯಕ್ಕೆ ಅಡುಗೆ ಮಾಡುವ ವೇಳೆಯಲ್ಲಿ ಬಳಕೆ ಮಾಡುತ್ತಿದ್ದ ಗ ಸಿಲಿಂಡರ್ ಬ್ಲ್ಯಾಸ್ಟ್ ಆಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಕಾಶಿನಾಥ್ ಎಂಬುವರು ಕಳೆದ ಆರು ವರ್ಷಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ನಿನ್ನೆ 6 ನೇ ವರ್ಷದ ಪುಣ್ಯಸ್ಮರಣೆ ಸಲುವಾಗಿ ಮನೆ ಮುಂದಿ ಅಡುಗೆ ಮಾಡುತ್ತಿದ್ದರು ಎನ್ನಲಾಗಿದ್ದು, ಈ ವೇಳೆಯಲ್ಲಿ ಮನೆಯಲ್ಲಿ ಪರಮೇಶ್ವರಿ ಸೌಭಾಗ್ಯ, ಶರವಣ, ಪರಮಶಿವಂ, ಭುವನೇಶ್ವರಿ, ಮಾಲಾ ಎಂಬುವರು ಗಾಯಗೊಂಡಿದ್ದರು, ಇದೇ ವೇಳೇ ಗಂಭಿರವಾಗಿ ಗಾಯಗೊಂಡಿದ್ದ ಪರಮೇಶ್ವರಿಯವರು ಚಿಕಿತ್ಸೆ ಫಲಕಾರಿಯಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನೂ ಗಾಯಾಳುಗಳಿಗೆ ವಿಕ್ಟೋರಿಯಾ ಬರ್ನಿಂಗ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಕೂಡ ಗಂಭಿರವಾಗಿದೆ ಎನ್ನಲಾಗಿದೆ. ಸದ್ಯ ಘಟನೆ ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೆಹಲಿಯ ಕನಿಷ್ಠ ತಾಪಮಾನ 10.2!!

Thu Feb 17 , 2022
ಗುರುವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನವು 10.2 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಸಿದೆ, ಇದು ಋತುವಿನ ಸಾಮಾನ್ಯಕ್ಕಿಂತ ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಸಾಪೇಕ್ಷ ಆರ್ದ್ರತೆಯು 8.30 ಕ್ಕೆ ಶೇಕಡಾ 86 ರಷ್ಟಿತ್ತು ಎಂದು ಅದು ಹೇಳಿದೆ. ಹವಾಮಾನವು ಮುಖ್ಯವಾಗಿ ಹಗಲಿನಲ್ಲಿ ಸ್ಪಷ್ಟವಾದ ಆಕಾಶವನ್ನು ಮುನ್ಸೂಚಿಸುತ್ತದೆ ಮತ್ತು ಗರಿಷ್ಠ ತಾಪಮಾನವು 26 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ. ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ‘ಕಳಪೆ’ […]

Advertisement

Wordpress Social Share Plugin powered by Ultimatelysocial