ಮಹೇಂದ್ರ:1.44 ಲಕ್ಷ ರೂ. ಗೆ ವಿದ್ಯುತ್ ವಾಹನ ಬಿಡುಗಡೆ ಮಾಡಿಧೆ;

“ಇಂಧನ ಚಾಲಿತ ತ್ರಿಚಕ್ರ ವಾಹನಗಳಿಗೆ ಹೋಲಿಸಿದರೆ ವಿದ್ಯುತ್ ಚಾಲಿತ ತ್ರಿಚಕ್ರ ವಾಹನಗಳ ಕಾರ್ಯಾಚರಣೆಯಿಂದ ಗಮನಾರ್ಹ ವೆಚ್ಚ ಉಳಿತಾಯದ ಲಾಭವಾಗಲಿದ್ದು, ಕೊನೆ ಮೈಲಿ ಸರಬರಾಜಿನ ವಲಯವು ವಿದ್ಯುತ್ ಚಾಲಿತ ತ್ರಿಚಕ್ರ ವಾಹನಗಳನ್ನು ಅತ್ಯುತ್ತಮವಾಗಿ ಅಳವಡಿಸಿಕೊಳ್ಳುತ್ತಿದೆ. ನಾವೀಗ ಈ ವಲಯದಲ್ಲಿನ ಗ್ರಾಹಕರ ಅವಶ್ಯಕತೆಯನ್ನು ಪರಿಗಣಿಸಿ ವಿದ್ಯುತ್ ಚಾಲಿತ ತ್ರಿಚಕ್ರ ವಾಹನ ಇ-ಆಲ್ಫಾ ಕಾರ್ಗೋವನ್ನು ಬಿಡುಗಡೆ ಮಾಡುತ್ತಿದ್ದೇವೆ” ಎಂದು ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿಯ ಕಾರ್ಯನಿರ್ವಹಣಾಧಿಕಾರಿ ಸುಮನ್ ಮಿಶ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡೀಸೆಲ್ ಆಧಾರಿತ ಸರಕು ಸಾಗಣೆ ತ್ರಿಚಕ್ರ ವಾಹನಕ್ಕೆ ಹೋಲಿಸಿದರೆ ವಿದ್ಯುತ್ ಚಾಲಿತ ತ್ರಿಚಕ್ರ ವಾಹನ ಬಳಕೆಯಿಂದ 60,000 ರೂ. ಉಳಿತಾಯ ಮಾಡಬಹುದಾಗಿದೆ. ಈ ವಾಹನದ ಚಾಲನೆಯಿಂದ ಪ್ರತಿ ಕಿಲೊಮೀಟರ್‌ಗೆ ಕೇವಲ 59 ಪೈಸೆ ಮಾತ್ರ ವೆಚ್ಚವಾಗಲಿದ್ದು, ವಾಹನದ ಮಾಲೀಕರು ಇಂಧನದ ವೆಚ್ಚವಾಗಿ ಪ್ರತಿ ವರ್ಷ 60,000 ರೂ. ಉಳಿತಾಯ ಮಾಡಬಹುದಾಗಿದೆ. ಸರಕು ಸಾಗಣೆ ವಲಯದಲ್ಲಿ ಸುಸ್ಥಿರ ಹಾಗೂ ಮಾಲಿನ್ಯರಹಿತ ಪರಿಹಾರವನ್ನು ಒದಗಿಸಲು ಇ-ಆಲ್ಫಾ ಕಾರ್ಗೊ ತ್ರಿಚಕ್ರ ವಾಹನ ಉದ್ದೇಶಿಸಿದೆ ಎಂದೂ ಅವರು ಹೇಳಿದ್ದಾರೆ.

ಸ್ಕ್ರೀನ್​ ಶಾಟ್​ ತೆಗೆದರೆ ನೊಟಿಫಿಕೇಶನ್ ಬರುತ್ತೆ! ಇದೇನಿದು ಹೊಸ ಫೀಚರ್​​?
ಪ್ರಮುಖ ಮೆಟ್ರೋ ನಗರಗಳಲ್ಲಿ ಕೊನೆ ಮೈಲಿಯ ಸಂಪರ್ಕ ಸಾಧಿಸಲು ಇ-ಆಲ್ಫಾ ಕಾರ್ಗೊ ತ್ರಿಚಕ್ರ ವಾಹನವು ಅತ್ಯುತ್ತಮ ಆಯ್ಕೆಯಾಗಿದೆ. ಇದು ಅತ್ಯಾಕರ್ಷಕ ಹೊರವಿನ್ಯಾಸವನ್ನು ಹೊಂದಿದ್ದು, ಸದೃಢ ಕವಚ ಹೊಂದಿದೆ. ಈ ವಾಹನದಲ್ಲಿ ವಿಸ್ತಾರವಾದ ಕ್ಯಾಬಿನ್ ಸ್ಥಳಾವಕಾಶ ಒದಗಿಸಲಾಗಿದ್ದು, ಚಾಲಕರು, ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಬಹುದಾಗಿದೆ. ವಾಹನವು ಅತ್ಯುತ್ತಮ ಸಸ್ಪೆನ್ಷನ್ ಹಾಗೂ ಚಾಸಿಸ್ ಹೊಂದಿದೆ ಎಂದು ಕಂಪನಿಯು ಹೇಳಿಕೊಂಡಿದೆ.
ಈ ಮಾದರಿಯ ವಾಹನದಲ್ಲಿ ಗರಿಷ್ಠ 310 ಕೆಜಿ ಸರಕನ್ನು ತುಂಬಬಹುದಾಗಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 80 ಕಿಮೀ ದೂರವನ್ನು ಕ್ರಮಿಸಲಿದೆ. ಇ-ಆಲ್ಫಾ ಕಾರ್ಗೊ ಅತ್ಯುನ್ನತ 15 ಕಿಲೋ ವ್ಯಾಟ್ ಸಾಮರ್ಥ್ಯ ಹೊಂದಿದ್ದು, ಪ್ರತಿ ಗಂಟೆಗೆ 25 ಕಿಮೀ ವೇಗದಲ್ಲಿ ಚಲಾಯಿಸಬಹುದಾಗಿದೆ.
ಇ-ಆಲ್ಫಾ ಕಾರ್ಗೊ ವಾಹನವು 48 ವೋಲ್ಟ್/15 ಆಯಂಪ್ಸ್‌ ಚಾರ್ಜರ್ ಹೊಂದಿದ್ದು, ಮೊಬೈಲ್ ಫೋನ್ ಚಾರ್ಜ್ ಮಾಡುವಷ್ಟೇ ಸುಲಭವಾಗಿ ಈ ವಾಹವನ್ನು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಇ-ಆಲ್ಫಾ ಕಾರ್ಗೊ ತ್ರಿಚಕ್ರ ವಾಹನವು ಸಂಪೂರ್ಣ ಡಿಜಿಟಲ್ ಇನ್ಸುಟ್ರುಮೆಂಟ್ ಕ್ಲಸ್ಟರ್ ಹೊಂದಿದ್ದು, ಈ ಸಾಧನವು ಚಾರ್ಜಿಂಗ್ ಸ್ಥಿತಿ, ಶ್ರೇಣಿ, ವೇಗ ಹಾಗೂ ಇನ್ನಿತರ ಉಪಯುಕ್ತ ಮತ್ತು ಮುಖ್ಯ ವಿಷಯಗಳನ್ನು ಒಂದೇ ನೋಟಕ್ಕೆ ಪ್ರದರ್ಶಿಸುತ್ತದೆ. ಸರಕು ಸಾಗಣೆ ವಲಯದ ಗ್ರಾಹಕರ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅತಿ ಉದ್ದ ಮತ್ತು ಅಗಲದ ಹರಿವಾಣವನ್ನು ಅಳವಡಿಸಲಾಗಿದೆ.
ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿಯು ಮಹೀಂದ್ರಾ & ಮಹೀಂದ್ರಾ ಸಂಸ್ಥೆಯ ಅಂಗ ಸಂಸ್ಥೆಯಾಗಿದೆ.
ಈ ವಿದ್ಯುತ್ ಚಾಲಿತ ತ್ರಿಚಕ್ರ ವಾಹನವನ್ನು ದೇಶಾದ್ಯಂತ 300 ಮಳಿಗೆಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಇದಲ್ಲದೆ ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಇ-ಆಲ್ಫಾ ಕಾರ್ಗೊ ತ್ರಿಚಕ್ರ ವಾಹನದ ಮೇಲೆ ಒಂದು ವರ್ಷ ಅಥವಾ ಒಂದು ವರ್ಷದೊಳಗಿನ ಅನಿಯಮಿತ ಕಿಮೀ ಚಾಲನೆಗೆ ವಾರಂಟಿ ನೀಡಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

PAN CARD:ನಿಮ್ಮ PAN ಕಾರ್ಡ್ನಲ್ಲಿನ ಫೋಟೋ ತುಂಬ ಹಳೆಯದಾಗಿದ್ದರೆ ಈ ರೀತಿ ಹೊಸ ಫೋಟೋ ಬದಲಾಯಿಸಬವುದು;

Tue Feb 1 , 2022
ನಿಮ್ಮ ಪ್ಯಾನ್ ಕಾರ್ಡ್ನಲ್ಲಿ ನಿಮ್ಮ ಫೋಟೋ ಮತ್ತು/ಅಥವಾ ನಿಮ್ಮ ಸಹಿಗೆ ನೀವು ಹೇಗೆ ಮುಂದುವರಿಯಬಹುದು ಮತ್ತು ಬದಲಾವಣೆಗಳನ್ನು ಮಾಡಬಹುದು ಎಂಬುದು ಇಲ್ಲಿದೆ. ಪರ್ಮನೆಂಟ್ ಅಕೌಂಟ್ ನಂಬರ್ (PAN) ಎನ್ನುವುದು ವ್ಯಕ್ತಿಯ ಆರ್ಥಿಕ ಇತಿಹಾಸವನ್ನು ಸಂಗ್ರಹಿಸುವ ಒಂದು ಅನನ್ಯ ಆಲ್ಫಾನ್ಯೂಮರಿಕ್ ಕೋಡ್ ಆಗಿದೆ. ಇದನ್ನು ಗುರುತಿನ ಪುರಾವೆಯಾಗಿಯೂ ಬಳಸಬಹುದು. ಹೀಗಾಗಿ ದಾಖಲೆಯಲ್ಲಿ ಸರಿಯಾದ ಮಾಹಿತಿ ಇರುವುದು ಅತೀ ಅಗತ್ಯ. PAN ನಲ್ಲಿ ಫೋಟೋ ಮತ್ತು ಸಹಿ ಬಹಳ ಮುಖ್ಯ. ಏಕೆಂದರೆ ಸಾಲ, […]

Advertisement

Wordpress Social Share Plugin powered by Ultimatelysocial