ಕೃಷಿ ವಿಜ್ಞಾನಿ ಎಂ.ಮಹಾದೇವಪ್ಪ

 

ಡಾ.ಎಂ.ಮಹಾದೇವಪ್ಪ ಭಾರತದಲ್ಲಿ ಹೈಬ್ರಿಡ್ ಭತ್ತದ ಯೋಜನೆಯ ಪಿತಾಮಹರಾಗಿ, ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿಗಳಾಗಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿ ಹೆಸರಾಗಿದ್ದವರು. ಇಂದು ಅವರ ಸಂಸ್ಮರಣಾ ದಿನ.
ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಖ್ಯಾತಿ ಹೊಂದಿದ್ದ ಮಹಾದೇವಪ್ಪ ಅವರು 1937ರ ಆಗಸ್ಟ್ 4ರಂದುಚಾಮರಾಜನಗರ ಜಿಲ್ಲೆಯ ಮಾದಾಪುರದಲ್ಲಿ ಜನಿಸಿದರು. ತಂದೆ ಮಾದಪ್ಪ. ತಾಯಿ ಪುಟ್ಟಬಸಮ್ಮ. ಸ್ಥಳೀಯ ಶಾಲೆಯಲ್ಲಿಯೇ ಕಲಿತ ಇವರು ನಂತರ ಮೈಸೂರು, ಕೊಯಮತ್ತೂರಿನಲ್ಲಿ ಉನ್ನತ ವ್ಯಾಸಂಗ ನಡೆಸಿದರು.ಮಹಾದೇವಪ್ಪನವರು ಮೈಸೂರಿನ ಸಿ.ಎಫ್.ಟಿ.ಆರ್.ಐ ನಲ್ಲಿ ಹಿರಿಯ ಸಂಶೋಧಕರಾಗಿ ಸೇವೆ ಸಲ್ಲಿಸಿ, ಬೆಂಗಳೂರಿನ ಕೃಷಿ ವಿವಿಯಲ್ಲಿ ಜೋಳ ಅಭಿವೃದ್ಧಿ ತಜ್ಞರಾಗಿ (ಬ್ರೀಡರ್) ಹಾಗೂ ಮಂಡ್ಯದ ವಿ.ಸಿ ಫಾರ್ಮನಲ್ಲಿ ಭತ್ತ ಸಸ್ಯ ವಿಜ್ಞಾನಿಯಾಗೆ ಸೇವೆ ಸಲ್ಲಿಸಿದರು.ಪಿಲಿಪೈನ್ಸ್ ನ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನೆ (1977-1980) ನಡೆಸಿದ ಮಹಾದೇವಪ್ಪನವರು ಮತ್ತೆ ಕರ್ನಾಟಕಕ್ಕೆ ಬಂದು ಹಲವು ಕಡೆ ಸೇವೆ ಸಲ್ಲಿಸಿ 1994 -2000 ಅವಧಿಯಲ್ಲಿ ಧಾರವಾಡ ಕೃಷಿವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು.
ಮಹಾದೇವಪ್ಪನವರು ಫಿಲಿಪೈನ್ಸ್ ಅಲ್ಲದೆ ಜಪಾನ್, ತೈವಾನ್, ಥೈಲ್ಯಾಂಡ್, ಮಲೇಷಿಯಾ, ಚೈನಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಅಮೆರಿಕಾ, ಕ್ಯೂಬಾ, ರಷ್ಯಾ, ಕೀನ್ಯಾ ದೇಶಗಳಲ್ಲಿ ಸಂಚರಿಸಿ ತಮ್ಮ ಸಂಶೋಧನೆ ಹಾಗೂ ಕಾರ್ಯವ್ಯಾಪ್ತಿಯನ್ನು ಜಗತ್ತಿನಾದ್ಯಂತ ವಿಸ್ತರಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕವಿತಾ ಗಿರೀಶ್ ಉತ್ಸಾಹಿ ಬರಹಗಾರ್ತಿ.

Mon Mar 6 , 2023
  ಮಾರ್ಚ್ 5 ಕವಿತಾ ಅವರ ಜನ್ಮದಿನ. ಮೂಲತಃ ಇವರು ಉತ್ತರ ಕನ್ನಡದ ಯಲ್ಲಾಪುರದವರು. ತಂದೆ ಮಹಾನ್ ವಿದ್ವಾಂಸರಾದ ಅನಂತ ವೈದ್ಯ ಅವರು. ಕವಿತಾ ತಮ್ಮ ಕುಟುಂಬದೊಂದಿಗೆ ಯುನೈಟೆಡ್ ಎಮಿರೇಟ್ಸ್ ದೇಶದ ಶಾರ್ಜಾ ನಗರದಲ್ಲಿ ನೆಲೆಸಿದ್ದಾರೆ.”ಓದುವುದು ನನ್ನ ಹವ್ಯಾಸ. ಓದಿನಿಂದ ಬರವಣಿಗೆ” ಎಂಬುದು ಕವಿತಾ ಅವರ ಸರಳ ಸುಸ್ಪಷ್ಟ ಮಾತು. ಅವರ ಓದೇ ಅವರಲ್ಲಿನ ಅನುಭೂತಿಗಳಿಗೆ ಅಭಿವ್ಯಕ್ತಿ ತಂದು, ಅವರನ್ನು ಬರಹಗಾರ್ತಿಯಾಗಿಸಿದೆ. ಕವಿತಾ ಅವರು ಹಲವು ನೀಳ್ಗತೆಗಳು, ಕವನಗಳು,‍ ಸಣ್ಣ […]

Advertisement

Wordpress Social Share Plugin powered by Ultimatelysocial