ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಮರಾಠಿ ಕಡ್ಡಾಯಕ್ಕೆ ಮಸೂದೆ ಅಂಗೀಕಾರ

ಮುಂಬೈ: ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಮರಾಠಿ ಬಳಕೆಯನ್ನು ಕಡ್ಡಾಯಗೊಳಿಸುವ ಮಸೂದೆಯನ್ನು ಮಹಾರಾಷ್ಟ್ರದ ವಿಧಾನಸಭೆ ಹಾಗೂ ಪರಿಷತ್‌ನಲ್ಲಿ ಅವಿರೋಧವಾಗಿ ಗುರುವಾರ ಅಂಗೀಕರಿಸಲಾಯಿತು.

 

ವಿಧಾನ ಪರಿಷತ್‌ನಲ್ಲಿ ಈ ವಿಷಯ ಕುರಿತು ಮಾತನಾಡಿದ ಸಚಿವ ಸುಭಾಷ್‌ ದೇಸಾಯಿ, ‘ಮಹಾರಾಷ್ಟ್ರ ಆಡಳಿತ ಭಾಷೆ ಕಾಯ್ದೆ-1964’ರ ಪ್ರಕಾರ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಮರಾಠಿ ಭಾಷೆ ಬಳಕೆ ಕಡ್ಡಾಯ ಇರಲಿಲ್ಲ.

ಈ ಲೋಪವನ್ನು ಸರಿಪಡಿಸುವ ಪ್ರಯತ್ನದ ಭಾಗವಾಗಿ ಮಸೂದೆಯನ್ನು ಅಂಗೀಕರಿಸಲಾಗಿದೆ’ ಎಂದರು.

‘ವಿದೇಶಗಳ ರಾಯಭಾರಿಗಳ ಜೊತೆ ಸಂವಹನ ಹಾಗೂ ಸರ್ಕಾರದ ನಿರ್ದಿಷ್ಟ ಕಾರ್ಯಗಳಿಗಾಗಿ ಇಂಗ್ಲಿಷ್‌ ಅಥವಾ ಹಿಂದಿ ಬಳಸಲು ಅನುಮತಿ ನೀಡಲಾಗಿದೆ’ ಎಂದರು.

ಬಿಜೆಪಿ ಶಾಸಕ ಯೋಗೇಶ್ ಸಾಗರ್ ಮಾತನಾಡಿ, ‘ಚುನಾವಣೆಗಳು ಹತ್ತಿರ ಬಂದಾಗ ಮರಾಠಿ ಬಗ್ಗೆ ಏಕೆ ಇಂಥ ಪ್ರೀತಿ ಕಂಡುಬರುತ್ತದೆ’ ಎಂದು ಪ್ರಶ್ನಿಸಿದರು. ಈ ಮಸೂದೆಯನ್ನು ಬೆಂಬಲಿಸುವುದಾಗಿ ಹೇಳಿದ ಅವರು, ಎಲ್ಲ ಕಡತಗಳು ಮರಾಠಿಯಲ್ಲಿಯೇ ಇರಬೇಕು ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೂ.4ಕೆ ನೀಲಿ ಬಿಕಿನಿ ಸೆಟ್ನಲ್ಲಿ ಪೂಲ್ನಲ್ಲಿ ತಣ್ಣಗಾಗುತ್ತಿದ್ದಂತೆ ತುಂಬಾ ಹಾಟ್ ಆಗಿದ್ದ, ಶನಯಾ ಕಪೂರ್!

Thu Mar 24 , 2022
ಶನಯಾ ಕಪೂರ್ ಅವರ ಸಾರ್ಟೋರಿಯಲ್ ಆಯ್ಕೆಗಳು ಯಾವಾಗಲೂ ಕದಿಯಲು ಯೋಗ್ಯವಾಗಿವೆ! ಅವಳು ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿರಲಿ, ಮದುವೆಗೆ ಹಾಜರಾಗುತ್ತಿರಲಿ ಅಥವಾ ಕೊಳದಲ್ಲಿ ತಣ್ಣಗಾಗಲಿ, ಫ್ಯಾಶನ್ ಸ್ಫೂರ್ತಿಯನ್ನು ಹೊರಹಾಕಲು ಅವಳು ಎಂದಿಗೂ ವಿಫಲವಾಗುವುದಿಲ್ಲ. ಬಿಕಿನಿಯಲ್ಲಿ ಅತ್ಯಾಕರ್ಷಕ ಚಿತ್ರವನ್ನು ಹಂಚಿಕೊಂಡಿರುವ ದಿವಾ ಈಗ ಮತ್ತೊಮ್ಮೆ ಇನ್‌ಸ್ಟಾಗ್ರಾಮ್‌ಗೆ ಬೆಂಕಿ ಹಚ್ಚಿದ್ದಾರೆ. ಸಂಜಯ್ ಕಪೂರ್ ಮತ್ತು ಮಹೀಪ್ ಕಪೂರ್ ಅವರ ಪುತ್ರಿ ಶನಯಾ ಅವರು ಸ್ಟೈಲಿಶ್ ನೀಲಿ ಬಿಕಿನಿಯಲ್ಲಿ ಚಿತ್ರಕ್ಕೆ ಪೋಸ್ ನೀಡಿದ್ದರಿಂದ ಸಂಪೂರ್ಣವಾಗಿ […]

Advertisement

Wordpress Social Share Plugin powered by Ultimatelysocial